Advertisement

Onion: ಕರ್ನಾಟಕದಲ್ಲೂ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ?

08:51 PM Nov 04, 2023 | Team Udayavani |

ನವದೆಹಲಿ: ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಜನರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ರಿಯಾಯಿತಿ ದರದಲ್ಲಿ ಈರುಳ್ಳಿ ಪೂರೈಕೆ ಮಾಡಲು ಹೈದರಾಬಾದ್‌ ಕೃಷಿ ಸಹಕಾರ ಸಂಘ ಮುಂದಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಈರುಳ್ಳಿ ಸಿಗುವ ಸಾಧ್ಯತೆ ಇದೆ.

Advertisement

ಇದೇ ವೇಳೆ, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿರುವ ಮದರ್‌ ಡೇರಿಯ ಸಫ‌ಲ್‌ ಚಿಲ್ಲರೆ ಮಳಿಗೆಗಳಲ್ಲಿ ಭಾನುವಾರದಿಂದ ಪ್ರತಿ ಕೆಜಿ ಈರುಳ್ಳಿಯನ್ನು ಸಬ್ಸಿಡಿ ದರವಾದ 25 ರೂ.ಗೆ ಮಾರಾಟ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೇಂದ್ರದ ಪರವಾಗಿ ಭಾರತದ ರಾಷ್ಟ್ರೀಯ ಸಹಕಾರ ಒಕ್ಕೂಟವು(ಎನ್‌ಸಿಸಿಎಫ್) ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡುತ್ತಿದೆ. 20 ರಾಜ್ಯಗಳ 54 ನಗರಗಳಲ್ಲಿ ಎನ್‌ಸಿಸಿಎಫ್ 457 ಚಿಲ್ಲರೆ ಮಳಿಗೆಗಳನ್ನು ಹೊಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next