Advertisement
ಪುರುಷನೊಬ್ಬನ ದಬ್ಬಾಳಿಕೆ, ಮಹಿಳೆಯರ ದೈನಂದಿನ ಬದುಕಿನ ಗಡಿಗಳನ್ನು ನಿರ್ದೇಶಿಸುವ ಮುಸ್ಲೀಂ ಧಾರ್ಮಿಕ ಕೆಲವು ಕಟ್ಟುನಿಟ್ಟಿನ ನಿಯಮಗಳು, ದುಃಖ ಮತ್ತು ಆರ್ಧ್ರತೆಯ ನಡುವೆ ಬದುಕುವ ಮುಸ್ಮೀಂ ಮಹಿಳೆಯರ ಹೋರಾಟದ ಮನಸ್ಥಿತಿಯ ಕ್ಯಾಸ್ಟ್ರೋಫೋಬಿಕ್ ಸಂಭಾವ್ಯತೆಯನ್ನು ಈ ಕೃತಿಯಲ್ಲಿ ಎತ್ತಿ ತೋರಿಸುತ್ತದೆ. ಪಿತೃ ಪ್ರಭುತ್ವ, ಮಹಿಳೆಯ ಮೂಲಭೂತ ಹಕ್ಕುಗಳು, ಮಹಿಳೆಯರ ನಡುವಿನ ಸಂಬಂಧ ಮತ್ತು ಅವರ ಕುಟುಂಬದೊಳಗಿನ ವ್ಯವಸ್ಥೆ ಮತ್ತು ಭಾವಗಳು ಕೃತಿಯ ಕೊನೆಯ ಹಂತದಲ್ಲಿ ಬಿಚ್ಚಿಡುತ್ತದೆ.
Related Articles
Advertisement
ಈ ಕೃತಿಯಲ್ಲಿ ಬರುವ ಬಹುತೇಕ ಎಲ್ಲಾ ಮಹಿಳೆಯರ ಪಾತ್ರಗಳಿಗೂ ಇದೇ ರೀತಿಯ ಪ್ರಶ್ನೆಗಳು ನಮ್ಮಲ್ಲಿ ಉದ್ಭವಿಸುತ್ತವೆ. ತಾಯಿಯ ಬಗ್ಗೆ ಸಾಜಿದಾಳ ಸಹನಾಶೀಲತೆ ಎಲ್ಲಿ ಮಾಯವಾಗುತ್ತದೆ ? ಯಾಕೆ ಪರ್ವೀನ್ ಳ ಬದುಕಿನಲ್ಲಿ ವಿಚ್ಚೇದನ ನೀಡುವಂತಹ ಪರಿಸ್ಥಿತಿ ಉಂಟಾಗುತ್ತದೆ ? ಆಸಿಯಾಳ ಎಲ್ಲಾ ನಿರ್ಧಾರಗಳಿಗೆ ಕಾರಣವೇನು? ಈ ಮಹಿಳೆಯರು ಅವರ ಜೀವನವೆಲ್ಲವೂ ಹೇಗೆ ಹೆಣೆದುಕೊಂಡಿದ್ದಾರೆ..? ಅವರವರೊಳಗೆ ಹೇಗೆ ಭಾವಿಸುತ್ತಾರೆ ? ಈ ಮಹಿಳೆಯರು ಯಾರು ? ಹೀಗೆ ವುಮೆನ್ ಡ್ರೀಮಿಂಗ್ ತನ್ನ ಪಾತ್ರಗಳ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುವ ಕಾದಂಬರಿಗಾಗಿ, ರಚನೆಗಳನ್ನು ಮೀರಿ ಸ್ವಲ್ಪ ಕಾಡುತ್ತದೆ.
ಒಂದು ಕಥೆಯಲ್ಲಿ ಅದರ ಪಾತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಅವುಗಳನ್ನು ಅಳೆಯಲು ಸಾಧ್ಯವಿದೆಯೇ? ಕಾದಂಬರಿಯ ಮಹತ್ವಾಕಾಂಕ್ಷೆಯ ಹೊರಗಿನ ಕಾಲ್ಪನಿಕ ಘಟನೆಗಳು ಮತ್ತು ಘಟನೆಗಳಿಗೆ ಅವರು ಪ್ರತಿಕ್ರಿಯಿಸುವ ಮತ್ತು ಪ್ರತಿಕ್ರಿಯಿಸುವ ವಿಧಾನಗಳನ್ನು ನಿರ್ಣಯಿಸಲು ಸಾಧ್ಯವೆ..? ಕಥೆಯ ಆಂತರ್ಯವನ್ನು ಪ್ರವೇಶಿಸಲು ಕಥೆಗಳು ನಮಗೆ ಅವಕಾಶ ನೀಡಬಹುದು ಮತ್ತು ಪಾತ್ರ-ಕೇಂದ್ರಿತವಾದ ಕಾದಂಬರಿಗಾಗಿ, ಇದು ವಿಶೇಷವಾಗಿ ನಿರ್ಣಾಯಕವಾಗಿದೆ. ಇಲ್ಲಿ ವಾಕ್ಯದ ಮಟ್ಟದಲ್ಲಿ, ಭಾವನೆಯ ಮಟ್ಟವನ್ನು ಕಾಣುವುದು ಸ್ವಲ್ಪ ಕಷ್ಟವೇ ಸರಿ.
“ಅವಳು ಚಿಂತಿತರಾಗಿದ್ದಳು”, “ಅವಳು ಕೋಪಗೊಂಡಿದ್ದಳು”, “ಅವಳು ತೀವ್ರ ದುಃಖದಿಂದ ಬಳಲುತ್ತಿದ್ದಳು,” “ಅಪರಾಧದ ನೋವನ್ನು ಅನುಭವಿಸಿದಳು,”. ಹೀಗೆ ಕೃತಿಯುದ್ದಕ್ಕೂ ಇಂತಹದ್ದೇ ಆರ್ದ್ರತೆ ಎದ್ದು ಕಾಣುತ್ತದೆ. ಈ ಭಾವನೆಗಳನ್ನು ಎಂದಿಗೂ ಅನ್ವೇಷಿಸಲಾಗುವುದಿಲ್ಲ
ನೆರಳಿನ ಕಲ್ಪನೆಗಳ ದರ್ಶನಗಳನ್ನು ಮೀರಿ ಅವರ ದುಃಖಗಳನ್ನು ಅಥವಾ ಕನಸುಗಳನ್ನು ನಾವು ಹೇಗೆ ಗ್ರಹಿಸಬಹುದು ? ಅನುವಾದವಾಗಿರುವುದರಿಂದ ಮೂಲ ಕೃತಿಗೆ ಹೋಲಿಸಿದರೇ, ಇಲ್ಲಿ ಸ್ವಲ್ಪ ವ್ಯತ್ಯಸ್ಥತೆಗಳನ್ನು ನಾವು ಕಾಣುತ್ತೇವೆ. ಕಥೆಯ ಮಿತಿಗಳು ಮತ್ತು ಅದರೊಳಗಿನ ಪಾತ್ರಗಳು ತಮಿಳಿನ ಪ್ರಭಾವದಿಮದ ಇಂಗ್ಲಿಷ್ ರೆಂಡರಿಂಗ್ ಓದುವಲ್ಲಿ ನೆಲೆಗೊಳ್ಳಲು ಕಠಿಣವಾಗಬಹುದು. ಸಾಂದರ್ಭಿಕವಾಗಿ, ಕಂದಸ್ವಾಮಿಯವರ ಭಾಷಾ ಪಾಂಡಿತ್ಯವು ಅರ್ಥವನ್ನು ಚೆನ್ನಾಗಿ ಸೆರೆಹಿಡಿದಿವೆ.
“ಸಾಜಿದಾ ತನ್ನ ತೋಳುಗಳನ್ನು ತಾಯಿಯ ಕುತ್ತಿಗೆಗೆ ಸುತ್ತಿ ಅವಳೊಂದಿಗೆ ಕಣ್ಣೀರಿಟ್ಟಳು.” ಎಂತಹ ನೋವು ಅದರ ಸರಳವಾಗಿ ದುಃಖವನ್ನು ಪದಗಳಲ್ಲಿ ಹಿಡಿದು ಕೊಟ್ಟಿರುವ ರೀತಿ, ಸೂಕ್ಷ್ಮ ಮತ್ತು ಹೃದಯಕ್ಕೆ ಕಡಿತವಾಗದೆ ಇರಲಾರದು.
ಅನುವಾದದ ಕೃತಿಯಾಗಿರುವುದರಿಂದ ಭಾಷಾಂತರದಲ್ಲಿ ಸ್ವಲ್ಪ ಓದುಗನಿಗೆ ಅಲ್ಲಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತದೆ. “ಅಪಾಯಕಾರಿ ಬಾವಿಯಂತೆ, ಅವಳ ಉಪಸ್ಥಿತಿಯು ಭೀತಿಯನ್ನು ಹರಡುತ್ತದೆ” ಎಂಬ ಸಾಲು ಸ್ಪಷ್ಟವಾಗಿ, ಗ್ರಹಿಸಲು ಕೆಲವು ಕ್ಷಣಗಳನ್ನು ಮತ್ತು ಕಲ್ಪನೆಯ ಕೆಲವು ಪ್ರಯತ್ನಗಳನ್ನು ತೆಗೆದುಕೊಳ್ಳುತ್ತದೆ. ಇದು ತಮಿಳಿನಲ್ಲಿ ಪರಿಚಿತ ಭಾಷಾವೈಶಿಷ್ಟ್ಯವಾಗಿದ್ದರೂ, ಈ ನಿರ್ದಿಷ್ಟ ಪದವಿನ್ಯಾಸವು ಅದರ ತೂಕವನ್ನು ಇಲ್ಲಿ ತರುವುದಿಲ್ಲ; ವಿಭಿನ್ನ, ಸ್ಪಷ್ಟವಾದ ಪದವಿನ್ಯಾಸವು ಓದುಗನಿಗೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ.
ಒಟ್ಟಿನಲ್ಲಿ, ಮುಸ್ಲೀಂ ಮಹಿಳೆಯರ ಸುತ್ತ ಹೆಣೆದುಕೊಳ್ಳುವ ಕಾದಂಬರಿ, ಧಾರ್ಮಿಕ ಆಚರಣೆಗಳಿಂದ ಅಥವಾ ವಿಧಿವಿದಾನಗಳಿಂದ ಹೊರಗುಳಿಯುವುದರಿಂದ ಮತ್ತು ಅಲ್ಲಿ ಅನುಭವಿಸುವ ನೋವುಗಳನ್ನು, ಅವರು ಕಾಣುವ ಕನಸುಗಳು, ಅವರು ಬಯಸುವ ಬದುಕು, ಅವರು ಎದುರಿಸುವ ಸನ್ನಿವೇಶಗಳು, ನೋವಿಗೆ ಒಪ್ಪಿಕೊಳ್ಳುವ ಅನಿವಾರ್ಯದ ಸ್ಥಿತಿಗಳನ್ನು ಎತ್ತಿ ತೋರಿಸುತ್ತದೆ ಈ ಕೃತಿ. ಮತ್ತು ವಿಸ್ತಾರ ಚಿಂತನೆಗೆ ಈ ಕೃತಿ ಎಡೆಮಾಡಿಕೊಡುತ್ತದೆ.
ಇಷ್ಟಕ್ಕೆ ನಿಲ್ಲಿಸಬೇಡಿ. ಕೃತಿಯ ಬಗ್ಗೆ ನಿಮಗೆ ಅರ್ಧದಷ್ಟೂ ಗೊತ್ತಾಗಲಿಲ್ಲ. ಕೃತಿಯನ್ನು ಓದದೇ ಇರಬೇಡಿ. ಓದು ನಿಮ್ಮದಾಗಲಿ.
ಇಂಗ್ಲಿಷ್ ವಿಮರ್ಶೆಯ ಕನ್ನಡನುವಾದ : ಶ್ರೀರಾಜ್ ವಕ್ವಾಡಿ