Advertisement

ಸಾಲಿಗ್ರಾಮ: ಸರ್ವಿಸ್‌ ರಸ್ತೆ ಕಾಮಗಾರಿ ಪುನರಾರಂಭ

12:24 PM Apr 21, 2022 | Team Udayavani |

ಕೋಟ: ಸಾಲಿಗ್ರಾಮ ಭಾಗದಲ್ಲಿ ಕಳೆದ ಒಂದು ವರ್ಷ ದಿಂದ ಸ್ಥಗಿತಗೊಂಡಿದ್ದ ಚತುಷ್ಪಥ ಹೆದ್ದಾರಿಯ ಸರ್ವಿಸ್‌ ರಸ್ತೆ ಕಾಮಗಾರಿ ಪುನರಾರಂಭಗೊಂಡಿದೆ.

Advertisement

ಸರ್ವಿಸ್‌ ರಸ್ತೆ ಇಲ್ಲದಿರುವುದರಿಂದ ಸಾಲಿಗ್ರಾಮದಲ್ಲಿ ಸಾಕಷ್ಟು ಅಪಘಾತಗಳು ನಡೆಯುತಿತ್ತು ಹಾಗೂ ಕಾರ್ಕಡ ಮುಂತಾದ ಕಡೆ ಸಾಗುವವರು ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಈ ಸರ್ವಿಸ್‌ ರಸ್ತೆ ಯೋಜನೆಯ ಪ್ರಥಮ ಹಂತದಲ್ಲೇ ಮುಗಿಯಬೇಕಿತ್ತು. ಆದರೆ 10 ವರ್ಷ ತಡವಾಗಿ 2021 ಜನವರಿಯಲ್ಲಿ ಕೆಲಸ ಆರಂಭಗೊಂಡಿತ್ತು.

ಯೋಜನೆಯಂತೆ ಸಾಲಿಗ್ರಾಮ ಮೀನು ಮಾರುಕಟ್ಟೆಯಿಂದ ಬಸ್‌ ನಿಲ್ದಾಣದ ವರೆಗೆ ಮತ್ತು ಕಾರ್ಕಡ ರಸ್ತೆಯಿಂದ ನರ್ತಕಿ ತನಕ ಎರಡು ಕಡೆಗಳಲ್ಲಿ ಸರ್ವಿಸ್‌ ರಸ್ತೆ, ಚರಂಡಿ ನಿರ್ಮಾಣಗೊಳ್ಳಬೇಕಿತ್ತು. ಇದಕ್ಕಾಗಿ ಒತ್ತುವರಿ ಕಟ್ಟಡಗಳನ್ನು ತೆರವುಗೊಳಿಸಿ ಒಳಚರಂಡಿ, ರಸ್ತೆ ನಿರ್ಮಾಣ ಕೆಲಸ ಪ್ರಾರಂಭಿಸಲಾಗಿತ್ತು. ಅದರೆ ಸಕಾರಣವಿಲ್ಲದೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದರಿಂದ ಸಾಕಷ್ಟು ಸಮಸ್ಯೆಯಾಗಿತ್ತು.

ಈ ಬಗ್ಗೆ ಸ್ಥಳೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದು, ಇದೀಗ ಕಾಮಗಾರಿ ಪುನಃ ಆರಂಭಗೊಂಡಿರುವರಿಂದ ಸ್ಥಳೀಯರು ಸಂತಸಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next