Advertisement

ದಾಳಿಯ ಬಳಿಕ ಕಣ್ಣಿನ ದೃಷ್ಟಿ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ

03:44 PM Oct 24, 2022 | Team Udayavani |

ನ್ಯೂಯಾರ್ಕ್‌ : ಆಗಸ್ಟ್‌ನಲ್ಲಿ ನಡೆದ ಭೀಕರ ಚಾಕು ದಾಳಿಯ ನಂತರ ಮುಂಬೈ ಮೂಲದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಅವರ ಒಂದು ಕೈ ಕೆಲಸ ನಿರ್ವಹಿಸಲು ಅಸಮರ್ಥವಾಗಿದೆ ಎಂದು ಅವರ ಸಾಹಿತ್ಯಿಕ ಏಜೆಂಟ್ ಹೇಳಿದ್ದಾರೆ.

Advertisement

75 ವರ್ಷ ವಯಸ್ಸಿನ ಬೂಕರ್ ಪ್ರಶಸ್ತಿ ವಿಜೇತ ಲೇಖಕ ರಶ್ದಿ ಅವರು ಪಶ್ಚಿಮ ನ್ಯೂಯಾರ್ಕ್‌ನ ಚೌಟೌಕ್ವಾ ಸಂಸ್ಥೆಯಲ್ಲಿ ಸಾಹಿತ್ಯ ಸಮಾರಂಭದಲ್ಲಿ ಮಾತನಾಡುವ ಮೊದಲು, 24 ವರ್ಷದ ನ್ಯೂಜೆರ್ಸಿ ನಿವಾಸಿ, ಲೆಬನಾನಿನ ಯುಎಸ್ ಪ್ರಜೆಯಾದ ಹದಿ ಮತರ್ ಪ್ರೇಕ್ಷಕರ ಮುಂದೆಯೇ ವೇದಿಕೆಯ ಮೇಲೆ ಕುತ್ತಿಗೆ ಮತ್ತು ಹೊಟ್ಟೆಗೆ ಇರಿದಿದ್ದ.

ರಶ್ದಿಯವರ ಗಾಯಗಳು ಗಾಢವಾಗಿದ್ದವು, ಆದರೆ ಅವರು ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ .ಅವರ ಕುತ್ತಿಗೆಯಲ್ಲಿ ಮೂರು ಗಂಭೀರ ಗಾಯಗಳಿದ್ದವು. ಅವರ ತೋಳಿನ ನರಗಳು ಕತ್ತರಿಸಿದ ಕಾರಣ ಒಂದು ಕೈ ನಿಷ್ಕ್ರಿಯವಾಗಿದೆ. ಮತ್ತು ಅವರ ಎದೆ ಮತ್ತು ದೇಹದಲ್ಲಿ ಸುಮಾರು 15 ಗಾಯಗಳಿವೆ. ಆದ್ದರಿಂದ, ಇದು ಕ್ರೂರ ದಾಳಿಯಾಗಿತ್ತು ಎಂದು ಅವರ ಸಾಹಿತ್ಯಿಕ ಏಜೆಂಟ್ ಆಂಡ್ರ್ಯೂ ವೈಲಿ ಸ್ಪ್ಯಾನಿಷ್ ಭಾಷೆಯ ಪತ್ರಿಕೆ ಎಲ್ ಪೈಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

“ದಿ ಸೈಟಾನಿಕ್ ವರ್ಸಸ್” ಪುಸ್ತಕವನ್ನು ಬರೆದ ನಂತರ ವರ್ಷಗಳ ಕಾಲ ರಶ್ದಿ ಬೆದರಿಕೆಗಳನ್ನು ಎದುರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next