Advertisement

ಜಿಲ್ಲಾಧಿಕಾರಿ ಷರತ್ತು ಬದ್ದ ಅನುಮತಿ ಮೇರೆಗೆ ಮೇ 18ರಿಂದ ಉಡುಪಿ ಜಿಲ್ಲೆಯಲ್ಲಿ ಸೆಲೂನು ಆರಂಭ

03:07 PM May 14, 2020 | sudhir |

ಉಡುಪಿ: ಜಿಲ್ಲೆಯಾದ್ಯಂತ ಮೇ 18ರಿಂದ ಸೆಲೂನುಗಳನ್ನು ಪುನರಾರಂಭಿಸಲು ಷರತ್ತು ಬದ್ದ ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

Advertisement

ಮೇ 13ರಂದು ಜಿಲ್ಲಾ ಸವಿತಾ ಸಮಾಜದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು ವಿವರಿಸಿದೆ. ಕೋವಿಡ್ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್‌ ಮಾಡುವ ಮೂರು ದಿನಗಳ ಹಿಂದೆಯೇ ಕ್ಷೌರಿಕ ಬಂಧುಗಳು ಅಂಗಡಿಗಳನ್ನು ಮುಚ್ಚಿ ಬೆಂಬಲವನ್ನು ಸೂಚಿಸಿದ್ದಾರೆ. ಕ್ಷೌರಿಕ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಉದ್ಯಮಿ ನಾಡೋಜ ಡಾ| ಜಿ.ಶಂಕರ್‌ ಮತ್ತು ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮೂಲಕ ಜಿಲ್ಲೆಯ ಎಲ್ಲ ಕ್ಷೌರಿಕರಿಗೆ ಹಾಗೂ ಬಡ ಅರ್ಹ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳುಳ್ಳ ಕಿಟ್‌ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ತಾಲೂಕು, ವಲಯ ಘಟಕಗಳ ಪದಾಧಿಕಾರಿಗಳಿಗೆ ಹಾಗೂ ಸವಿತಾ ಸೌಹಾರ್ದ ಸೊಸೈಟಿ ಕೂಡ ಸ್ಪಂದಿಸಿದೆ. ಇತ್ತೀಚೆಗೆ ರಾಜ್ಯ ಸರಕಾರ ಕ್ಷೌರಿಕರಿಗಾಗಿ 5 ಸಾವಿರ ರೂ. ಆರ್ಥಿಕ ನೆರವು ಘೋಷಿಸಿದ್ದು, ಸಂಬಂಧಪಟ್ಟ ಇಲಾಖೆಯ ಮೂಲಕ ಆದಷ್ಟು ಶೀಘ್ರ ಇದು ಅರ್ಹರಿಗೆ ತಲುಪುವಂತಾಗಬೇಕು ಎಂದರು.

ಷರತ್ತುಗಳು
– ಗ್ರಾಹಕರು ಫೋನ್‌ ಮುಖಾಂತರ ಸಮಯ ನಿಗದಿಪಡಿಸಿ ಆ ಮೂಲಕ ಕ್ಷೌರ ಮಾಡಿಸಲು ಬಂದರೆ ಉತ್ತಮ.
– ಯಾವುದೇ ಸೆಲೂನುಗಳು ಎಸಿ ಹಾಕುವಂತಿಲ್ಲ.
– ಗ್ರಾಹಕರು ಮತ್ತು ಕ್ಷೌರಿಕರ ಅಂತರವನ್ನು ಎರಡು ಫೀಟ್‌ ಕಡಿಮೆ ಇರದಂತೆ ಕಾಪಾಡಬೇಕು.
– ಸೆಲೂನ್‌ನ ಬಟ್ಟೆಗಳು ಹಾಗೂ ಅಂಗಡಿಗಳು ಸ್ವತ್ಛತೆ ಮತ್ತು ಶುಭ್ರತೆಯನ್ನು ಕಾಪಾಡಬೇಕು.
– ಗ್ರಾಹಕರಿಗೆ ಸೇವೆ ನೀಡುವಾಗ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್‌ಗಳನ್ನು ಅಳವಡಿಸಬೇಕು.
– ಗ್ರಾಹಕರಿಗೆ ಸೇವೆ ನೀಡಿದ ಬಳಿಕ ಸಾಬೂನಿನಲ್ಲಿ ಕೈ ತೊಳೆಯಬೇಕು. ಗ್ರಾಹಕರು ಬಂದ ತತ್‌ಕ್ಷಣ ಅವರಿಗೆ ಸ್ಯಾನಿಟೈಸರ್‌ನಲ್ಲಿ ಕೈಯನ್ನು ಸ್ವತ್ಛಗೊಳಿಸುವಂತೆ ತಿಳಿಸಬೇಕು.
– ಅಂಗಡಿಯಲ್ಲಿ ಇಬ್ಬರು ಕ್ಷೌರಿಕರು ಸೇವೆ ನೀಡಬೇಕು. ಈ ಕುರ್ಚಿಯ ಅಂತರವೂ ಒಂದು ಮೀಟರ್‌ನಷ್ಟು ಇರಬೇಕು.
– ಒಮ್ಮೆ ಗ್ರಾಹಕರಿಗೆ ಹಾಕಿದ ಬಟ್ಟೆಗಳನ್ನು ಮತ್ತೂಬ್ಬ ಗ್ರಾಹಕರಿಗೆ ಹಾಕುವಂತಿಲ್ಲ. ಬಟ್ಟೆಗಳು ಸ್ವತ್ಛತೆಗೊಂಡ ಬಳಿಕವೇ ಉಪಯೋಗಿಸಬೇಕು.
– ಸವಿತಾ ಸಮಾಜದ ಪ್ರತಿಯೋರ್ವರು ಆರೋಗ್ಯ ಸೇತು ಆ್ಯಪ್‌ ಮೊಬೈಲಿಗೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
– ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲ್ಯಾನ್‌ ಆದಿಉಡುಪಿ, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಯು.ಶಂಕರ್‌ ಸಾಲ್ಯಾನ್‌ ಕಟಪಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next