ಮುಂಬೈ: ಬಾಲಿವುಡ್ ಖ್ಯಾತನಟ ಸಲ್ಮಾನ್ ಖಾನ್‌ಗೆ ದೇಶಾದ್ಯಂತ ಅಭಿಮಾನಿಗಳಿದ್ದು, ಅವರ ಹುಟ್ಟುಹಬ್ಬದ ದಿನ ಶುಭಕೋರಲೆಂದೇ ಸಾವಿರಾರು ಅಭಿಮಾನಿಗಳು ಸೇರುವುದು ಗೊತ್ತಿರುವ ವಿಚಾರ.
ಆದ್ರೆ, ಈ ಬಾರಿ ಸಲ್ಮಾನ್ ಹುಟ್ಟುಹಬ್ಬಕ್ಕೆ ಜಬಲ್‌ಪುರದಿಂದ ಸೈಕಲ್ ತುಳಿದುಕೊಂಡೇ ಅಭಿಮಾನಿಯೊಬ್ಬರು ಮುಂಬೈಗೆ ಆಗಮಿಸಿದ್ದು, ಈ ವಿಶೇಷ ಅಭಿಮಾನಿ ಜತೆಗಿನ ಸಲ್ಮಾನ್ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ಜಬಲ್‌ಪುರದಿಂದ ಸಮೀರ್ ಎನ್ನುವ ಅಭಿಮಾನಿ ಸತತ 5 ದಿನಗಳ ಕಾಲ ಸೈಕಲ್ ತುಳಿದುಕೊಂಡೇ ನಟ ಸಲ್ಮಾನ್‌ಗೆ ಶುಭಕೋರಲು ಬಂದಿದ್ದರು.
ಈ ವಿಚಾರ ತಿಳಿದ ಸಲ್ಮಾನ್, ಸಮೀರ್ ಅವರನ್ನ ಭೇಟಿಯಾಗಿದ್ದಲ್ಲದೇ, ಅಭಿಮಾನಿಯ ಸೈಕಲ್ ಜತೆಗೆ ಫೋಟೋಗೆ ಪೋಸ್ ನೀಡಿದ್ದಾರೆ.
Related Articles
ಸಮೀರ್ ಆಸೆ ಈಡೇರಿಸಿದ ಸಲ್ಲು ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.