Advertisement
ರಾ.ಹೆದ್ದಾರಿ 66ರಲ್ಲಿ ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾ.ಪಂ. ಸಮೀಪದಿಂದ ಎಂಬ್ಯಾಕ್ ಮೆಂಟ್ ಕಾಮಗಾರಿ ನಡೆಯುತ್ತಿರುವುದ ರಿಂದ ರಾ.ಹೆ.ಯ ವಾಹನಗಳಿಗೆ ಸಂಚರಿಸಲು ಒನ್‌ವೇ ಮಾರ್ಗವಾಗಿ ಎರಡು ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ಕುಂದಾಪುರ ಕಡೆಯಿಂದ ಬರುವ ವಾಹನಗಳು ಸರಕಾರಿ ಪದವಿ ಪೂರ್ವ ಕಾಲೇಜು ಮಾರ್ಗವಾಗಿ ಪ್ರಯಾಣಿಸಬೇಕಾಗಿದೆ. ಇಲ್ಲಿನ ಎಂಬ್ಯಾಕ್‌ವೆುಂಟ್‌ನ ಕೊನೆಯಲ್ಲಿ ರಸ್ತೆಯು ಕುಸಿದು ಜರ್ಜರಿತವಾಗಿದ್ದು ಡಾಮರು ಮತ್ತು ಜಲ್ಲಿ ಕಲ್ಲುಗಳು ಒಂದು ಕಡೆಗೆ ಸರಿದು ಗುಡ್ಡದ ರೀತಿಯಲ್ಲಿ ರಾಶಿ ಬಿದ್ದಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ.
ಎಂಬ್ಯಾಕ್‌ವೆುಂಟ್ ಕಾಮಗಾರಿಯ ಸನಿಹದಲ್ಲೆ ವಾಹನಗಳು ಬೈಂದೂರು ಮಾರ್ಗವಾಗಿ ಸಂಚರಿಸಲು ಸರ್ವಿಸ್ ರಸ್ತೆಯಿಂದ ಚತುಷ್ಪಥ ರಸ್ತೆಗೆ ಬಂದು ಕೂಡುವುದರಿಂದ ಎಂಬ್ಯಾಕ್ ಮೆಂಟ್‌ನ ಕೊನೆಯಲ್ಲಿ ತಿರುವು ಉಂಟಾಗಿದೆ ಇಲ್ಲಿಯೇ ರಸ್ತೆ ಕುಸಿದು ಹೋಗಿರುವುದರಿಂದ ವಾಹನ ಗಳು ಸುಗಮವಾಗಿ ಸಂಚರಿಸಲು ಕಷ್ಟಕರವಾಗಿದೆ. ಅಪಾಯ ಸಾಧ್ಯತೆ
ತಿರುವಿನಲ್ಲಿಯೇ ರಸ್ತೆ ಕುಸಿದು ಡಾಮರು ಒಂದೆಡೆ ರಾಶಿ ಯಾಗಿರುವುದರಿಂದ ವಾಹನ ಸವಾರರು ಎಚ್ಚರ ತಪ್ಪಿದರೆ ಬೀಳುವ ಪರಿಸ್ಥಿತಿ ತಲೆದೋರಿದೆ. ರಾತ್ರಿ ಹೊತ್ತು ವೇಗವಾಗಿ ಸಂಚರಿಸುವ ವಾಹನಗಳಿಗೆ ರಸ್ತೆ ಕುಸಿದಿರುವ ಬಗ್ಗೆ ಗುರುತಿಸಲು ಸಾಧ್ಯವಾಗದೇ ಹೋದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುವುದು ವಾಹನ ಸವಾರರ ಅಭಿಪ್ರಾಯ.
Related Articles
ರಾ. ಹೆದ್ದಾರಿಯಲ್ಲಿ ಉಂಟಾಗಿರುವ ಕುಸಿತದಿಂದ ಅನಾಹುತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನ ಹರಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement