Advertisement

ಗಾಂಜಾ ಮಾರಾಟ: ಇಬ್ಬರ ಬಂಧನ, ಮೂವರು ಪರಾರಿ

11:59 AM Jun 03, 2017 | Harsha Rao |

ಬಜಪೆ: ಗಂಜಿಮಠ¨ ನಾರ್ಲಪದವಿನಲ್ಲಿ ಗಾಂಜಾ ಮಾರಾಟ ದಲ್ಲಿ ತೊಡಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಹಿತ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿ 100 ಗ್ರಾಂ ಗಾಂಜಾ ಸಹಿತ ಒಟ್ಟು 61,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೂವರು ಪರಾರಿಯಾಗಿದ್ದಾರೆ. 

Advertisement

ಕಾಸರಗೋಡು ತಳಂಗೆರೆಯ ವಿದ್ಯಾರ್ಥಿ ಮಹಮ್ಮದ್‌ ಅಶ್ವದ್‌ (21) ಮತ್ತು  ಬಜಪೆ ಸಮೀಪದ ಭಟ್ರಕೆರೆಯ ಅಜ್ಮಲ್‌ (18) ಬಂಧಿತರು. ಅವರಿಂದ 1ಬೈಕ್‌, 1 ಸ್ಕೂಟರ್‌, 100 ಗ್ರಾಂ ಗಾಂಜಾ ಸಹಿತ ಒಟ್ಟು 61,500ರೂ. ಮೌಲ್ಯದ 7 ಪ್ಯಾಕೇಟ್‌ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಮೇರೆಗೆ ಪೊಲೀಸರು ದಾಳಿ ನಡೆಸಿದರು.  ಈ ಸಂದರ್ಭ ಗಾಂಜಾ ಮಾರಾಟಕ್ಕೆ ಬಂದಿದ್ದ  ಅಲ್ತಾಫ್‌, ಬಿಲಾಲ್‌ ಮತ್ತು ತಾಜ್‌ ಅವರು ಪರಾರಿಯಾದರು.  

ಬಂಧಿತ ಮಹಮದ್‌ ಅಶ್ವದ್‌ ಪರಾರಿಯಾದ ವ್ಯಕ್ತಿಗಳಿಂದ ಗಾಂಜಾ ಪಡೆದುಕೊಂಡು ಅದನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಮಾರಾಟ ಮಾಡುತ್ತಿದ್ದನೆಂದು ತಿಳಿದು ಬಂದಿದೆ.  ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next