Advertisement

Salaar: ದೀಪಾವಳಿ ಹಬ್ಬಕ್ಕೆ ʼಸಲಾರ್‌ʼ ಗಿಫ್ಟ್; ಟ್ರೇಲರ್‌ ರಿಲೀಸ್‌ ಡೇಟ್‌ ರಿವೀಲ್

12:18 PM Nov 12, 2023 | Team Udayavani |

ಹೈದರಾಬಾದ್: ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಸಲಾರ್‌ʼ ಟ್ರೇಲರ್ ರಿಲೀಸ್‌ ಗೆ ಡೇಟ್‌ ಫಿಕ್ಸ್‌ ಆಗಿದೆ. ಆ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ.

Advertisement

ಡಾರ್ಲಿಂಗ್‌ ಪ್ರಭಾಸ್‌ ವೃತ್ತಿ ಬದುಕಿನ ಮತ್ತೊಂದು ದೊಡ್ಡ ಸಿನಿಮಾವೆಂದೇ ಹೇಳಲಾಗುತ್ತಿರುವ ʼಸಲಾರ್‌ʼ ರಿಲೀಸ್‌ , ಟೀಸರ್‌, ಪಾತ್ರವರ್ಗ ಹೀಗೆ ನಾನಾ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಕೆಲ ಪ್ರೊಡಕ್ಷನ್‌ ಸಂಬಂಧಿತ ಕೆಲಸದಿಂದ ಮುಂದೂಡಿಕೆ ಆಗಿತ್ತು. ‌ ಆದರೆ ʼಸಲಾರ್‌ʼ ಟೀಸರ್‌ ತುಣುಕು ಬಿಟ್ಟು, ಮತ್ತೆ ಕುತೂಹಲ ಹೆಚ್ಚಿಸಿತ್ತು.

ಇದೀಗ ಟ್ರೇಲರ್‌ ರಿಲೀಸ್‌ ಡೇಟ್‌ & ಟೈಮ್‌ ನ್ನು ದೀಪಾವಳಿ ಹಬ್ಬಕ್ಕೆ ಚಿತ್ರತಂಡ ಮಾಸ್‌ ಪೋಸ್ಟರ್‌ ವೊಂದನ್ನು ಬಿಟ್ಟು ರಿವೀಲ್‌ ಮಾಡಿದೆ. ಜೀಪ್‌ ಮೇಲೆ ಹತ್ತಿ ಗನ್‌ ವೊಂದನ್ನು ಶೂಟ್‌ ಮಾಡುವ ಪೋಸ್ಟರ್‌ ನ್ನು ರಿಲೀಸ್ ಮಾಡಿ ಟ್ರೇಲರ್‌ ರಿಲೀಸ್‌ ಡೇಟ್‌ & ಟೈಮ್‌ ರಿವೀಲ್‌ ಮಾಡಿದೆ.

ಇದನ್ನೂ ಓದಿ: ISIS Link; ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ 3 ವಿದ್ಯಾರ್ಥಿಗಳ ಬಂಧನ

ಈ ಹಿಂದೆ ಡಿಸೆಂಬರ್‌ ಮೊದಲ ವಾರದಲ್ಲಿ ಟ್ರೇಲರ್‌ ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಇದೀಗ ಡಿ.1 ರಂದು ಸಂಜೆ 7:19 ಕ್ಕೆ ಟ್ರೇಲರ್‌ ಮಾಡುವುದು ಪಕ್ಕಾ ಎಂದು ಚಿತ್ರತಂಡ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿ ಫ್ಯಾನ್ಸ್‌ ಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

Advertisement

ಡಿಸೆಂಬರ್‌ 22 ರಂದು ಸಿನಿಮಾ ಗ್ರ್ಯಾಂಡ್‌ ಆಗಿ ತೆರೆ ಕಾಣಲಿದೆ. ಪ್ರಭಾಸ್‌,ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್, ತಿನ್ನು ಆನಂದ್, ಬ್ರಹ್ಮಾಜಿ, ಈಶ್ವರಿ ರಾವ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next