Advertisement
ಹೆಬ್ರಿ: ಸುಮಾರು 20 ಎಕರೆ ಜಾಗದಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ನಿರ್ಮಾಣಗೊಂಡು ವರ್ಷಗಳು ಕಳೆದರೂ ಇನ್ನೂ ಕೂಡ ಉದ್ಘಾಟನೆಗೆ ದಿನ ಕೂಡಿ ಬಂದಿಲ್ಲ.
ಉಡುಪಿ ಜಿಲ್ಲೆಯಲ್ಲಿ ಎರಡು ಟ್ರೀಪಾರ್ಕ್‌ಗಳಿಗೆ ಅನುದಾನ ಸಿಕ್ಕಿತ್ತು. ಅದರಂತೆ ಮಣಿಪಾಲ ಬಡಗುಬೆಟ್ಟಿನಲ್ಲಿ ಈಗಾಗಲೇ ಟ್ರೀಪಾರ್ಕ್ ಉದ್ಘಾಟನೆಗೊಂಡಿದೆ. ಆದರೆ ಹೆಬ್ರಿಯ ಪಾರ್ಕ್ ಕಾಮಗಾರಿ ಮುಗಿದರೂ ಉದ್ಘಾಟನೆಯಾಗಿಲ್ಲ. ಇದು ಪ್ರಕೃತಿ ಪ್ರಿಯರಿಗೆ ಬೇಸರ ತಂದಿದೆ.
Related Articles
ಹಿಂದೆ ಈ ಪ್ರದೇಶವನ್ನು ಹೆಬ್ಬೇರಿ ಉದ್ಯಾನವನ್ನಾಗಿ ಮಾಡುವ ಉದ್ದೇಶದಿಂದ ಇಲ್ಲಿನ ಗ್ರಾಮ ಅರಣ್ಯ ಸಮಿತಿ ಗುದ್ದಲಿ ಪೂಜೆ ನೆರವೇರಿಸಿ ಶ್ರಮದಾನ ಮಾಡಿ ಯೋಜನೆ ಚಾಲ್ತಿಯಲ್ಲಿರಿಸಿದ್ದು 2016 ರಲ್ಲಿ ಜಿ.ಪಂ. ಅನುದಾನದಲ್ಲಿ ಬಾವಿ, ಪಂಪ್‌ಶೆಡ್, ಆವರಣ ಗೋಡೆ ನಿರ್ಮಾಣವಾಗಿತ್ತು.
Advertisement
ಪ್ರವಾಸಿಗರ ದಂಡುಪಾರ್ಕ್ ಕಾಮಗಾರಿ ಮುಗಿಯುತ್ತಿದ್ದಂತೆಯೇ ವಿವಿಧೆಡೆಗಳಿಂದ ಪ್ರವಾಸಿಗರು ಇತ್ತ ಮುಖ ಮಾಡಿದ್ದು ಯಾವುದೇ ಪ್ರವೇಶ ಶುಲ್ಕವಿಲ್ಲದೆ ಪಾರ್ಕ್‌ನ ಒಳಗೆ ಪ್ರವೇಶಿಸುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಸ್ಥಳೀಯರು ವಾಕಿಂಗ್‌ಗೆ ಕೂಡ ಆಗಮಿಸುತ್ತಿದ್ದಾರೆ. ವಸ್ತುಗಳಿಗೆ ಹಾನಿ
ಪಾರ್ಕ್‌ಗೆ ಸೂಕ್ತ ಬಂದೋಬಸ್ತ್ ಕಲ್ಪಿಸದೇ ಇರುವುದರಿಂದ ಇಲ್ಲಿಗೆ ಆಗಮಿಸುವ ಕೆಲವರು ವಸ್ತುಗಳಿಗೆ ಹಾನಿಗೆಡವಿದ್ದಾರೆ. ಈ ಕಾರಣಕ್ಕೆ ಇಲಾಖೆ ಒಂದು ಬಾರಿ ಪ್ರವೇಶ ನಿಷೇಧಿಸಿತ್ತು. ಆದರೆ ಮತ್ತೆ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಪಾರ್ಕ್ ಭೇಟಿಗೆ ಅನುವು ಮಾಡಿಕೊಡಲಾಗಿದೆ. ಪಾರ್ಕ್ ಉದ್ಘಾಟನೆಗೆ ದಿನ ನಿಗದಿಯಾಗಿದ್ದರೂ ಜನಪ್ರತಿನಿಧಿಗಳಿಗೆ ಸಮಯವಿಲ್ಲದೆ ಕಾರ್ಯಕ್ರಮ ರದ್ದಾಗುತ್ತಿದೆ. ಹೀಗೆಯೇ ದಿನಗಳು ಕಳೆಯುತ್ತಿದ್ದರೆ ಮುಂದೆ ಉದ್ಘಾಟನೆ ಯಾವಾಗ ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ. ಪ್ರವೇಶ ದರ ನಿಗದಿಯಾಗಿಲ್ಲ
ಪಾರ್ಕ್ ಒಳಪ್ರವೇಶಕ್ಕೆ ದರ ನಿಗದಿ ಇನ್ನೂ ಆಗಿಲ್ಲ. ಪಾರ್ಕ್ ನಿರ್ವಹಣೆಯ ಬಗ್ಗೆ ಒಂದು ಸಮಿತಿ ರಚನೆಯಾದ ಬಳಿಕ ಎಲ್ಲರೊಂದಿಗೆ ಚರ್ಚಿಸಿ ಪ್ರವೇಶ ದರ ನಿಗದಿಯಾಗಬೇಕಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಕ್‌ನಲ್ಲಿ ಏನೇನಿದೆ ?
ಪ್ರಾಕೃತಿಕ ರಚನೆಯ ಆಕರ್ಷಕ ಮಹಾದ್ವಾರ, ಔಷಧ ಸಸ್ಯಗಳ ವನ, ಪಾರಾಗೋಲಾ, ಟೆಂಟ್ ಹೌಸ್, 1,600 ಮೀ. ಉದ್ದದ ಎರಡು ವಾಕಿಂಗ್ ಟ್ರಾÂಕ್, ಪ್ರಾಕೃತಿಕ ವನ, ಮಕ್ಕಳು ಆಟವಾಡಲು ವ್ಯವಸ್ಥೆ, ವಿಶ್ರಾಂತಿ ತಾಣ, ಬೆಂಚ್, ರೋಪ್ ವೇ, ವೀಕ್ಷಣ ಗೋಪುರ, ಸಭಾಂಗಣ, ನೈಸರ್ಗಿಕ ಪಥ, ಪಕ್ಷಿಗಳ ವೀಕ್ಷಣೆಗೆ ವ್ಯವಸ್ಥೆ ಇದೆ. 20 ಎಕರೆ ಜಾಗಕ್ಕೆ ಆವರಣ ಗೋಡೆ, ರಾತ್ರಿಗೆ ವರ್ಣರಂಜಿತ ಬೆಳಕು ಮೊದಲಾದ ಕಾಮಗಾರಿಯ ಮುಂದಿನ ಐದು ವರ್ಷದಲ್ಲಿ ಹಂತ ಹಂತವಾಗಿ ಪೂರ್ಣಗೊಳ್ಳಲಿದೆ. ಶೀಘ್ರ ಉದ್ಘಾಟನೆ
ಉದ್ಘಾಟನೆ ವಿಚಾರದಲ್ಲಿ ಈಗಾಗಲೇ ಶಾಸಕರಲ್ಲಿ ಮಾತನಾಡಿದ್ದು, ಶೀಘ್ರ ದಿನ ನಿಗದಿ ಮಾಡುವ ಬಗ್ಗೆ ತಿಳಿಸಿದ್ದಾರೆ. ಜನರಿಗೆ ತೊಂದರೆಯಾಗಬಾರದೆಂದು ಒಳಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಇನ್ನು 15 ದಿನಗಳಲ್ಲಿ ಪಾರ್ಕ್ ಲೋಕಾರ್ಪಣೆಗೊಳ್ಳಲಿದೆ.
-ಮುನಿರಾಜು
ವಲಯ ಅರಣ್ಯ ಅಧಿಕಾರಿ, ಹೆಬ್ರಿ ನಿರ್ವಹಣೆ ಕಷ್ಟ
ಪಾರ್ಕ್ ಒಳಗೆ ಈಗಾಗಲೇ ಸಾರ್ವಜನಿಕರು ಪ್ರವೇಶಿಸುತ್ತಿದ್ದು ಇದರಿಂದ ಸ್ವತ್ಛತೆ ಕಾಪಾಡುವುದು ಕಷ್ಟವಾಗಿದೆ. ಹಲವಾರು ಬಾರಿ ಜನಪ್ರತಿನಿಧಿಗಳಲ್ಲಿ ಉದ್ಘಾಟನೆ ಬಗ್ಗೆ ತಿಳಿಸಿದರೂ ಇನ್ನೂ ಕಾಲ ಕೂಡಿ ಬಂದಿಲ್ಲ. ನಿರ್ವಹಣೆ ಕಷ್ಟವಾಗುತ್ತಿದೆ. ಇನ್ನಾದರೂ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಲಿ.
-ಜಯಕರ ಪೂಜಾರಿ,
ಅಧ್ಯಕ್ಷರು,ಗ್ರಾಮ ಅರಣ್ಯ ಸಮಿತಿ ಹೆಬ್ರಿ ಇಲಾಖೆ ನಿರ್ಲಕ್ಷ್ಯ
ಬಡಗುಬೆಟ್ಟು ಪಾರ್ಕ್‌ನಲ್ಲಿ 20 ರೂ. ಪ್ರವೇಶದರವನ್ನು ಪಡೆಯುತ್ತಿದ್ದಾರೆ. ಆದರೆ ಹೆಬ್ರಿ ಪಾರ್ಕ್ ನಿರ್ಮಾಣಗೊಂಡು ವರ್ಷ ಕಳೆದರೂ ಇನ್ನೂ ಉದ್ಘಾಟನೆ ಮಾಡದೇ ಇಲಾಖೆಗೆ ಬರುವ ಆದಾಯದ ಕಡೆ ನಿರ್ಲಕ್ಷ ಮಾಡಲಾಗುತ್ತಿದೆ.
-ಹರೀಶ್,
ಸ್ಥಳೀಯರು – ಹೆಬ್ರಿ ಉದಯಕುಮಾರ್ ಶೆಟ್ಟಿ