Advertisement

ಮಳೆಗೆ ಕೃಷಿ ಚಟುವಟಿಕೆಗಳು ಸ್ಥಗಿತ; ಕತ್ತಲಿನಲ್ಲಿ ಹಲವು ಗ್ರಾಮ

01:08 PM Aug 08, 2019 | Team Udayavani |

ಸಕಲೇಶಪುರ: ತಾಲೂಕಿನಲ್ಲಿ ಧಾರಾ ಕಾರವಾಗಿ ಮಳೆ ಸುರಿಯುತ್ತಿದ್ದು ಇದರಿಂದ ಬಹುತೇಕ ನದಿ, ಕೆರೆ, ಹಳ್ಳ, ಜಲಪಾತಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Advertisement

ಕಳೆದ ಆ.1ರಿಂದ ನಿರಂತರವಾಗಿ ತಾಲೂಕಿನಲ್ಲಿ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಹೇಮಾವತಿ ನದಿ, ಕೆಂಪುಹೊಳೆ ಸೇರಿದಂತೆ ಬಹುತೇಕ ನದಿಗಳ ನೀರಿನ ಮಟ್ಟ ಭರ್ಜರಿಯಾಗಿ ಏರಿದೆ. ಮಂಗಳವಾರ ರಾತ್ರಿ ಭರ್ಜರಿ ಯಾಗಿ ಮಳೆ ಸುರಿದಿದ್ದು ಈ ಸಮಯ ದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದಿ ರುವ ಘಟನೆ ನಡೆದಿದೆ. ಸಾಮಾನ್ಯ ಮಳೆಗಾಲದ ಮಳೆಗೆ ಸಿಡಿಲು ಬಡಿಯು ವುದಿಲ್ಲ. ಆದರೆ ಸಿಡಿಲು ಮಳೆಗಾಲದಲ್ಲಿ ಸಿಡಿಲು ಬಡಿದಿರುವುದು ಆಶ್ಚರ್ಯ ಉಂಟು ಮಾಡಿದೆ.

ಸಿಡಿಲು ಸದ್ದಿಗೆ ಪ್ರಜ್ಞೆ ತಪ್ಪಿದ ಯುವತಿ: ಮಂಗಳವಾರ ರಾತ್ರಿ ಹಲಸು ಲಿಗೆ ಗ್ರಾಪಂ ವ್ಯಾಪ್ತಿಯ ಚಿಕ್ಕಪುರ ಗ್ರಾಮದ ರಾಜು ಎಂಬುವರ ಮನೆಗೆ ಸಿಡಿಲು ಬಡಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ರಮ್ಯ ಎಂಬುವರು ಅದರ ಸದ್ದಿಗೆ ಪ್ರಜ್ಞೆತಪ್ಪಿ ಬಿದ್ದಿದ್ದು, ಕ್ರಾಫ‌ರ್ಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರಲಾಗಿದೆ. ಸಿಡಿಲು ಬಡಿದ ಹಿನ್ನೆಲೆಯಲ್ಲಿ ಮನೆಯ ಚಾವಣಿ ಧ್ವಂಸವಾಗಿದೆ.

ಶಿರಾಡಿ ಘಾಟಿಯಲ್ಲಿ ಬಿದ್ದ ಮರ: ಮಳೆಯ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ಶಿರಾಡಿ ಘಾಟ್‌ನಲ್ಲಿ ಮರವೊಂದು ಬಿದ್ದಿದ್ದರಿಂದ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಯಾಗಿದೆ. ತಕ್ಷಣ ಬಿದ್ದ ಮರವನ್ನು ತೆರವುಗೊಳಿಸಿ ವಾಹನ ಗಳ ಸಂಚಾರಕ್ಕೆ ಅನುವು ಮಾಡಿಕೊಡ ಲಾಯಿತು. ಕಳೆದ ವರ್ಷ ಸುರಿದ ಮಳೆಗೆ ಶಿರಾಡಿ ಘಾಟ್‌ನ ಹಲವೆಡೆ ಭೂಕುಸಿತ ಉಂಟಾಗಿ ಹಲವು ತಿಂಗಳು ಗಳ ಕಾಲ ವಾಹನಗಳ ಸಂಚಾರ ಬಂದ್‌ ಮಾಡಲಾಗಿತ್ತು. ಅದೃಷ್ಟವಶಾತ್‌ ದೊಡ್ಡ ಪ್ರಮಾಣದ ಭೂ ಕುಸಿತವಾಗಿಲ್ಲ.

ರೈಲು ಸಂಚಾರ ರದ್ದು: ಭಾರೀ ಮಳೆ ಯಿಂದಾಗಿ ಶಿರಿವಾಗಿಲು ಸಮೀಪ 86/100 ಮೈಲುಗಲ್ಲು ಸಮೀಪ ಮಂಗಳವಾರ ರೈಲುಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ಬೆಂಗಳೂರು ಮಂಗಳೂರು ನಡುವೆ ರೈಲು ಸಂಚಾರ ಬುಧವಾರವೂ ಸಹ ರೈಲು ಸಂಚಾರ ರದ್ದು ಮಾಡಲಾಗಿದ್ದು, ಈ ವಾರ ರೈಲು ಸಂಚಾರ ಅನುಮಾನವಾಗಿದೆ.

Advertisement

ಕೃಷಿ ಚಟುವಟಿಕೆ ಸ್ಥಗಿತ: ಮಳೆಯ ಆರ್ಭಟದಿಂದಾಗಿ ತಾಲೂಕಾದ್ಯಂತ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದೆ. ಬಹುತೇಕ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆೆ. ಕಾಫಿ ತೋಟಗಳಲ್ಲೂ ಸಹ ಕೆಲಸಗಳನ್ನು ನಿಲ್ಲಿಸಿರುವುದರಿಂದ ಕೂಲಿ ಕಾರ್ಮಿ ಕರುಗಳು ಕೆಲಸವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಗ್ಗತ್ತಲಿನಲ್ಲಿ ಗ್ರಾಮಗಳು: ಪಶ್ಚಿಮ ಘಟ್ಟ ತಪ್ಪಲಿನ ಬಿಸ್ಲೆ, ಮಾಗೇರಿ, ಮಾರನಹಳ್ಳಿ, ಕಡಗರ ವಳ್ಳಿ, ಹೊಂಗಡಹಳ್ಳ, ಅತ್ತಿಹಳ್ಳಿ, ಕಾಡು ಮನೆ ಗ್ರಾಮಗಳಲ್ಲಿ ವಿದ್ಯುತ್‌ ಇಲ್ಲದೇ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ.

ಮೊಬೈಲ್ಗಳು ಸ್ವಿಚ್ ಆಫ್: ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ಮಳೆಯಿಂದ ವಿದ್ಯುತ್‌ ಪೂರೈಕೆ ಸರಿಯಾಗಿ ಆಗದ ಕಾರಣ ವಿದ್ಯುತ್‌ ಇಲ್ಲದೇ ಮೊಬೈಲ್ ಬಹುತೇಕರ ಮೊಬೈಲ್ಗಳು ಸ್ವಿಚ್ ಆಫ್ ಆಗಿತ್ತು. ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳು ಕೈಕೊಟ್ಟಿದ್ದರಿಂದ ನೆಟ್ವರ್ಕ್‌ ಇಲ್ಲದೇ ಪರದಾಡು ವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next