Advertisement

ಕೋಟದ ಹಲವು ಕಡೆ ಸೆಲೂನ್‌, ರಿಕ್ಷಾ, ಅಂಗಡಿ ಸೇವೆಗಳು ಸ್ವಯಂಪ್ರೇರಿತ ಬಂದ್‌

01:54 AM Jul 07, 2020 | Sriram |

ಕೋಟ: ಕೋಟ ಸುತ್ತ-ಮುತ್ತ ಕೋವಿಡ್ ವೈರಸ್‌ ವ್ಯಾಪಿಸುತ್ತಿರುವ ಕಾರಣದಿಂದಾಗಿ ಇಲ್ಲಿನ ಹಲವು ಕಡೆ ಸೆಲೂನ್‌ ಶಾಪ್‌, ರಿಕ್ಷಾ, ಅಂಗಡಿಗಳು ಸೋಮವಾರದಿಂದ ಸ್ವಯಂಪ್ರೇರಿತ ಬಂದ್‌ ಆರಂಭಿಸಿವೆ.

Advertisement

ಇಲ್ಲಿನ ಹೊಟೇಲ್‌ ಮಾಲಕ ಹಾಗೂ ಸಿಬಂದಿ, ದಿನಸಿ ಅಂಗಡಿ ಮಾಲಕನಕುಟುಂಬ ಸದಸ್ಯರು, ಸಾಲಿಗ್ರಾಮ ಚೇಂಪಿಯ ಮೆಡಿಕಲ್‌ ರೆಪ್‌ ಸಹಿತ 11ಮಂದಿಗೆ ಸೋಂಕು ತಗಲಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಸ್ವಯಂಪ್ರೇರಿತ ಬಂದ್‌ ನಡೆಸಲಾಗುತ್ತಿದ್ದು ಇಲ್ಲಿನ ಅಮೃತೇಶ್ವರೀ ದೇವಸ್ಥಾನ ಬೀದಿಯಲ್ಲಿನ ಬಹುತೇಕ ಅಂಗಡಿಗಳು ಮುಚ್ಚಿದ್ದು ಜನಸಂಚಾರ ತೀರ ವಿರಳವಾಗಿತ್ತು.

ಸವಿತಾ ಸಮಾಜದಿಂದ ಬಂದ್‌
ಪರಿಸರದಲ್ಲಿ ಕೋವಿಡ್ ಸಮಸ್ಯೆ ಹೆಚ್ಚುತ್ತಿರುವುದರಿಂದ ಹಾಗೂ ಬೆಂಗಳೂರು ಮುಂತಾದ ಕಡೆಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಊರು ಸೇರಿರುವುದರಿಂದ ಸುರಕ್ಷತಾ ಕ್ರಮಗಳ ನಡುವೆಯೂ ವೃತ್ತಿ ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದ ಸೋಮ ವಾರದಿಂದ ಮಾಬುಕಳದಿಂದ ಮಣೂರು ತನಕದ ಎಲ್ಲ ಸೆಲೂನ್‌ಗಳನ್ನು ಒಂದು ವಾರ ಕಾಲ ಸ್ವಯಂಪ್ರೇರಿತವಾಗಿ ಬಂದ್‌ ಮಾಡುವಂತೆ ಮತ್ತು ಈ ಸಂದರ್ಭ ಮನೆ ಮನೆಗೆ ತೆರಳಿ ಕ್ಷೌರ ಮಾಡದಂತೆ ಕೋಟ ವಲಯ ಸವಿತಾ ಸಮಾಜ ಕರೆ ನೀಡಿದ್ದು ಅದರಂತೆ ಎಲ್ಲ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ.

ಹಲವು ಹೊಟೇಲ್‌ಗ‌ಳು ಬಂದ್‌
ಸಾಲಿಗ್ರಾಮ, ಕೋಟ ಮೂಕೈ, ಕೋಟದ ಹಲವು ಹೊಟೇಲ್‌ಗ‌ಳನ್ನು ಮಾಲಕರು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ್ದು, ಅನಿರ್ದಿಷ್ಟ ಅವಧಿಯ ತನಕ ತೆರೆಯದಿರಲು ತೀರ್ಮಾನಿಸಿದ್ದಾರೆ.

ರಿಕ್ಷಾ ಬಂದ್‌
ರಾಷ್ಟ್ರೀಯ ಹೆದ್ದಾರಿಯ ಅಮೃತೇಶ್ವರೀ ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುವ ರಿಕ್ಷಾ ನಿಲ್ದಾಣದ ಎಲ್ಲಾ ರಿಕ್ಷಾಗಳ ಸೇವೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವುದಾಗಿ ರಿಕ್ಷಾ ಮಾಲೀಕರು ಘೋಷಿಸಿದ್ದು ನಿಲ್ದಾಣ ಖಾಲಿ-ಖಾಲಿಯಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next