Advertisement

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ಸಲೀಂ ಖಾನ್‌ಗೆ ಬೆದರಿಕೆ ಪತ್ರ

08:37 AM Jun 06, 2022 | Team Udayavani |

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ ಸಲೀಂ ಖಾನ್‌ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಪ್ರಾಣ ಬೆದರಿಕೆ ಪತ್ರ ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

ಭಾನುವಾರ ಬೆಳಗ್ಗೆ ಸಲೀಂ ಖಾನ್‌ ವಾಕಿಂಗ್‌ಗೆ ತೆರಳಿದ್ದಾಗ ಎಂದಿನಂತೆ ಬಾಂದ್ರಾ ಬ್ಯಾಂಡ್‌ಸ್ಟಾಂಡ್‌ನ‌ಲ್ಲಿ ಕುಳಿತಿದ್ದರು. ಆಗ ಅಲ್ಲಿ ಇಡಲಾಗಿದ್ದ ಪತ್ರ ಅವರ ಗಮನಕ್ಕೆ ಬಂದಿದೆ.

ಅದರಲ್ಲಿ, “ಸಲೀಂ ಮತ್ತು ಸಲ್ಮಾನ್‌ ಖಾನ್‌, ಆದಷ್ಟು ಬೇಗ ನಿಮಗೆ ಮೂಸೆವಾಲನ ಸ್ಥಿತಿ ಬರಲಿದೆ’ ಎಂದು ಬರೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next