Advertisement

ಒಡಿಶಾ: ಕ್ವಾರಂಟೈನ್‌ ಕೇಂದ್ರಗಳಲ್ಲಿ ಸಂಬಳ, ಸರ್ಟಿಫಿಕೆಟು

10:21 AM May 23, 2020 | mahesh |

ಭುವನೇಶ್ವರ: ಯೋಗ, ಧ್ಯಾನ, ಕೆಲಸ… 21 ದಿನಗಳ ನಂತರ ಮನೆಗೆ ಮರಳುವಾಗ ಸರ್ಟಿಫಿಕೆಟ್‌!  ಒಡಿಶಾದ ಕ್ವಾರಂಟೈನ್‌ ಕೇಂದ್ರಗಳ ವೈಶಿಷ್ಟ್ಯ ಇದು. ವಿವಿಧ ರಾಜ್ಯಗಳಲ್ಲಿ ಅತಂತ್ರರಾಗಿದ್ದ ಲಕ್ಷಾಂತರ ಕಾರ್ಮಿಕರು ಈಗಾಗಲೇ ಒಡಿಶಾ ತಲುಪಿದ್ದಾರೆ. 21 ದಿನಗಳ ಕ್ವಾರಂಟೈನ್‌ ಅವಧಿಯಲ್ಲಿ ಅವರ ಕಾರ್ಯ ಕ್ಷಮತೆ ಕಾಪಾಡುವ ದೃಷ್ಟಿಯಿಂದ ಸರಕಾರ ವಿಭಿನ್ನ ಚಟುವಟಿಕೆಗಳನ್ನು ಆಯೋಜಿಸಿದೆ.

Advertisement

ಏನೇನು ಚಟುವಟಿಕೆ?: ಒಟ್ಟು 15 ಸಾವಿರ ಕೇಂದ್ರಗಳಲ್ಲಿನ ವಲಸೆ ಕಾರ್ಮಿಕರಿಗೆ ಯೋಗ, ಧ್ಯಾನ, ಆರೋಗ್ಯ ಸಂಬಂಧಿತ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಮಿಕರಿಗೆ ಯಾವುದೇ ರೀತಿಯ ಖನ್ನತೆ ಬಾಧಿಸದೇ ಇರಲು, ಯೋಗ- ಧ್ಯಾನಗಳ ತರಬೇತಿ ನೀಡಲಾಗುತ್ತದೆ. ಆನ್‌ಲೈನ್‌ ತರಗತಿಗಳ ಮೂಲಕ ಕೊರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಕ್ವಾರಂಟೈನ್‌ ಮುಗಿಸಿ, ಮನೆಗೆ ಮರಳುವಾಗ ಅವರಲ್ಲಿ ಯಾವುದೇ ಕೀಳರಿಮೆ ಇರಬಾರದು ಎನ್ನುವುದು ಸರಕಾರದ ಉದ್ದೇಶ.

ನರೇಗಾ ಕೆಲಸ: ಕ್ವಾರಂಟೈನ್‌ ಅವಧಿಯನ್ನು ವಲಸೆ ಕಾರ್ಮಿಕರಿಗೆ ಲಾಭದಾಯಕವಾಗಿ ಪರಿವರ್ತಿಸಲೂ ಸರಕಾರ ತೀರ್ಮಾನಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ನರೇಗಾ ಯೋಜನೆಗಳ ಮೂಲಕ ವಿವಿಧ ಕೆಲಸಗಳನ್ನು ಮಾಡಿಸಲು ಸಕಲ ಸಿದ್ಧತೆ ನಡೆದಿದೆ. “ನರೇಗಾ ಕೆಲಸದಿಂದ ಪ್ರತಿ ಕಾರ್ಮಿಕನೂ ನಿತ್ಯ 207 ರೂ. ಕೂಲಿ ಪಡೆಯಯುವಂತಾಗುತ್ತದೆ. ಮಾಸ್ಕ್, ಸ್ಯಾನಿಟೈಸರ್‌ ತಯಾರಿಕೆಯ ತರಬೇತಿಯನ್ನೂ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು’ ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಅನು ಗಾರ್ಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next