Advertisement

ಪದಕ ನಿರೀಕ್ಷೆಯಲ್ಲಿ ಸಾಕ್ಷಿ , ಭಜರಂಗ್‌

12:35 PM Aug 21, 2017 | |

ಪ್ಯಾರಿಸ್‌: ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಕಠಿನ ತರಬೇತಿ ನಡೆಸಿರುವ ಒಲಿಂಪಿಕ್‌ ಕಂಚು ವಿಜೇತೆ ಸಾಕ್ಷಿ ಮಲಿಕ್‌ ಮತ್ತು ಏಶ್ಯನ್‌ ಚಾಂಪಿಯನ್‌ ಭಜರಂಗ್‌ ಪೂನಿಯ ಅವರು ಸೋಮವಾರದಿಂದ ಆರಂಭ ವಾಗುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಸವಾಲಿನ ನೇತೃತ್ವ ವಹಿಸಲಿದ್ದಾರೆ.

Advertisement

58 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್‌ ಕಂಚು ಗೆದ್ದ ಸಾಕ್ಷಿ ಮೇಲೆ ಭಾರೀ ನಿರೀಕ್ಷೆ ಇಡಲಾ ಗಿದೆ. ಮೇ ತಿಂಗಳಲ್ಲಿ ನಡೆದ ಏಶ್ಯನ್‌ ಸ್ಪರ್ಧೆಯ 60 ಕೆ.ಜಿ. ವಿಭಾಗದಲ್ಲಿ ಅವರು ಬೆಳ್ಳಿ ಜಯಿಸಿದ್ದರು. ಇದೇ ಕೆ.ಜಿ. ವಿಭಾಗದಲ್ಲಿ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಸಾಕ್ಷಿ ಅವರಿಂದ ಚಿನ್ನ ನಿರೀಕ್ಷಿಸಲಾಗಿದೆ. 

ಏಶ್ಯನ್‌ ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದ ವಿನೀಶ್‌ ಪೋಗಟ್‌ ವನಿತೆಯರ 48 ಕೆ.ಜಿ. ವಿಭಾಗದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next