Advertisement

Sajipamunnur ಮೂರ್ತೆದಾರರ ಸೇ.ಸ. ಸಂಘ: 12ನೇ ಶಾಖೆ ಕಂಬಳಬೆಟ್ಟಿನಲ್ಲಿ ಉದ್ಘಾಟನೆ

11:06 PM Sep 03, 2023 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬೊಳ್ಳಾಯಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 12ನೇ ಶಾಖೆಯು ಕಂಬಳಬೆಟ್ಟು ದರ್ಬಾ ಕಾಂಪ್ಲೆಕ್ಸ್‌ನಲ್ಲಿ ರವಿವಾರ ಆರಂಭಗೊಂಡಿತು.

Advertisement

ಮಾಜಿ ಸಚಿವ ಬಿ. ರಮಾನಾಥ ರೈ ಅವರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಗ್ರಾಮೀಣ ಜನರ ಆರ್ಥಿಕ ಸಶಕ್ತೀಕರಣಕ್ಕೆ ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಪೂರಕವಾಗಿದೆ. 30 ವರ್ಷಗಳ ಹಿಂದೆ ಮೂರ್ತೆದಾರರ ಆರ್ಥಿಕತೆಯ ಉದ್ದೀಪನದ ಬೀಜವನ್ನು ಬಿತ್ತಿದ್ದ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅವರ ಕನಸು ಇಂದು ನನಸಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮಾತನಾಡಿ, ಸಂಘವು ಸದಸ್ಯರಿಗೆ ಶೇ. 25 ಡಿವಿಡೆಂಡ್‌ ನೀಡಿದ ಹೆಗ್ಗಳಿಕೆ ಹೊಂದಿದೆ. ಮಹಿಳೆಯರಿಗೆ ವಿಶೇಷ ಸಾಲದ ನೆರವು, ಆರ್ಥಿಕವಾಗಿ ತೀರಾ ಹಿಂದುಳಿದ ಮಹಿಳೆಯರಿಗೆ ಸಂಘದಲ್ಲಿ ಉದ್ಯೋಗ ನೀಡಲಾಗುತ್ತಿದೆ. 175 ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಸಾಲವನ್ನು ನೀಡುವ ಯೋಜನೆ ಹೊಂದಿದೆ. ಸೇವಾ ಕಾರ್ಯವಾಗಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯ ಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.

ಜಿ.ಪಂ. ಮಾಜಿ ಸದಸ್ಯ ಎಂ.ಎಸ್‌. ಮಹಮ್ಮದ್‌ ಮಾತನಾಡಿ, ಸಂಘದ ಇನ್ನಷ್ಟು ಶಾಖೆಗಳು ಬರಲಿ ಎಂದರು. ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್‌ ಸಿ.ಎಚ್‌. ಅವರು ಸಂಘದ ಭದ್ರತಾ ಕೋಶ ಉದ್ಘಾಟಿಸಿ ಶುಭ ಹಾರೈಸಿದರು.
ವಿಟ್ಲ ಮುಟ್ನೂರು ಗ್ರಾ.ಪಂ. ಅಧ್ಯಕ್ಷ ಪುನೀತ್‌ ಮಾಡತ್ತಾರು, ಮಾಜಿ ಅಧ್ಯಕ್ಷ ಜಯಪ್ರಕಾಶ್‌ ನಾಯಕ್‌ ಎನ್‌., ವಿಟ್ಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಕೆ.ಕೆ., ದರ್ಬಾರ್‌ ಕಾಂಪ್ಲೆಕ್ಸ್‌ ಮಾಲಕ ಮೊಯಿದ್ದೀನ್‌ ಹಾಜಿ, ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಹರೀಶ್‌ ಪೂಜಾರಿ ಮರುವಾಳ, ಕುಂಡಡ್ಕ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಎಸ್‌.ಕೆ. ಅತಿಥಿಗಳಾಗಿದ್ದರು.

ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠಲ ಬೆಳ್ಚಡ ಚೇಳೂರು, ಅಶೋಕ ಪೂಜಾರಿ ಕೋಮಾಲಿ, ಕೆ. ಸುಜಾತಾ ಎಂ., ವಾಣಿ ವಸಂತ, ಅರುಣ್‌ ಕುಮಾರ್‌ ಎಂ., ಆಶಿಶ್‌ ಪೂಜಾರಿ, ಸಿಇಒ ಮಮತಾ ಗುತ್ತಿನಬೈಲು ಚೇಲೂರು, ಶಾಖಾಧಿಕಾರಿ ಪಲ್ಲವಿ ಲೋಕೇಶ್‌, ವಿವಿಧ ಶಾಖಾಧಿಕಾರಿಗಳು, ಸಿಬಂದಿ, ಸ್ವಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.ನಿರ್ದೇಶಕರಾದ ರಮೇಶ ಅನ್ನಪ್ಪಾಡಿ ಸ್ವಾಗತಿಸಿ, ಜಯಶಂಕರ ಕಾನ್ಸಾಲೆ ವಂದಿಸಿದರು. ಗಿರೀಶ್‌ ಕುಮಾರ್‌ ಪೆರ್ವ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next