Advertisement

ಕಿಸ್‌ ಕೊಟ್ಟಿದ್ದು ತುಟಿಗಲ್ಲ, ಟೇಪ್‌ ಗಂತೆ! ಸಲ್ಲು ಸ್ಪಷ್ಟನೆ

09:15 AM May 03, 2021 | Team Udayavani |

ನಟ ಸಲ್ಮಾನ್‌ ಖಾನ್‌ ತಮ್ಮ ಸಿನಿ ಜೀವನದಲ್ಲಿ ಒಂದು ವಿಚಾರಕ್ಕೆ ಬದ್ಧರಾಗಿದ್ದರು. ಅದೇನೆಂದರೆ ತನ್ನ ಸಿನಿಮಾಗಳಲ್ಲಿ ನಾಯಕಿಯರಿಗೆ ಕಿಸ್‌ ಮಾಡದಿರಲು. ಅದನ್ನು ಅವರು ಇತ್ತೀ ಚೆಗೆ ಪಾಲಿಸಿಕೊಂಡು ಬಂದಿದ್ದರು ಕೂಡಾ.

Advertisement

ಆದರೆ, ಇತ್ತೀ ಚೆಗೆ ಬಿಡುಗಡೆಯಾದ “ರಾಧೆ’ ಸಿನಿಮಾ ನೋಡಿದವರಿಗೆ ಸಲ್ಲು “ನೋ ಕಿಸ್‌’ ಪಾಲಿಸಿಯನ್ನು ಬ್ರೇಕ್‌ ಮಾಡಿದ್ದು ಎದ್ದು ಕಾಣುತ್ತಿತ್ತು. ಟ್ರೇಲರ್‌ ನಲ್ಲಿ ಅವರು ನಟಿ ದಿಶಾ ಪಟಾನಿ ತುಟಿ ಗೆ ಮುತ್ತಿಕ್ಕುತ್ತಾರೆ. ಇದನ್ನು ಅನೇ ಕರು ಟ್ರೋಲ್‌ ಮಾಡಿದ್ದರು. ಈಗ ಸಲ್ಲು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಹೊಸ ಸಿನಿಮಾಗಳ ಮೇಲೆ ‘ಅಪೂರ್ವ’ ನಿರೀಕ್ಷೆ: ಕೈಯಲ್ಲಿ ಸಾಲು ಸಾಲು ಚಿತ್ರಗಳು

“ರಾಧೆ’ ಚಿತ್ರದ ಮೇಕಿಂಗ್‌ ವಿಡಿಯೋದಲ್ಲಿ ಮಾತನಾಡಿದ ಅವರು, “ನಾನು ದಿಶಾನಿಗೆ ಕಿಸ್‌ ಮಾಡಿಲ್ಲ,ಆಕೆಯ ತುಟಿಗೆ ಹಾಕಲಾಗಿದ್ದ ಟೇಪ್‌ಗೆ ಕಿಸ್‌ಮಾಡಿದ್ದು’ ಎಂದಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next