ರಾಣಿಬೆನ್ನೂರ: ಕೇಂದ್ರ ಸರಕಾರದ ಆಡಳಿತ ವೈಖರಿಗೆ ದೇಶದ ಜನತೆ ಭ್ರಮನಿರಸನಗೊಂಡಿದ್ದಾರೆ. ಕೃಷಿ ಕಾಯ್ದೆ, ನಿರುದ್ಯೋಗ, ಜನ ವಿರೋಧಿ ಯೋಜನೆಗಳ ವಿರುದ್ಧವೂ
ಅಸಮಾಧಾನಗೊಂಡಿದ್ದಾರೆ. ಪೆಟ್ರೋಲ್ ಹಾಗೂ ಗ್ಯಾಸ್ ಬೆಲೆ ಗಗನಮುಖೀಯಾಗಿದೆ. ಮೋದಿಯವರು ಜನರ ಸಂಕಷ್ಟಗಳನ್ನು ಆಲಿಸಿ ಆಡಳಿತ ನಡೆಸಬೇಕು ಎಂದು ಧಾರವಾಡ ಸ್ಥಳೀಯ
ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾದ ಸಲೀಂ ಅಹ್ಮದ್ ಹೇಳಿದರು.
ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಫಲಿತಾಂಶ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ
ನೀಡಿದೆ. ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು ಸಾಕಷ್ಟು ಮನೆಗಳು ಬಿದ್ದಿವೆ. ಆದರೆ ಇಲ್ಲಿಯವರಿಗೂ ಯಾರಿಗೂ ಪರಿಹಾರ ನೀಡಿಲ್ಲ. ಇನ್ನು ಮುಂದಾದರೂ ರಾಜ್ಯ ಸರಕಾರವು ಜನಸ್ಪಂದನೆಗೆ ಮುಂದಾಗಲಿ ಎಂದರು.
ಭೂಹಗರಣದಲ್ಲಿಶ್ಯಾಮಿಲಾಗಿರುವಸಚಿವಬೈರತಿಬಸವರಾಜ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲವಾದಲ್ಲಿ ಅವರನ್ನು ಸಂಪುಟದಿಂದ ಕೈಬಿಡಬೇಕು. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲ ಜನರಿಗೆ ನ್ಯಾಯ ಒದಗಿಸುತ್ತದೆ. ಪಕ್ಷದ ಕಾರ್ಯಕರ್ತರು ಜಿಪಂ, ತಾಪಂ,ವಿಧಾನಸಭಾ ಚುನಾವಣೆಯಲ್ಲಿಅಧಿಕಾರಕ್ಕೆಬರುವ ತನಕ ಪಕ್ಷವನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಬೇಕು ಎಂದರು. ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಕೆಪಿಸಿಸಿ ವೀಕ್ಷಕ ನಾಗರಾಜ, ಕೃಷ್ಣಪ್ಪ ಕಂಬಳಿ, ವೀರನಗೌಡ ಪೊಲೀಸಗೌಡ್ರ, ರವೀಂದ್ರಗೌಡ ಪಾಟೀಲ, ಮಂಜನಗೌಡ ಪಾಟೀಲ, ಶೇರುಖಾನ ಕಾಬೂಲಿ, ನಿಂಗರಾಜ ಕೋಡಿಹಳ್ಳಿ ಸೇರಿದಂತೆ ನಗರಸಭಾ, ಗ್ರಾಪಂ ಹಾಲಿ-ಮಾಜಿ ಸದಸ್ಯರು, ಪಕ್ಷದ ಮುಖಂಡರು ಮತ್ತಿತರರು ಇದ್ದರು.