ಮುಂಬೈ: ನಟ ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ತಮ್ಮ ಮೈಯೆಲ್ಲಾ ಕೆಸರಾಗಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೇ ಈ ಫೋಟೋ ಸಾಕಷ್ಟು ಟ್ರೋಲ್ ಆಗಿ ‘ಸಲ್ಲುಗೆ ಕೃಷಿ ಅಂದರೆನೆಂಬುದೇ ಗೊತ್ತಿಲ್ಲ. ಕೇವಲ ನಾಟಕವಾಡುತ್ತಿದ್ದಾರೆ ಎಂದು ಹಲವರು ಕಾಲೆಳೆದಿದ್ದರು.
ಆದರೆ ಸಲ್ಲು ಈಗ ಖಡಕ್ ತಿರುಗೇಟು ನೀಡಿದ್ದು ‘ಗದ್ದೆಯಲ್ಲಿ ಟ್ರಾಕ್ಟರ್ ಓಡಿಸುವ ವಿಡಿಯೋವೊಮದನ್ನು ಹಂಚಿಕೊಂಡು ನನಗೂ ಕೃಷಿಯ ಬಗ್ಗೆ ಜ್ಞಾನವಿದೆ’ ಎಂದು ಸಾಬೀತುಪಡಿಸಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಲಾಕ್ ಡೌನ್ ಆರಂಭದ ಕಾಲದಿಂದಲೂ ತಮ್ಮದೆ ಫಾರ್ಮ್ ಹೌಸ್ ನಲ್ಲಿ ಕಾಲಕಳೆಯುತ್ತಿದ್ದಾರೆ. ಮಾತ್ರವಲ್ಲದೆ ಅಲ್ಲಿಂದಲೇ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂವಾದ ನಡೆಸುತ್ತಿದ್ದಾರೆ. ಈ ಹಿಂದೆ ಗದ್ದೆಯಲ್ಲಿ ನಾಟಿ ಮಾಟುತ್ತಿರುವ ಫೋಟೋವನ್ನು ಹಂಚಿಕೊಂಡು ಎಲ್ಲಾ ಅನ್ನದಾತರನ್ನು ಗೌರವಿಸುವೆ ಎಂದು ಕ್ಯಾಪ್ಷನ್ ನೀಡಿದ್ದರು. ಈದು ವೈರಲ್ ಆಗಿದ್ದು ಮಾತ್ರವಲ್ಲದೆ ಟ್ರೋಲ್ ಕೂಡ ಆಗಿತ್ತು. ಕೃಷಿ ಎನೆಂಬುದೇ ಗೊತ್ತೆ ಇಲ್ಲ ಎಂದು ಟ್ರೋಲ್ ಮಾಡಿದವರಿಗೆ ಸಲ್ಮಾನ್ ಖಾನ್ ಖಡಕ್ ತಿರುಗೇಟು ನೀಡಿದ್ದಾರೆ.
Related Articles
ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಟ್ರ್ಯಾಕ್ಟರ್ ಓಡಿಸುತ್ತಿದ್ದಾರೆ. ಸ್ವತಃ ಭತ್ತದ ಗದ್ದೆಯಲ್ಲಿ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
ಸದ್ಯ ಸಲ್ಮಾನ್ ಖಾನ್ ರಾಧೇ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಮೇ ತಿಂಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳನ್ನು ಮುಂದೂಡಲಾಗಿತ್ತು.ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.