Advertisement
ಅವರು ಗುರುವಾರ ಸಾಲೆತ್ತೂರು ಗ್ರಾ.ಪಂ.ನ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ, ನೂತನ ಸಭಾಭವನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ ಅಬ್ಟಾಸ್ ಅಲಿ, ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ, ಬಂಟ್ವಾಳ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಾ.ಪಂ. ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷೆ ಕಮಲಾ, ಗೋಳ್ತಮಜಲು ಗ್ರಾ.ಪಂ. ಉಪಾಧ್ಯಕ್ಷ ಕೆ.ಎಸ್. ಮುಸ್ತಫಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸ. ಕಾರ್ಯ ನಿರ್ವಾಹಕ ಎಂಜಿನಿಯರ್ ರೋಹಿದಾಸ್ ಉಪಸ್ಥಿತರಿದ್ದರು. ಸಾಲೆತ್ತೂರು ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ಇಸ್ಮಾಯಿಲ್ ಅವರನ್ನು ಸಮ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ ಸ್ವಾಗತಿಸಿ, ಪ್ರಭಾರ ಅಭಿವೃದ್ಧಿ ಅಧಿಕಾರಿ ಇಸ್ಮಾಯಿಲ್ ವಂದಿಸಿದರು. ಶಿಕ್ಷಕ ಗೋಪಾಲಕೃಷ್ಣ ನಿರೂಪಿಸಿದರು.
ಸಭಾಭವನ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಜನಪ್ರತಿನಿಧಿಗಳಿಗೆ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಜವಾಬ್ದಾರಿ ಇರುತ್ತದೆ. ಅವುಗಳನ್ನು ಈಡೇರಿಸಿಕೊಂಡು ಮುಂದೆ ಹೋಗಬೇಕು. ಎಲ್ಲರೂ ಸಮಾನರು ಎಂದು ತಿಳಿದುಕೊಂಡಾಗ ಯಾವುದೇ ಸಮಸ್ಯೆ ಬರುವುದಿಲ್ಲ. ಕ್ಷೇತ್ರದಲ್ಲಿ ಶಾಂತಿಯಿಂದ ಜನರು ಬದುಕಿದಾಗ ಕ್ಷೇತ್ರದ ಅಭಿವೃದ್ಧಿಯಾದಂತೆ. ಸಾಲೆತ್ತೂರು
ಪಂ.ಗೆ ಶ್ರೀನಿವಾಸ ಪೂಜಾರಿ ಹಾಗೂ ನಾನು ಜತೆಯಾಗಿ 5 ಲಕ್ಷ ರೂ. ಅನುದಾನ ನೀಡುತ್ತೇವೆ ಹಾಗೂ ನನ್ನ ವತಿಯಿಂದ ಗ್ರಾ.ಪಂ. ಅಧ್ಯಕ್ಷರಿಗೆ ದ್ವಿಚಕ್ರ ವಾಹನ ಕೊಡುಗೆಯಾಗಿ ನೀಡುತ್ತೇನೆ ಎಂದು ಭರವಸೆ ನೀಡಿದರು. ಸಮಸ್ಯೆಗಳಿಗೆ ಸ್ಪಂದನೆ
ಗ್ರಾ.ಪಂ. ತೀರ್ಮಾನ ಅಂತಿಮವಾಗಿದೆ. ಗ್ರಾ.ಪಂ. ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿದಾಗ ಜನರ ಬೇಡಿಕೆಗಳು ಈಡೇರುತ್ತವೆ. ಜನಪ್ರತಿನಿಧಿಗಳಿಂದ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಗಳಾಗಬೇಕು.
-ಕೋಟ ಶ್ರೀನಿವಾಸ ಪೂಜಾರಿ
ವಿ.ಪ. ವಿಪಕ್ಷ ನಾಯಕ