Advertisement

ಈ ದಿನ ʼSalaarʼ ಟ್ರೇಲರ್‌ ರಿಲೀಸ್‌? ಸ್ಪೆಷೆಲ್‌ ಹಾಡಿಗೆ ಬಿಟೌನ್‌ ಬ್ಯೂಟಿ ಸ್ಟೆಪ್

03:03 PM Nov 09, 2023 | Team Udayavani |

ಹೈದರಾಬಾದ್: ಡಾರ್ಲಿಂಗ್‌ ಪ್ರಭಾಸ್‌ ಅವರ ʼಸಲಾರ್‌ʼ ಸಿನಿಮಾದ ಅಪ್ಡೇಟ್‌ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಒಂದು ಬಿಗ್‌ ಅಪ್ಡೇಟ್‌ ಹೊರಬಿದ್ದಿದೆ. ಆ ಮೂಲಕ ʼಸಲಾರ್‌ʼ ಮೇನಿಯಾದ ಫ್ಯಾನ್ಸ್‌ ಗಳು ಖುಷ್‌ ಆಗಿದ್ದಾರೆ.

Advertisement

ಪ್ರಶಾಂತ್‌ ನೀಲ್‌ ಅವರ ಪ್ಯಾನ್‌ ಇಂಡಿಯಾ ʼಸಲಾರ್‌ʼ ಸಟ್ಟೇರಿದ ದಿನದಿಂದ ಇದುವರೆಗೆ ಸದ್ದು ಮಾಡುತ್ತಲೇ ಇದೆ. ಸಿನಿಮಾದ ಕುರಿತಾದ ಒಂದೊಂದು ಅಪ್ಡೇಟ್‌ ಗಳು ಹೈಪ್‌ ಹೆಚ್ಚಿತಿದೆ.. ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಸಿನಿಮಾ ರಿಲೀಸ್‌ ಆಗಿ ಓಟಿಟಿಯಲ್ಲೂ ರಿಲೀಸ್‌ ಆಗಿರುತ್ತಿತ್ತು. ಆದರೆ ಅಂತಿಮ ಕೆಲ ದಿನಗಳಲ್ಲಿ ಸಿನಿಮಾ ರಿಲೀಸ್‌ ಮುಂದೂಡಿಕೆ ಆಯಿತು.

ಸಿನಿಮಾ ನೋಡಬೇಕಾದ ಅಭಿಮಾನಿಗಳಿಗಾಗಿ ʼಸಲಾರ್‌ʼ ಟೀಸರ್‌ ತುಣುಕು ಬಿಟ್ಟು, ಮತ್ತೆ ಕುತೂಹಲ ಹೆಚ್ಚಿಸಿತ್ತು. ಇದೀಗ ಟ್ರೇಲರ್‌ ರಿಲೀಸ್‌ ದಿನಾಂಕವನ್ನು ರಿವೀಲ್‌ ಆಗಿರುವುದು ಫ್ಯಾನ್ಸ್‌ ಗಳು ದೀಪಾವಳಿ ಹಬ್ಬಕ್ಕೆ ಸಿಕ್ಕ ಉಡುಗೆಯಂತೆ ಖುಷ್‌ ಆಗಿದ್ದಾರೆ.

ಇದನ್ನೂ ಓದಿ: Karthik Subbaraj:‌ ಆ ಎರಡು ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್‌ ಮಾಡಲು ಇಷ್ಟವಿರಲಿಲ್ಲ

ಡಿಸೆಂಬರ್‌ 1  ರಂದು ʼಸಲಾರ್‌ -1ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಲು ಸಿನಿಮಾ ತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಅದ್ಧೂರಿ ಸಮಾರಂಭದ ಮೂಲಕ ಟ್ರೇಲರ್‌ ರಿಲೀಸ್‌ ಆಗಲಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ. ಈ ಹಿಂದೆ ಟ್ರೇಲರ್‌ ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 2ನೇ ವಾರದಲ್ಲಿ ರಿಲೀಸ್‌ ಆಗಲಿದೆ ಎನ್ನಲಾಗಿತ್ತು.

Advertisement

ಟ್ರೇಲರ್‌ ಡೇಟ್‌ ಹೊರತು ಪಡಿಸಿ ಸಿನಿಮಾದ ಬಗ್ಗೆ ಮತ್ತೊಂದು ಅಪ್ಡೇಟ್‌ ಕೂಡ ಹೊರಬಿದ್ದಿದೆ. ʼಗದರ್‌ -2ʼ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್‌ ಬ್ಯೂಟಿ ಸಿಮ್ರತ್ ಕೌರ್ ʼಸಲಾರ್‌ʼ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. ಸ್ಪೆಷೆಲ್‌ ಹಾಡಿನಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಡಿಸೆಂಬರ್‌ 22 ರಂದು ಸಿನಿಮಾ ಗ್ರ್ಯಾಂಡ್‌ ಆಗಿ ತೆರೆ ಕಾಣಲಿದೆ. ಪ್ರಭಾಸ್‌,ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್, ತಿನ್ನು ಆನಂದ್, ಬ್ರಹ್ಮಾಜಿ, ಈಶ್ವರಿ ರಾವ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next