Advertisement

ಹಟ್ಟಿಕುದ್ರು ಜನರಿಗೆ ಉಪ್ಪು ನೀರೇ ಗತಿಯೇ?

01:00 AM Feb 08, 2019 | Team Udayavani |

ಬಸ್ರೂರು: ಹಟ್ಟಿಕುದ್ರು ಪ್ರದೇಶ ನೀರಿನಿಂದ ಆವೃತವಾಗಿದ್ದರೂ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಬಸ್ರೂರು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹಟ್ಟಿಕುದ್ರುವಿನಲ್ಲಿ 278 ಕುಟುಂಬಗಳಿದ್ದು 1,445 ಜನ ವಾಸಿಸುತ್ತಿದ್ದಾರೆ. ಆದರೆ ಇವರೆಲ್ಲರೂ ಸಿಹಿ ನೀರು ಕಾಣದೆ ಪರಿತಪಿಸುತ್ತಿದ್ದಾರೆ.

Advertisement

ಉಪ್ಪು ನೀರೇ ಗತಿ!

ಬಸ್ರೂರಿನಿಂದ ಹಟ್ಟಿಕುದ್ರುವಿಗೆ ಹೋಗಲು ಮಂಡಿಕೇರಿಯಲ್ಲಿ ದೋಣಿ ದಾಟಬೇಕು. ಇಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆಯೂ ಇದ್ದು, 30 ವರ್ಷಗಳಿಂದ ಸಿಹಿ ನೀರು ಲಭ್ಯವಿಲ್ಲ. ಬಳ್ಕೂರು-ಗುಲ್ವಾಡಿ ಮಧ್ಯೆ ವೆಂಟೆಡ್‌ ಡ್ಯಾಂ ನಿರ್ಮಾಣದ ನಂತರ ಈ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಇಲ್ಲಿಯ ಜನ.

ಹಟ್ಟಿಕುದ್ರುವಿಗೆ ಸಿಹಿ ನೀರು ಒದಗಿಸಲು ಡ್ಯಾಂ ನಿರ್ಮಾಣದ ಬಳಿಕ ಪೈಪ್‌ಗ್ಳನ್ನು ಹಾಕುವ ಯತ್ನ ಮಾಡಿದ್ದರೂ, ಕೆಲವರು ಗದ್ದೆಯಲ್ಲಿ ಪೈಪ್‌ ಹಾಕಲು ಬಿಡದಿದ್ದರಿಂದ ಸಿಹಿ ನೀರು ಒದಗಿಸುವ ಯತ್ನ ಅಲ್ಲಿಗೇ ನಿಂತು ಹೋಯಿತು.

ಪ್ರತಿ ಮನೆಗೆ 300 ಲೀ. ನೀರು

Advertisement

ಉಪ್ಪು ನೀರು ಕುಡಿಯಲು ಸಾಧ್ಯವಿಲ್ಲದಿರುವುದರಿಂದ ಕುಡಿಯುವ ನೀರಿನ ಗುಣಮಟ್ಟದ ವರದಿಯನ್ನು ಸಹಾಯಕ ಕಾರ್ಯನಿರ್ವಾಹಕರಿಂದ ಕೇಳಲಾಗಿದೆ. ಅವರಿಂದ ವರದಿ ಬಂದ ತಕ್ಷಣ ಗ್ರಾ.ಪಂ. ವತಿಯಿಂದ ಟ್ಯಾಂಕರ್‌ ಮೂಲಕ ಪ್ರತಿ ಮನೆಗೆ ಅಂದಾಜು 300ಲೀ. ನಂತೆ ಸರಬರಾಜು ಮಾಡಲಾಗುವುದೆಂದು ಗ್ರಾ.ಪಂ.ನವರು ಹೇಳುತ್ತಾರೆ. ಆದರೆ ಇದನ್ನು ಸಾಗಿಸಲೂ ಸುತ್ತು ಬಳಸಿ ಹಟ್ಟಿಯಂಗಡಿ ಮೂಲಕ ಹಟ್ಟಿಕುದ್ರುವಿಗೆ ತಲುಪಿಸಬೇಕಾಗಿದೆ.

ರೈಲ್ವೇ ಇಲಾಖೆ ಅನುಮತಿ ಬೇಕು

ಆನಗಳ್ಳಿಯಿಂದ ಹಟ್ಟಿಕುದ್ರು ಮಾರ್ಗವಾಗಿ ಸಾಗುವ ಕೊಂಕಣ ರೈಲ್ವೆಯ ಸೇತುವೆ ಮೂಲಕ ಪೈಪ್‌ ಹಾಕಿ ನೀರು ಸಾಗಿಸಲು ಅನುದಾನ ಮಂಜೂರಾದರೂ ಕೊಂಕಣ ರೈಲ್ವೆ ಇಲಾಖೆ ಅನುಮತಿ ಬೇಕು. ಈ ನೀರು ಕುಡಿಯುವುದಕ್ಕೆ ಮಾತ್ರ. ಕೃಷಿ ಉದ್ದೇಶಕ್ಕೆ ಉಪ್ಪು ನೀರೇ ಗತಿಯಾಗಿದೆ.

-ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next