ಸಕಲೇಶಪುರ: ಕಾಣೆಯಾಗಿದ್ದ ಭಾರತೀಯ ನೌಕ ಪಡೆಯ ಹೆಲಿಕಾಪ್ಟರ್‌ನ್ನು ಹುಡುಕಿಕೊಟ್ಟ ವ್ಯಕ್ತಿ ಯೋರ್ವರು ಸರ್ಕಾರ ನೀಡುತ್ತದೆಂದು ಕನಸು ಕಂಡಿದ್ದ 4 ಎಕರೆ ಭೂಮಿಗಾಗಿ ಕಳೆದ 27 ವರ್ಷಗಳಿಂದ ಇಂದಿಗೂ ಸಹ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.
Advertisement
1992ರಲ್ಲಿ ಕಾಪ್ಟರ್ ಪತನ: 1992 ನೇ ಇಸವಿ ಡಿಸೆಂಬರ್ 22 ರಂದು ಬೆಂಗಳೂರಿನಿಂದ ಮಂಗಳೂರಿ ನೆಡೆಗೆ ಮೂವರು ಯೋಧರನ್ನು ಹೊತ್ತೂಯ್ಯುತ್ತಿದ್ದ ಕೇರಳದ ಕೊಚ್ಚಿನ್ ವಿಭಾಗಕ್ಕೆ ಸೇರಿದ ಚೇತಕ್ ಕೊಚ್ಚಿನ್ ಹೆಲಿಕಾಪ್ಟರ್ ಅತಿಯಾದ ಮಂಜಿನಿಂದಾಗಿ ತಾಲೂಕಿನ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಪತನ ಗೊಂಡಿತ್ತು. ಈ ವೇಳೆ ಹೆಲಿಕಾಪ್ಟರ್ ಪತ್ತೆ ಕಾರ್ಯಕ್ಕಾಗಿ ಸೇನಾ ಪಡೆ ಐದು ಹೆಲಿಕಾಪ್ಟರ್‌ಗಳ ಸಹಾಯ ದೊಂದಿಗೆ ಸ್ಥಳೀಯ ಅಧಿಕಾರಿಗಳನ್ನು ಬಳಸಿಕೊಂಡು 120 ಸೈನಿಕರು ಸತತ 45 ದಿನಗಳ ಕಾಲ ಹುಡುಕಾಟ ನಡೆಸಿದರೂ ಸಹ ಹೆಲಿಕಾಪ್ಟರ್ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಜಿಲ್ಲಾಡಳಿತ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಹೆಲಿಕಾಪ್ಟರ್ ಹುಡುಕಿಕೊಟ್ಟವರಿಗೆ ಒಂದು ಲಕ್ಷ ನಗದು, ಸರ್ಕಾರಿ ಕೆಲಸದೊಂದಿಗೆ ನಾಲ್ಕು ಎಕರೆ ಜಮೀನು ನೀಡುವುದಾಗಿ ಘೋಷಿಸಿತ್ತು.
Related Articles
Advertisement
ಭಸ್ಮವಾದ ದಾಖಲೆಗಳು: ಬಹುತೇಕ ದಾಖಲೆಗಳು ಗುಡಿಸಲಿಗೆ ಬೆಂಕಿ ಬಿದ್ದಾಗ ಸುಟ್ಟು ಹೋಗಿದ್ದು, ಕೇವಲ ನೌಕ ಪಡೆಯ ಅಧಿಕಾರಿಗಳಿಂದ ಸನ್ಮಾನಿತ ರಾದ ಪೋಟೋವೊಂದು ಮಾತ್ರ ಇವರ ಬಳಿ ಉಳಿದಿದೆ. ಬಹುತೇಕ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ಹೋಗಿ ದಾಖಲೆ ತೆಗೆದು ಕೊಂಡು ಬನ್ರಿ ಎಂದು ಇವರನ್ನು ಸಾಗು ಹಾಕು ವುದರಿಂದ ವೃದ್ಧಾಪ್ಯದಲ್ಲಿ 4 ಎಕರೆ ಜಮೀನಿಗಾಗಿ ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಲೆ ಇದ್ದಾರೆ.
ತಾಲೂಕಿನಲ್ಲಿ ಬೇರೆ ಬೇರೆ ಯೋಜನೆಗಳ ಹೆಸರಿ ನಲ್ಲಿ ಪ್ರಭಾವಿಗಳು ಸಾವಿರಾರು ಎಕರೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ ಪ್ರಾಮಾಣಿಕವಾಗಿ ನೌಕಪಡೆಯ ಹೆಲಿಕಾಪ್ಟರ್ ಹುಡುಕಿಕೊಟ್ಟ ಪುಟ್ಟಸ್ವಾಮಿಗೌಡರು ಮಾತ್ರ 4 ಎಕರೆ ಭೂಮಿಗಾಗಿ ಹೋರಾಟ ಮಾಡುತ್ತಲೇ ಇರುವುದು ದುರಂತವಾಗಿದೆ. ನನಗೇನು ಭೂಮಿ ಬೇಡ ಮನೆ ಯಲ್ಲಿರುವ ನನ್ನ ಅಂಧ ಮಗನಿ ಗಾಗಿ ಭೂಮಿ ನೀಡಲಿ ಎಂದು ಪುಟ್ಟಸ್ವಾಮಿಗೌಡರು ಕಣ್ಣೀರು ಹಾಕುತ್ತಾರೆ.
ಸ್ಥಳೀಯ ಭಜರಂಗದಳದ ಮುಖಂಡರು ಅಂದು ಸೇನಾ ಪಡೆಯಲ್ಲಿದ್ದ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಾನವೀಯತೆಯ ಆಧಾರದ ಮೇಲೆ ಜಿಲ್ಲಾಡಳಿತ ಈ ವೃದ್ಧರಿಗೆ ಜಮೀನು ನೀಡಲು ಮುಂದಾಗಬೇಕಾಗಿದೆ.