Advertisement

ಮಾಡೆಲಿಂಗ್‌ನಿಂದ ಸಿನಿಮಾದತ್ತ…: ನವನಟಿ ಸಲೋನಿ ಸಿನಿ ಕನಸು

02:33 PM Apr 06, 2023 | Team Udayavani |

ಎಲ್ಲರನ್ನು ಕೈ ಬೀಸಿ ಸೆಳೆಯುವ ಕ್ಷೇತ್ರವೆಂದರೆ ಅದು ಸಿನಿಮಾ ರಂಗ. ಅದರಲ್ಲೂ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮೊದಲ ಆಯ್ಕೆ ಸಿನಿಮಾ. ಈಗ ಅದೇ ಕನಸಿನಲ್ಲಿ ಸಲೋನಿ ಗುಸ್ಸೇನ್‌ ಇದ್ದಾರೆ. ಜೈಪುರದಲ್ಲಿ ನಡೆದ ಫ್ಯಾಶನ್‌ ಷೋದಲ್ಲಿ “ಮಿಸ್‌ ಇಂಡಿಯಾ 2021′ ವಿಜೇತಳಾಗಿರುವ ಸಲೋನಿ, ನಂತರ “ಮಿಸ್‌ ಬೆಂಗಳೂರು’ “ಮಿಸ್‌ ಫೇಸ್‌ ಆಫ್ ಕರ್ನಾಟಕ’ ಕಿರೀಟಕ್ಕೆ ಭಾಜನರಾಗಿದ್ದಾರೆ. ಸದ್ಯ ಸಿನಿಮಾ ರಂಗಕ್ಕೆ ಬರುವ ಸೆಳೆತ ಹೊಂದಿದ್ದು, ಈಗಾಗಲೇ ಒಂದಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

Advertisement

ಶಾಲಾ-ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಸೌಂದರ್ಯ ಸೃರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಇರುವಂತೆ ಈಕೆಗೂ ನಟಿಸಬೇಕೆಂಬ ಹಂಬಲ ಬಂದಿದೆ. ಮನದ ಬಯಕೆಯನ್ನು ಅಪ್ಪನಿಗೆ ತಿಳಿಸಿದಾಗ ವಿರೋಧ ವ್ಯಕ್ತಪಡಿದೇ ಬೆಂಬಲ ಸೂಚಿಸಿದ್ದಾರಂತೆ.

ಸಿನಿಮಾರಂಗಕ್ಕೆ ಬರುವ ಮುನ್ನ ಎಲ್ಲದರಲ್ಲೂ ಪಕ್ವ ಆಗಿರಬೇಕೆಂಬ ಕಾರಣಕ್ಕೆ ಭರತನಾಟ್ಯ, ಹಿಪ್‌ಹಾಪ್‌ ನೃತ್ಯ ಇತರೆ ತರಬೇತಿಗಳನ್ನು ಕಲಿಯುತ್ತಿದ್ದಾರೆ. ಅವಕಾಶಗಳ ಕರೆ ಬಂದರೂ ಸರಿಯಾಗಿ ತಯಾರಿ ಮಾಡಿಕೊಳ್ಳದ ಕಾರಣ, ಹಿಂದೇಟು ಹಾಕಿದ್ದರಂತೆ. ಆದರೆ, ಒಳ್ಳೆಯ ಅವಕಾಶಗಳ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಡಲು ಸಿದ್ಧರಾಗಿದ್ದಾರೆ.

“ಗಟ್ಟಿ ಕಥಾಹಂದರವಿರುವ ಸಿನಿಮಾಗಳಲ್ಲಿ ಅಭಿನಯಿಸಿದರೆ ಗುರುತಿಸಿಕೊಳ್ಳಲು ಸಾಧ್ಯ ಎಂಬುದನ್ನು ಹಿರಿಯರು ಸಲಹೆ ಕೊಟ್ಟಿದ್ದಾರೆ. ಭಾರತದ ಸಂಸðತಿ ಮತ್ತು ಇತಿಹಾಸ ಬಿಂಬಿಸುವ ಪಾತ್ರ ಮಾಡುವ ಬಯಕೆ ಇದೆ. ಬಾಲಿವುಡ್‌ನ‌ “ಪದ್ಮಾವತಿ’, “ರಾಜಿ’ ಅಂತಹ ಸಿನಿಮಾಗಳು ನನಗೆ ಇಷ್ಟ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next