Advertisement
ಭಟ್ಕಳದಿಂದ ಕುಂದಾಪುರ ಮಾರ್ಗ ವಾಗಿ ಸಂಚರಿಸುತ್ತಿದ್ದ ಕ್ರೂಸರ್ ವಾಹನವು ಶಾಲೆಬಾಗಿಲು ಸಮೀಪ ರಸ್ತೆ ಮಧ್ಯದ ಡಿವೈಡರ್ ಮೇಲೆ ಸಾಗಿ ಅಲ್ಲಿ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ವಿರುದ್ಧ ರಸ್ತೆಯಲ್ಲಿ ಪಲ್ಟಿಯಾಗಿದೆ. ಚಾಲಕ ಗಾಯಗೊಂಡಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ನಿರ್ವಾಹಕನಿಗೆ ಗಾಯವಾಗಿಲ್ಲ. ವಾಹನ ಸಂಪೂರ್ಣ ಜಖಂಗೊಂಡಿದೆ.
ಹೆದ್ದಾರಿಯ ಡಿವೈಡರ್‌ನಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಲಾಗಿದ್ದು, ವಾಹನ ಢಿಕ್ಕಿ ಹೊಡೆದ ರಭಸಕ್ಕೆ ತುಂಡಾಗಿ ರಸ್ತೆಗೆ ಬಿದ್ದಿದೆ. ಈ ಸಮಯದಲ್ಲಿ ಯಾವುದೇ ವಾಹನ ಅಥವಾ ಪಾದಚಾರಿಗಳು ಇರಲಿಲ್ಲವಾದ್ದರಿಂದ ಸಂಭವನೀಯ ದೊಡ್ಡ ಅನಾಹುತ ತಪ್ಪಿದೆ. ಅಪಘಾತದಿಂದಾಗಿ ಸ್ವಲ್ಪಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ಸಾರ್ವಜನಿಕರು ವಾಹನವನ್ನು ಬದಿಗೆ ಸರಿಸಿದ ಬಳಿಕ ವಾಹನಗಳ ಸಂಚಾರ ಸುಗಮವಾಯಿತು.