Advertisement

“ಸಕ್ಷಮ್‌ ರಾಷ್ಟ್ರೀಯ ಸ್ಪರ್ಧೆ’ವಿಜೇತರ ವಿದೇಶ ಪ್ರವಾಸ

11:33 AM Aug 01, 2017 | |

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಮಿತ ಬಳಕೆ ಮೂಲಕ ಪರಿಸರ ರಕ್ಷಣೆ ಹಾಗೂ ಜಾಗೃತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪಿಸಿಆರ್‌ಎ ಸಕ್ಷಮ್‌ ರಾಷ್ಟ್ರೀಯ ಸ್ಪರ್ಧೆ-2017 ಅನ್ನು ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ (ಪಿಸಿಆರ್‌ಎ) ಆಯೋಜಿಸಿದೆ. 

Advertisement

ಸಕ್ಷಮ್‌ ರಾಷ್ಟ್ರೀಯ ಸ್ಪರ್ಧೆಯ 2016ರ ವಿಜೇತ ತಂಡವನ್ನು ದೆಹಲಿಯಲ್ಲಿ ಕೇಂದ್ರ ಇಂಧನ ರಾಜ್ಯ ಖಾತೆ ಸಚಿವ ಧಮೇಂದ್ರ ಪ್ರಧಾನ್‌ ಅವರು ಸನ್ಮಾನಿಸಿದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ 1.60 ಕೋಟಿ ಮೌಲ್ಯದ ಪ್ರಶಸ್ತಿಗಳನ್ನು (ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ನಗದು ಬಹುಮಾನ ಸೇರಿದಂತೆ ಜಪಾನ್‌ ದೇಶ ಪ್ರವಾಸ ಅವಕಾಶ) ನೀಡಿ ಗೌರವಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಸಂರಕ್ಷಣೆ ಮತ್ತು ಪರಿಸರ ರಕ್ಷಣೆ ಪ್ರಮುಖ ಉದ್ದೇಶದಿಂದ ಪ್ರತಿ ವರ್ಷ ಆಯೋಜಿಸುವ ಈ ಸ್ಪರ್ಧೆಗೆ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗವಿದೆ. 2017ರ ಸಕ್ಷಮ ರಾಷ್ಟ್ರೀಯ ಸ್ಪರ್ಧೆಯನ್ನು ದೇಶಾದ್ಯಂತ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಶಾಲೆಗಳಿಗೆ ವಿಸ್ತರಿಸುವ ಮೂಲಕ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡುವ ಉದ್ದೇಶವೂ ಸಂಸ್ಥೆಗಿದೆ ಎಂದು ಅವರು ತಿಳಿಸಿದರು.

ಈ ಸಾಲಿನಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಸಿಂಗಾಪುರ ಪ್ರವಾಸ, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ನಗದು ಹಾಗೂ ಗಿಫ್ಟ್‌ ವೋಚರ್‌ ಹಾಗೂ ಪ್ರಮಾಣಪತ್ರ ನೀಡುವ ಯೋಜನೆಯಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಶಾಲೆಗಳು www.pcracompetitions. org www.pcra.org/competitions. html ಹಾಗೂ ಮೊಬೈಲ್‌ ಆ್ಯಪ್‌ pcracompetitions ಅರ್ಜಿಯನ್ನು ಡೌನ್ ಲೋಡ್‌ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next