Advertisement
ಉತ್ತರ ಕರ್ನಾಟಕದ ಮಟ್ಟಿಗೆ ಸಾಮಾಜಿಕ ಉದ್ಯಮಕ್ಕೊಂದು ಹೊಸ ಭಾಷ್ಯೆ ಬರೆದ ದೇಶಪಾಂಡೆ ಫೌಂಡೇಶನ್, ಉದ್ಯಮ ಕ್ಷೇತ್ರದಲ್ಲಿ ವಿಶೇಷವಾಗಿಮಹಿಳೆಯರು ಹಾಗೂ ಸಣ್ಣ-ಸೂಕ್ಷ್ಮ ಉದ್ಯಮದಾರರ ಕೌಶಲ ಹೆಚ್ಚಳ, ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಿದೆ. ಹೊಲಿಗೆ, ಎಂಬ್ರಾಯಿಡರ್ ಕೆಲಸ, ಟೆರಾಕೋಟಾ, ಕಸೂತಿ ಕಲೆ, ಆಹಾರ ಪದಾರ್ಥಗಳತಯಾರಿಕೆ, ಹ್ಯಾಂಡಿಕ್ರಾಫ್ಟ್, ಲೋಹದ ಉತ್ಪನ್ನಗಳು ಹೀಗೆ ವಿವಿಧ ವೃತ್ತಿಯಲ್ಲಿದ್ದರೂ ತಮ್ಮದೇ ಸೀಮಿತ ಸ್ಥಿತಿಯಲ್ಲಿದ್ದ, ಕೌಶಲ, ಹೊಸ ವಿನ್ಯಾಸ, ಮಾರುಕಟ್ಟೆ ಕೊರತೆ ಎದುರಿಸುತ್ತಿದ್ದ ಸಣ್ಣ-ಸೂಕ್ಷ್ಮ ಮಹಿಳಾಉದ್ಯಮದಾರರನ್ನು ಗುರುತಿಸಿ ಅವರಿಗೆ ತರಬೇತಿ,ಮಾರ್ಗದರ್ಶನ, ಸಾಲ ಸಂಪರ್ಕ, ಮಾರುಕಟ್ಟೆ ಬೆಂಬಲ ಕಾರ್ಯವನ್ನು ಕೈಗೊಳ್ಳ ಲಾಗಿದ್ದು,ಇದೆಲ್ಲದರ ಪರಿಣಾಮವಾಗಿ ತರಬೇತಿ ಪಡೆದಮಹಿಳಾ ಉದ್ಯಮದಾರರ ಒಟ್ಟಾರೆ ವಹಿವಾಟು18-19 ಲಕ್ಷ ರೂ.ಗಳಿಂದ 1.50 ಕೋಟಿ ರೂ.ಗೆ ನೆಗೆತಕಾಣುವಂತಾಗಿದೆ.
Related Articles
Advertisement
ಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ: ಉದ್ಯಮಶೀಲತೆ, ಉದ್ಯಮ ಬೆಳವಣಿಗೆ, ಹೊಸ ವಿನ್ಯಾಸ ಹಾಗೂ
ಕೌಶಲತೆ ತರಬೇತಿ-ಮಾರ್ಗದರ್ಶನ ಪಡೆದ ಮಹಿಳಾ ಉದ್ಯಮದಾರರು ತಮ್ಮದೇ ಉತ್ಪಾದಕ ಕಂಪನಿ ಆರಂಭಿಸಿ ಒಂದೇ ಬ್ರಾಂಡ್‌ನಡಿ ಮಾರಾಟಕ್ಕೆ ಚಿಂತಿಸಿದ ಪರಿಣಾಮಸ್ವಾವಲಂಬಿ ಸಖೀ ಉತ್ಪಾದಕರ ಕಂಪನಿ ಅಸ್ತಿತ್ವಕ್ಕೆ ಬಂದಿದೆ.
2020ರ ಅ.9ರಂದು ಕಂಪನಿ ನೋಂದಣಿ ಮಾಡಲಾಗಿದ್ದು, ಕಂಪನಿಯಲ್ಲಿ ಸುಮಾರು 200 ಜನಷೇರುದಾರರು ಇದ್ದಾರೆ. ಕಂಪನಿ ಸದಸ್ಯತ್ವ ಶುಲ್ಕವಾಗಿ ಪ್ರತಿ ಸದಸ್ಯರಿಂದ 100 ರೂ. ಪಡೆಯಲಾಗಿದ್ದು,ಷೇರು ಹಣವಾಗಿ ಒಬ್ಬರಿಂದ 500 ರೂ.ಗಳನ್ನು ಪಡೆಯಲಾಗಿದ್ದು, 1.20 ಲಕ್ಷ ರೂ. ಷೇರು ಬಂಡವಾಳಶೇಖರಣೆಯಾಗಿದೆ. ಕಂಪನಿಯಲ್ಲಿ ಪ್ರತಿಯೊಬ್ಬ ಷೇರುದಾರರಿಗೆ ಒಂದು ಷೇರು, ಒಂದು ಮತದ ಅವಕಾಶಕ್ಕೆ ಸೀಮಿತಗೊಳಿಸಲಾಗಿದೆ.
ಕಂಪನಿ ಮಾಡುವುದರಿಂದ ಒಂದೇ ಬ್ರಾಂಡ್‌ನಡಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಮಾರಾಟಕ್ಕೆ ಸುಲಭವಾಗಲಿದೆ. ಜತೆಗೆ ಕಚ್ಚಾ ಸಾಮಗ್ರಿಗಳನ್ನುಸಾಮೂಹಿಕವಾಗಿ ಖರೀದಿಸುವುದರಿಂದ ಕಡಿಮೆದರದಲಿ ದೊರೆಯುಲಿದೆ. ಈಗಾಗಲೇ ಕಂಪನಿಜತೆ ಒಡಂಬಡಿಕೆ ಮಾಡಿಕೊಂಡಿರುವ ಮುಂಬೆ„ನ ಕಂಪನಿಯೊಂದು ಬೈ ಬ್ಯಾಕ್ ಗ್ಯಾರೆಂಟಿ ಅಡಿಯಲ್ಲಿಬ್ಯಾಗ್‌ಗಳನ್ನು ತಯಾರಿಸಿಕೊಡಲು ಕೇಳಿದ್ದು, ಈಗಾಗಲೇ ಬ್ಯಾಗ್‌ಗಳನ್ನು ತಯಾರಿಸಿ ಕಳುಹಿಸಲಾಗಿದೆ. ಬರುವ ದಿನಗಳಲ್ಲಿ ಕೆಲವೊಂದು ಉತ್ಪನ್ನಗಳನ್ನು ರಫ್ತು ಮಾಡುವಚಿಂತನೆಯನ್ನು ಹೊಂದಲಾಗಿದೆ. ನಬಾರ್ಡ್ ನೆರವು ಸಹ ದೊರೆಯತೊಡಗಿದೆ.
ಲಾಕ್‌ಡೌನ್ ಸಮಯದಲ್ಲಿ ಸುಮಾರು 1.72ಲಕ್ಷ ಮಾಸ್ಕ್ಗಳನ್ನು ತಯಾರಿಸಲಾಗಿದ್ದು, ಮೂರುಲೇಯರ್‌ನ ಸ್ಟೆರಲೈಡ್ ಮಾಸ್ಕ್ಗಳನ್ನು ಮಾರುಕಟ್ಟೆಗೆನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣಗಿಸಿದಬಾಳೆಹಣ್ಣು(ಸುಕೇಳಿ) ತಯಾರಿಕೆಗೆ ಮಹಿಳೆಯರಿಗೆತರಬೇತಿ ನೀಡಲಾಗಿದ್ದು, ಪುಣೆ-ಮುಂಬೈ ಇನ್ನಿತರಕಡೆಯಿಂದ ಪ್ರಸ್ತುತ ಮಾಸಿಕ 5 ಕ್ವಿಂಟಲ್‌ನಷ್ಟುಮಾರಾಟವಾಗುತ್ತಿದ್ದು, ಅದನ್ನು 12-15 ಕ್ವಿಂಟಲ್‌ಗೆಹೆಚ್ಚಿಸಲು ಯೋಜಿಸಲಾಗಿದೆ. ಒಟ್ಟಾರೆಯಾಗಿ ಮಹಿಳಾ ಉದ್ಯಮದಾರರನ್ನು ಕೌಶಲಯುತಗೊಳಿಸುವ ಆಮೂಲಕ ಸುಸ್ಥಿರ ಉದ್ಯಮ ನಿರ್ಮಾಣದ ಮಹತ್ವದ ಕಾರ್ಯವನ್ನು ದೇಶಪಾಂಡೆ ಫೌಂಡೇಶನ್ ಮಾಡುತ್ತಿದೆ.
ಕರ್ನಾಟಕದಲ್ಲಿ ಮಹಿಳೆಯರ ಉದ್ಯಮಬೆಳವಣಿಗೆಗೆ ಉತ್ತಮ ಅವಕಾಶ ಇದ್ದು,ಬರುವ ದಿನಗಳಲ್ಲಿ ಉತ್ಪಾದಕರ ಕಂಪನಿಯನ್ನು ಪ್ರತಿ ಜಿಲ್ಲೆಯಲ್ಲೂ ಕೈಗೊಳ್ಳಲು, ಒಂದೇಬ್ರಾಂಡ್‌ನಡಿ ಉತ್ಪನ್ನಗಳ ಮಾರಾಟದ ಜತೆಗೆ ರಫ್ತುಗೆ ಗಮನ ನೀಡಲಾಗುತ್ತದೆ. ಲಿಜ್ಜತ್‌ಪಾಪಡ್ ಮಾದರಿಯಲ್ಲಿ ಸ್ವಂತ ಕಂಪನಿ, ಸ್ವಂತಉತ್ಪಾದನೆ ಮಾದರಿಯಲ್ಲಿ ಉತ್ತರ ಕರ್ನಾಟಕಮಹಿಳೆಯರನ್ನು ಸಜ್ಜುಗೊಳಿಸಲಾಗುತ್ತಿದೆ. – ಸಂದೀಪ ಬಿ., ಕಾರ್ಯನಿರ್ವಾಹಕ, ದೇಶಪಾಂಡೆ ಫೌಂಡೇಶನ್ ಸಿಇಒ ಕಚೇರಿ
ಮಹಿಳಾ ಉದ್ಯಮದಾರರಲ್ಲಿ ತರಬೇತಿನಂತರ ಮಹತ್ವದ ಬದಲಾವಣೆಕಂಡು ಬಂದಿದೆ. ಹೊಸ ವಿನ್ಯಾಸ, ಗುಣಮಟ್ಟದ ಉತ್ಪನ್ನದ ಜತೆಗೆ ಆದಾಯದಲ್ಲಿಬೆಳವಣಿಗೆಯಾಗಿದ್ದು, ಅನೇಕ ಮಹಿಳೆಯರು ಯಶಸ್ವಿನತ್ತ ಸಾಗುತ್ತಿದ್ದಾರೆ. – ಈರಣ್ಣ ರೊಟ್ಟಿ, ಇಡಿಪಿ ಯೋಜನೆ ಮುಖ್ಯಸ್ಥ
–ಅಮರೇಗೌಡ ಗೋನವಾರ