Advertisement

ಸಾಲಮರುಪಾವತಿ ವಾಯಿದೆ ವಿಸ್ತರಣೆ ಅವಶ್ಯ:ಡಾ|ಎಂ.ಎನ್‌.

03:45 AM Jan 17, 2017 | |

ಮಂಗಳೂರು: ರೂ. ಐನೂರು ಹಾಗೂ ರೂ. 1,000 ನೋಟು ಅಪಮೌಲಿÂàಕರಣದಿಂದ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಹಕಾರಿ ಸಂಘಗಳಿಂದ ರೈತರು ಪಡೆದಿರುವ ಕೃಷಿ ಸಾಲದ ಮರುಪಾವತಿ ವಾಯಿದೆಯನ್ನು ಇನ್ನೂ ಕನಿಷ್ಠ  2 ತಿಂಗಳು ವಿಸ್ತರಿಸಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ) ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಆಗ್ರಹಿಸಿದರು. 

Advertisement

ದೇಶದ ಬದಲಾದ ಆರ್ಥಿಕ ಸನ್ನಿವೇಶದಲ್ಲಿ ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲು ಮತ್ತು ತಂತ್ರಜ್ಞಾನದ ಬಳಕೆಯಿಂದ ಎದುರಾಗುವ ಸನ್ನಿವೇಶಗಳ ಕುರಿತು ರಾಜ್ಯಮಟ್ಟದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ಮನವಿ ಮನ್ನಿಸಿ ಈಗಾಗಲೇ ಸರಕಾರ ಮರುಪಾವತಿಯ ಅವಧಿಯನ್ನು 2 ತಿಂಗಳು ವಿಸ್ತರಿಸಿದ್ದು, ಇದು ಫೆಬ್ರವರಿಗೆ ಕೊನೆಗೊಳ್ಳಲಿದೆ. ಆದರೆ ನೋಟು ಅಪಮೌಲಿÂàಕರಣದಿಂದ ಉಂಟಾಗಿರುವ ಆರ್ಥಿಕ ಸಮಸ್ಯೆ ಇನ್ನೂ ಸಮರ್ಪಕಗೊಳ್ಳದ ಕಾರಣ ರೈತರ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳ ಮರುಪಾವತಿ ವಾಯಿದೆಯನ್ನು ಇನ್ನೆರಡು ತಿಂಗಳು ಸರಕಾರ ವಿಸ್ತರಿಸುವುದು ಅತೀ ಅವಶ್ಯ. ಈ ಕುರಿತು ಇಂದಿನ ಕಾರ್ಯಾಗಾರದಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.

ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನು ಅವರಿಸಿಕೊಂಡಿದ್ದು, ಸಹಕಾರ ಕ್ಷೇತ್ರವೂ ಇದಕ್ಕೆ ಸ್ಪಂದಿಸಬೇಕು. ತಂತ್ರಜ್ಞಾನ ಸಾಕಷ್ಟು ಮುಂದುವರಿದ ಇಂದಿನ ಸಂದರ್ಭ ಡಿಜಿಟಲ್‌ ಬ್ಯಾಂಕಿಂಗ್‌ ಸಹಕಾರ ಕ್ಷೇತ್ರಕ್ಕೆ ಅಗತ್ಯ. ಮುಂದಿನ ದಿನಗಳಲ್ಲಿ ನಗದು ರಹಿತ ವ್ಯವಸ್ಥೆಗೆ ಒಗ್ಗಿಕೊಳ್ಳದೇ ವಿಧಿಯೇ ಇಲ್ಲ ಎಂದು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಚಾರ್ಟರ್ಡ್‌ ಆಕೌಂಟೆಂಟ್‌ ಬಿ.ವಿ. ರವೀಂದ್ರನಾಥ್‌ ವಿವರಿಸಿದರು. 

ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ನಿವೃತ್ತ ಜಿಎಂ ಮಹಾಬಲ ಗಿರಿ ಅವರು, ಇಂದು ಡಿಜಿಟಲ್‌ ಬ್ಯಾಂಕಿಂಗ್‌ ಗ್ರಾಮೀಣ ಮಟ್ಟಕ್ಕೂ ತಲುಪಿದೆ ಎಂದು ಹೇಳಿದರು.
 
ಸಹಕಾರಿ ಇಲಾಖೆಯಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿದ ಹಿರಿಯ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು. 

ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಟಿ.ಜಿ. ರಾಜರಾಂ ಭಟ್‌, ಸದಾಶಿವ ಉಳ್ಳಾಲ್‌, ಸಲಹೆಗಾರ ಹಿಮವಂತ ಗೋಪಾಲ್‌, ಸಹಕಾರಿ ಯೂನಿಯನ್‌ ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ,ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಸಮನ್ವಯಕಾರ ಬಿ.ಸಿ. ಶಿವಾನಂದ್‌ ಉಪಸ್ಥಿತರಿದ್ದರು. ಲಕ್ಷ್ಮಣ್‌ ಕುಮಾರ್‌ ಮಲ್ಲೂರು ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next