ಡೆನ್ಮಾರ್ಕ್ ಸರಕಾರದ ಯೋಜನೆ
Advertisement
ಮಣಿಪಾಲ : ಲಕ್ಷಾಂತರ ರೂಪಾಯಿ ಕಟ್ಟಿ ಸ್ಕೂಲ್-ಕಾಲೇಜಿಗೆ ಹೋಗವುದನ್ನ ನೋಡಿದ್ದೇವೆ. ಆದರೆ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಬರುವುಕ್ಕೂ ಸಂಬಳ ಕೊಡುತ್ತಾರೆ. ಇಲ್ಲೊಂದು ದೇಶದಲ್ಲಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತಿಂಗಳ ಲೆಕ್ಕದಲ್ಲಿ ವೇತನ ನೀಡುತ್ತಿದ್ದು, ಒಂದೂ ರೂಪಾಯಿ ತೆಗೆದುಕೊಳ್ಳದೇ ಉಚಿತ ಶಿಕ್ಷಣವನ್ನೂ ನೀಡುತ್ತಿದೆ.
ಡೆನ್ಮಾರ್ಕ್ ದೇಶ ವಿದ್ಯಾರ್ಥಿಗಳಿಗೆ ಸಂಬಳ ಕೊಡುತ್ತಿದೆ. ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಇಚ್ಚಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ಮಾಸಿಕ ವೇತನವಿದೆ. ಉದ್ದೇಶ ಏನು ?
ಸಾಕ್ಷರತೆ ಹೆಚ್ಚಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ವ್ಯಾಸಂಗಕ್ಕೆ ಬರಬೇಕೆನ್ನುವ ಉದ್ದೇಶ ಇದರ ಹಿಂದಿದೆ.
Related Articles
18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿದ್ದು, ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ಇಚ್ಛಿಸುವ ಪ್ರತಿಯೊಬ್ಬ ವಿದ್ಯಾರ್ಥಿಗಳ ಖರ್ಚುವೆಚ್ಚವನ್ನು ಕಾಲೇಜಿನ ಆಡಳಿತ ವ್ಯವಸ್ಥೆ ನೀಡುತ್ತದೆ.
Advertisement
ಸಂಬಳ ಎಷ್ಟು ? ತಿಂಗಳಿಗೆ 9406 ರೂ. ಗಳಂತೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ವೇತನ ನೀಡುತ್ತಿದ್ದು, ಕಲಿಕೆಯಲು ಮುಂದಿರುವ ಹಾಗೂ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ವೇತನದ ಮೊತ್ತವನ್ನು ಹೆಚ್ಚಿಸುತ್ತದೆ. ಸಂಬಳವನ್ನು ವಾಪಸ್ ನೀಡಬೇಕೆಂದಿಲ್ಲ !
ವಿದ್ಯಾರ್ಥಿಗಳು ಪಡೆಯುತ್ತಿರುವ ಸಂಬಳವನ್ನು ಸರಕಾರ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಒಂದು ವೇಳೆ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಕಡಿತಗೊಳಿಸಿದರೂ ವಿದ್ಯಾರ್ಥಿಗಳಿಗೆ ನೀಡಿದ ವೇತನವನ್ನು ವಾಪಸ್ ಕೇಳುವುದಿಲ್ಲ.