Advertisement
ಇದು ಮಾಮೂಲಿ ಯುವಕ-ಯುವತಿಯರ ಪ್ರೇಮ ಕಹಾನಿ ಅಲ್ಲ. ಕಾಡು ಮತ್ತು ನಾಡಿನ ಆನೆಗಳ “ಪ್ರೀತಿಯ ದಂತ’ ಕಥೆ. ಮನುಷ್ಯನ ಪ್ರೀತಿಗಿಂತ ತುಸು ಹೆಚ್ಚೇ ಎನ್ನು ವಂತೆ ವ್ಯಕ್ತವಾಗಿದ್ದು ವಿಶೇಷ. ಸಕ್ರೆಬೈಲು ಆನೆ ಬಿಡಾರದ ಹೆಣ್ಣಾನೆ ನೇತ್ರಾ ತನ್ನ ಮರಿಯೊಂದಿಗೆ ಈಗ ಪ್ರಿಯಕರನ ಸೇರಲು ಮನೆ ಬಿಟ್ಟು ಕಾಡು ಸೇರಿದ್ದಾಳೆ. ತವರಿಗಿಂತ ಪ್ರಿಯಕರನ ಮಡಿಲಲ್ಲಿ ಹಾಯಾಗಿದ್ದಾಳೆ.
Related Articles
Advertisement
ಕೋರ್ಟ್‌ಶಿಪ್ ಬಿಹೇವಿಯರ್ ಅಥವಾ ಪ್ರಣಯದ ವರ್ತನೆ ಮೂಲಕ ಗಂಡಾನೆಗಳು ಹೆಣ್ಣಾನೆಗಳನ್ನು ಆಕರ್ಷಿಸುತ್ತವೆ. ಆಂಗಿಕ ಭಾವ, ಗುಣಲಕ್ಷಣ, ವರ್ತನೆಯಿಂದ ಗಂಡಾನೆಗಳು ಹೆಣ್ಣಾನೆಗಳನ್ನು ಆಕರ್ಷಿಸುತ್ತವೆ. ಒಂದು ಹೆಣ್ಣಾನೆ ಸೆಳೆಯಲುಕನಿಷ್ಠ ಒಂದು ವಾರವಾದರೂ ಬೇಕು. ಆಕರ್ಷಣೆಗೊಳಗಾದ ನಂತರ ತಿಂಗಳುಗಟ್ಟಲೆ ಜತೆಗಿದ್ದು ಲೈಂಗಿಕ ಸಂಪರ್ಕ ಹೊಂದುತ್ತವೆ. ಆಸೆ ಈಡೇರಿದ ಬಳಿಕ ಬಿಟ್ಟು ಕಳಿಸುತ್ತವೆ.
ನೇತ್ರಾ ಕೂಡ ಗಂಡಾನೆಗೆ ಆಕರ್ಷಣೆಗೊಂಡಿದ್ದುಮಾವುತರು, ಕಾವಾಡಿಗಳು ವಾಪಸ್ ಕರೆತರಲು ಹರಸಾಹಸ ಪಡುತ್ತಿದ್ದಾರೆ. ಬಿಡಾರದ ಸಾಕಾನೆಗಳ ಮೂಲಕ ಕರೆತರುವ ಪ್ರಯತ್ನ ಕೈಗೂಡಿಲ್ಲ. ಈ ಹಿಂದೆ ಅನೇಕ ಆನೆಗಳು ಈ ರೀತಿ ನಡೆದುಕೊಂಡಿರುವ ಉದಾಹರಣೆಗಳಿವೆ. ಹಾಗಾಗಿ ಕೆಲ ದಿನಗಳ ಲ್ಲಿ ವಾಪಸ್ ಬರುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ನೇತ್ರಾಳ ಹಠ ಯಶಸ್ವಿಯಾದರೆ ಸಕ್ರೆಬೈಲಿಗೆ ಕಾಡಾನೆ ಜೀನ್ ಇರುವ ಅತಿಥಿ ಬರುವುದು ಖಾತ್ರಿಯಾದಂತೆ.
ಅವಧಿಗೆ ಮುನ್ನ ವೇ ನೇತ್ರಾ ಡೇಟಿಂಗ್ಸಾಮಾನ್ಯವಾಗಿ ಹೆಣ್ಣಾನೆಗಳು ಮರಿ ಹಾಕಿ ಎರಡು ವರ್ಷ ಬಳಿಕ ಬೇರೆ ಆನೆಜತೆಡೇಟಿಂಗ್‌ಗೆಹೋಗುತ್ತವೆ. ಆದರೆಈ ಪ್ರಕರಣದಲ್ಲಿ ತನ್ನ ಎರಡು ವರ್ಷದ ಮರಿ ಜತೆಯೇ ಹೊರಟಿರುವುದು ಆಶ್ಚರ್ಯ ಮೂಡಿಸಿದೆ. ಕರ್ನಾಟಕದಲ್ಲಿರುವ ಆನೆಗಳಲ್ಲಿ ಒಂದೇ ರೀತಿಯ ವಂಶಾವಳಿ ಇರುವುದರಿಂದಕಾಡಾನೆ ಜತೆ ಸಂಪರ್ಕ ಹೊಂದಿ ಮಗು ಜನಿಸಿದರೂ ಯಾವುದೇ ರೀತಿಯ ಬದಲಾವಣೆ ಇರಲ್ಲ ಎನ್ನುತ್ತಾರೆ ಅಧಿಕಾರಿಗಳು. ಸಂಗಾತಿ ಸಿಗದಿದ್ದರೆ ದಾಳಿ!
ಹೆಣ್ಣಾನೆಕಂಡರೆ ಹಾತೊರೆಯುವಕಾಡಾನೆಗಳು ಸಂಗಾತಿ ದೊರೆಯದಿದ್ದಾಗ ಗಂಡಾನೆಗಳನ್ನೇ ಮುಗಿಸಿ ಬಿಡುತ್ತವೆ. ಈಚೆಗೆ ರಂಗ ಎಂಬ ಆನೆಯನ್ನು ಇದೇ ರೀತಿ ಕಾಡಾನೆಗಳು ತಿವಿದು ಕೊಂದಿದ್ದವು. ಬಿಡಾರದ ಹೆಣ್ಣಾನೆಗಳ ಜತೆ ಡೇಟಿಂಗ್ ಮಾಡುವ ಭದ್ರಾ ಅಭಯಾರಣ್ಯದಿಂದ ಬಂದಿರುವ ಮೂರುಕಾಡಾನೆಗಳು ಗಂಡಾನೆಗಳಿಗೆ ಯಮದೂತರಾಗಿ ಪರಿಣಮಿಸಿವೆ. ಬಿಡಾರದ ಅನೇಕ ಆನೆಗಳು ಇದೇ ರೀತಿ ಮೃತಪಟ್ಟಿವೆ. – ಶರತ್ ಭದ್ರಾವತಿ