ಅದು ಮಹಾರಾಷ್ಟ್ರ ರಾಜ್ಯದಲ್ಲಿರುವ ಅಕಲುಜ್ ಎಂಬ ಕುಗ್ರಾಮ. ಮುಂಬೈ ನಗರಕ್ಕೂ ಆ ಕುಗ್ರಾಮಕ್ಕೂ ಸುಮಾರು ನಾನೂರು ಕಿಲೋಮೀಟರ್ ದೂರ. ಆ ಊರಲ್ಲೊಬ್ಬ ಮೂಗುತಿ ಸುಂದರಿ ಇದ್ದಳು. ಆಕೆಗಿನ್ನೂ ಆಗ ಕೇವಲ ಹನ್ನೆರೆಡು ವರ್ಷ ವಯಸ್ಸು. ಆಗಷ್ಟೇ ಎಂಟನೆ ತರಗತಿ ಓದುತ್ತಿದ್ದ ಬಾಲೆ ಆಕೆ. ಅಂಥಾ ಹುಡುಗಿಗೆ ಬಣ್ಣದ ಲೋಕ ಕೈ ಬೀಸಿ ಕರೆಯುತ್ತೆ. ಕಲೆ ಬಗ್ಗೆ ಏನೂ ಗೊತ್ತಿಲ್ಲದ ಆಕೆ, ಕ್ಯಾಮೆರಾ ಮುಂದೆ ನಿಂತು ಒಂದು ಸಿನಿಮಾ ಮಾಡುತ್ತಾಳೆ.
ಹಾಗೆ ದಿಢೀರನೆ ಬಂದ ಅವಕಾಶದಿಂದಾಗಿ ಆಕೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆಗಿಬಿಡುತ್ತಾಳೆ. ಬರೀ ಮಹಾರಾಷ್ಟ್ರವಷ್ಟೇ ಅಲ್ಲ, ಇಡೀ ಭಾರತ ಸೇರಿದಂತೆ ಸಾಗರದಾಚೆಗೂ ಆ ಹುಡುಗಿ ಗುರುತಿಸಿಕೊಳ್ಳುತ್ತಾಳೆ. ಹಾಗೆ ಗುರುತಿಸಿಕೊಂಡ ಹುಡುಗಿಯ ಹೆಸರು ರಿಂಕು ರಾಜಗುರು. ಆಕೆ ಗುರುತಿಸಿಕೊಳ್ಳಲು ಕಾರಣವಾಗಿದ್ದು, ಮರಾಠಿಯ “ಸೈರಾತ್’ ಎಂಬ ಪ್ರೇಮ ದಶ್ಯಕಾವ್ಯ. ರಾತ್ರೋರಾತ್ರಿಅದೃಷ್ಟದ ಹುಡುಗಿ ಎನಿಸಿಕೊಂಡ ರಿಂಕು ರಾಜಗುರು ಈಗಾಗಲೇ ಕನ್ನಡಕ್ಕೂ ಕಾಲಿಟ್ಟಾrಗಿದೆ. ಮರಾಠಿಯ “ಸೈರಾತ್’ ಕನ್ನಡದಲ್ಲಿ ರಿಮೇಕ್ ಆಗಿದೆ. ಎಸ್.ನಾರಾಯಣ್ ನಿರ್ದೇಶನದಲ್ಲಿ “ಮನಸು ಮಲ್ಲಿಗೆ’ ಚಿತ್ರವಾಗಿ ಬಿಡುಗಡೆಯಾಗಿದೆ.
ಈ ಸಿನಿಮಾದಲ್ಲೂ ರಿಂಕುರಾಜಗುರು ನಾಯಕಿಯಾಗಿ ನಟಿಸಿದ್ದಾರೆ. ಒಂದು ಅದ್ಭುತ ಯಶಸ್ಸು ತಂದುಕೊಟ್ಟ “ಸೈರಾತ್’, ಪ್ರೇಮಿಗಳನ್ನೂ ಸೇರಿದಂತೆ ಎಲ್ಲರನ್ನೂ ಮನಕಲಕುವಂತೆ ಮಾಡಿದ್ದು ಸುಳ್ಳಲ್ಲ. ಆ ನಾಯಕಿ ರಿಂಕು ರಾಜಗುರು ಈಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಬೆಂಗಳೂರಿಗೆ ಬಂದು ಮೊದಲ ಸಲ “ಉದಯವಾಣಿ’ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
* ನೀವು “ಸೈರಾತ್’ಗೆ ಆಯ್ಕೆಯಾಗಿದ್ದು ಹೇಗೆ?
Related Articles
– ನಮ್ಮದು ಮಹಾರಾಷ್ಟ್ರ ಬಳಿಯ ಸೋಲಾಪುರ ಸಮೀಪದ ಅಕಲುಜ್ ಎಂಬ ಕುಗ್ರಾಮ.ಅಲ್ಲಿಗೆ ಒಂದು ಸಿನಿಮಾ ತಂಡ ಆಡಿಷನ್‌ಗೆಂದೇ ಬಂದಿತ್ತು. ನನಗೋ ಅದೊಂದು ರೀತಿಯ ಹೊಸ ಅನುಭವ. ನಾನೂ ಅಲ್ಲಿಗೆ ಸುಮ್ಮನೆ ಹೋಗಿದ್ದೆ. ಆ ಚಿತ್ರದ ನಿರ್ದೇಶಕರು ನನ್ನನ್ನು ನೋಡಿ ಕರೆದು, ಸಿನಿಮಾ ಮಾಡ್ತೀಯಾಅಂತ ಕೇಳಿದ್ರು. ಆಗ ನಾನು ಎಂಟನೆ ತರಗತಿ ಓದುತ್ತಿದ್ದೆ. ಆ ವಯಸ್ಸಲ್ಲಿ ಸಿನಿಮಾಅಂದ್ರೆ ಯಾರಿಗೆ ಕ್ರೇಜ್ ಇರಲ್ಲ ಹೇಳಿ. ಅದು ನನ್ನಲ್ಲೂ ಇತ್ತು. ಒಂದುರೀತಿ ಮಜ ಅನಿಸ್ತು . ತಲೆ ಅಲ್ಲಾಡಿಸಿದೆ. ಸಾಮಾನ್ಯವಾಗಿ ಹದಿನೆಂಟು, 21 ವಯಸ್ಸಿನ ಹುಡುಗಿಯರು ನಾಯಕಿಯರಾಗುತ್ತಾರೆ.
ನನಗೆ ಆಗ ಕೇವಲ 12 ವಯಸ್ಸಿರಬಹುದು. ನಾನು ಯಾವ ನಟನೆ ತರಬೇತಿ ಕಲಿತಿಲ್ಲ. ಶಾಲೆ ದಿನಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ ಅಷ್ಟೇ. ಅದು ಬಿಟ್ಟರೆ ಬೇರೇನೂ ಇಲ್ಲ. ಆಗ ನನ್ನ ನೋಡಿದ ನಿರ್ದೇಶಕರು, ಮತ್ತೆ ಹೇಳುತ್ತೇನೆ ಅಂತ ಹೊರಟು ಹೋದರು.ಅದಾದ ಒಂದು ವರ್ಷಅವರ ಸುದ್ದಿಯೇ ಇರಲಿಲ್ಲ. ಆಮೇಲೆ ನನ್ನನ್ನು “ಸೈರಾತ್’ ಸಿನಿಮಾಗೆ ಆಯ್ಕೆ ಮಾಡಿದರು. ಆಗ ನಾನು ಸಣ್ಣಗಿದ್ದೆ. ಸ್ವಲ್ಪ ದಪ್ಪ ಆಗಬೇಕು ಅಂತ ಹೇಳಿದ್ದರಷ್ಟೇ. ನಾನು ಅವರ ಮಾತು ಕೇಳಿ, ಆಯ್ತು ಅಂತ ದಪ್ಪ ಆಗೋಕೆ ಪ್ರಯತ್ನಿಸಿದ್ದೆ. ದಪ್ಪಾನೂ ಆದೆ. ಆ ಬಳಿಕ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡೆ. ನನಗೆ ವರ್ಕ್ ಶಾಪ್ ನಡೆಯಿತು. ಅಲ್ಲೇ ಎಲ್ಲವನ್ನೂ ಕಲಿತೆ. “ಸೈರಾತ್’ ಸಿನಿಮಾ ಶುರುವಾಗಿ, ರಿಲೀಸ್ ಆಗಿ, ಅದು ಸುದ್ದಿಯೂ ಆಗಿ, ಈಗ ಅದೇ ಸಿನಿಮಾ ಕನ್ನಡದಲ್ಲಿ “ಮನಸು ಮಲ್ಲಿಗೆ’ಆಗುತ್ತಿದೆ. ಅದೇ ಪಾತ್ರ ಮಾಡಿದ್ದಕ್ಕೆ ಖುಷಿಯೂ ಇದೆ.
* “ಸೈರಾತ್’ ಬಳಿಕ ಯಾವುದೇ ಸಿನ್ಮಾ ಮಾಡಲಿಲ್ಲ ಯಾಕೆ?
– ಆ ಚಿತ್ರ ಸಕ್ಸಸ್‌ಆದ ಬಳಿಕ ಸಾಕಷ್ಟು ಕಥೆಗಳು ಬಂದವು. ಆದರೆ, ನಾನು ಮಾಡಲಿಲ್ಲ. ಕಾರಣ, ನನಗೆ ಶಿಕ್ಷಣ ಮುಖ್ಯವಾಗಿತ್ತು.ಎಲ್ಲಿ, ಸಿನಿಮಾ ಮಾಡಿದರೆ ನನ್ನ ಭವಿಷ್ಯ ಹಾಳಾಗುತ್ತೋ ಅಂತ ಅಪ್ಪ-ಅಮ್ಮ ನನಗೆ ಓದಿನ ಕಡೆ ಗಮನ ಹರಿಸುವಂತೆ ನೋಡಿಕೊಂಡರು. “ಸೈರಾತ್’ ರಿಮೇಕ್ ಆಗುತ್ತೆ ಅಂತ ಗೊತ್ತಾಯ್ತು. ಕನ್ನಡದಲ್ಲೂ ನನಗೇ ಅವಕಾಶ ಹುಡುಕಿ ಬಂತು. ಆಗ ನನಗೆ ಮಾಡಬೇಕೋ ಬಿಡಬೇಕೋ ಎಂಬ ಗೊಂದಲವಿತ್ತು. ಕಾರಣ, ನನಗೆ ಮರಾಠಿ, ಹಿಂದಿ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಹಾಗಾಗಿ ಸ್ವಲ್ಪ ಹಿಂದೇಟು ಹಾಕಿದ್ದು ನಿಜ. ಬೇರೆ ಅವಕಾಶ ಬಂದರೂ ಮಾಡದಿದ್ದದ್ದಕ್ಕೆ ಭಾಷೆಯ ಅಡ್ಡಿ ಕಾರಣ.
* ಇಲ್ಲಿ ನಿಮಗೆ ಭಾಷೆಯ ತೊಡಕಾಗಲಿಲ್ಲವೇ?
– ಇಲ್ಲ ,ಅಂತಹ ಯಾವುದೇ ಸಮಸ್ಯೆ ಆಗಲಿಲ್ಲ. ನಾನು ಅದಷ್ಟವಂತೆ. ನಾರಾಯಣ್ ಸರ್ ಅವರಂತಹ ದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಿದ್ದೇನೆ. ಅದರಲ್ಲೂ ಕನ್ನಡ ಸಿನಿಮಾರಂಗದಲ್ಲಿ ನನಗೆ ಒಳ್ಳೆಯ ವೇದಿಕೆಯೂ ಸಿಕ್ಕಿದೆ. ಇದು ನನ್ನ ಕನ್ನಡದ ಮೊದಲ ಹಾಗೂ ಕೆರಿಯರ್‌ನ ಎರಡನೇ ಸಿನಿಮಾ. ಕನ್ನಡ ಬರೋದಿಲ್ಲ. ಟಫ್ ಆಗುತ್ತೆ ಅಂತ ಗೊತ್ತಿದ್ದರೂ, ನಾರಾಯಣ್ ಸರ್ ಧೈರ್ಯತುಂಬಿ, ನನ್ನಿಂದ ಕೆಲಸ ತೆಗೆಸಿದರು. ಹಾಗಾಗಿ ಭಷೆಯ ತೊಡಕಾಗಲಿಲ್ಲ.
* “ಮನಸು ಮಲ್ಲಿಗೆ’ ಕೂಡ “ಸೈರಾತ್’ ರಿಮೇಕ್. ಫೀಲ್ ಹೇಗಿತ್ತು?
– ಇಲ್ಲಿ ಕಥೆ, ಪಾತ್ರ ಎರಡೂ ಒಂದೇ ಹಾಗಾಗಿ ವ್ಯತ್ಯಾಸ ಗೊತ್ತಾಗಲಿಲ್ಲ. ಆದರೆ, ಒಂದಂತೂ ನಿಜ. “ಮನಸು ಮಲ್ಲಿಗೆ’ ನನಗೆ ಇನ್ನೊಂದು ಮಜಲಿಗೆ ಕರೆದುಕೊಂಡು ಹೋಗುವ ಸಿನಿಮಾ ಆಗುತ್ತೆ ಎಂಬ ನಂಬಿಕೆ ನನ್ನದು. ಒಳ್ಳೇ ಬ್ಯಾನರ್, ಅನುಭವಿ ತಂಡದ ಜತೆ ನಾನು ಕೆಲಸ ಮಾಡಿದ್ದೇ ಮರೆಯದ ಅನುಭವ.
* ಭಾಷೆ ಗೊತ್ತಿಲ್ಲ ಅಂತೀರಾ, ಕೆಲಸ ಮಾಡೋಕೆ ಕಷ್ಟ ಆಗಲಿಲ್ಲವೇ?
– ಇದು ರಿಮೇಕ್ ಆಗಿದ್ದರಿಂದ ಅಷ್ಟೊಂದು ಕಷ್ಟ ಆಗಲಿಲ್ಲ. ಭಾಷೆ ಗೊತ್ತಾಗದಿದ್ದರೂ, ಭಾವನೆಗಳು ಅರ್ಥಆಗುತ್ತಿದ್ದವು. ಮರಾಠಿಯಲ್ಲೇ ಡೈಲಾಗ್ ಬರೆದುಕೊಂಡು ಕನ್ನಡದಲ್ಲಿ ಹೇಳುತ್ತಿದ್ದೆ. ಹಾಗಾಗಿ ಅದು ಕಷ್ಟ ಅನಿಸಲಿಲ್ಲ. ಕನ್ನಡ ಬರದಿದ್ದರೂ, ಭಾಷೆ ಸೊಗಸಾಗಿದೆ ಅಂತೆನಿಸಿದ್ದು ಸುಳ್ಳಲ್ಲ.
* ಮರಾಠಿ “ಸೈರಾತ್’ಗೂ ಕನ್ನಡದ “ಮನಸು ಮಲ್ಲಿಗೆ’ಗೂ ನೀವು ಕಂಡ ವ್ಯತ್ಯಾಸ?
– ನನಗೆ ಎರಡರಲ್ಲೂ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಆದರೆ, ಅಲ್ಲಿಗಿಂತ ಇಲ್ಲಿ ಸಿಕ್ಕ ಫೀಲಿಂಗ್ಸ್ ಬೇರೆ. ಇಲ್ಲಿ ಒಂದಷ್ಟು ಹೊಸತನ ಮತ್ತು ರಿಚ್ ಆಗಿ ಕಾಣತ್ತೆ.
* ಈಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದೀರಿ, ಮುಂದೆ ನಿಮ್ಮ ದಾರಿ ಓದಿನ ಕಡೆಗಾ, ಸಿನಿಮಾ ಕಡೆಗಾ?
– ಇದು ಕಷ್ಟದ ಪ್ರಶ್ನೆ. ನನಗೆ ಎರಡೂ ಇಷ್ಟ. ಎರಡನ್ನೂ ಬ್ಯಾಲೆನ್ಸ್ ಮಾಡ್ತೀನಿ. ನನಗೆ ಮೊದಲು ಓದು ಮುಖ್ಯ.ಆದರೆ, ರಿಂಕು ರಾಜಗುರು ಯಾರೂ ಅಂತಾನೇ ಗೊತ್ತಿರದ ಸಮಯದಲ್ಲಿ ಎಲ್ಲೆಡೆ ಗೊತ್ತಾಗುವಂತೆ ಮಾಡಿದ ಸಿನಿಮಾ ಮಾಧ್ಯಮಕ್ಕೆ ಪವರ್‌ಇದೆ. ಅದನ್ನೂ ಬಿಡಲ್ಲ.
*”ಸೈರಾತ್’ ನಂತರ ಬಂದ ಕಥೆಗಳೆಷ್ಟು?
– ಲೆಕ್ಕ ಇಟ್ಟಿಲ್ಲ. ಆ ಚಿತ್ರರಿಲೀಸ್ ಆಗಿ ಮೆಲ್ಲನೆ ಸಕ್ಸಸ್‌ಆಗಿದ್ದೇ ತಡ, ಸಾಕಷ್ಟು ಮಂದಿ ಕಥೆ ಹೇಳ್ಳೋಕೆ ಬಂದರು. ಆದರೆ, ನನಗೆ ಯಾವುದೂ ಪಸಂದಾಗಿದೆ ಅಂತನಿಸಲಿಲ್ಲ.
* “ಸೈರಾತ್’ ಬಳಿಕ ಸ್ಟಾರ್ ನಟಿಯಾದ ಫೀಲ್ ಹೇಗಿತ್ತು?
– ಅಂತಹ ಯಾವುದೇ ಅಮಲೇರಿಸಿಕೊಂಡಿಲ್ಲ. ನಾನು ಸ್ಟಾರ್‌ಅಲ್ಲ. ಕಾಮನ್ ವುಮೆನ್ ಅಷ್ಟೇ. ಸೈರಾತ್ ಬಂದಾಗ, ಮಹಾರಾಷ್ಟ್ರದಲ್ಲಿ ಸುದ್ದಿ ಆದೆ. ಎಲ್ಲೆಡೆ ರಿಂಕು ರಾಜಗುರು ಅಂತ ಗುರುತಿಸಿದರು.ರಾತ್ರೋರಾತ್ರಿ ನನ್ನ ಭವಿಷ್ಯವೇ ಬದಲಾಗಿ ಹೋಯ್ತು. ಈಗಲೂ ನನ್ನ ನೋಡಿದವರು ರಿಂಕು ಬದಲಾಗಿ, “ಸೈರಾತ್’ ಪಾತ್ರದ ಹೆಸರು ಅಚ್ಚಿ ಅಂತಾನೇ ಕರೆಯುತ್ತಾರೆ.
* “ಮನುಸು ಮಲ್ಲಿಗೆ’ ಚಿತ್ರಕ್ಕೆ ನೀವೇ ಡಬ್ಬಿಂಗ್ ಮಾಡಿದ್ದೀರಂತೆ?
– ಹೌದು, ಆ ಕ್ರೆಡಿಟ್ ನಿರ್ದೇಶಕರಿಗೆ, ನಿರ್ಮಾಪಕರಿಗೆ ಹೋಗಬೇಕು. ನನಗೆ ಆಗಲ್ಲ ಅಂದರೂ, ಚಾಲೆಂಜ್ ಮಾಡಿಸಿ, ನನ್ನಿಂದಲೇ ಡಬ್ಬಿಂಗ್ ಮಾಡಿಸಿದರು. ತುಂಬಾ ಸಮಯ ಹಿಡಿಯಿತು. ಭಯವಿತ್ತಾದರೂ, ನಾರಾಯಣ್ ಸಾರ್ ಧೈರ್ಯ ತುಂಬಿ ಕೆಲಸ ತೆಗೆಸಿಕೊಂಡರು. ರಿಹರ್ಸಲ್ ಮಾಡಿಯೇ ಡಬ್ಬಿಂಗ್ ಮಾಡಿದ್ದುಂಟು.
* “ಸೈರಾತ್’ನಲ್ಲಿ ಸ್ಲಿಮ್ ಆಗಿದ್ದವರು “ಮನಸು ಮಲ್ಲಿಗೆ’ಯಲ್ಲೇಕೆ ಅಷ್ಟೊಂದು ದಪ್ಪ?
– ಹೌದು, ನನಗೆ ಎಲ್ಲರೂ ಇದೇ ಪ್ರಶ್ನೆ ಕೇಳ್ತಾರೆ.ಆದರೆ, ಅದೊಂದು ನೈಜತೆಯ ಪಾತ್ರವಾದ್ದರಿಂದ, ಪಾತ್ರ ಹೀಗೆ ಇರಬೇಕು ಅಂತ ಕೇಳುವುದಿಲ್ಲ. ಅಲ್ಲಿ ಕಥೆಯೇ ಎಲ್ಲವೂ ಆಗಿದ್ದರಿಂದ ನಾನು ಹೇಗಿದ್ದೇನೆ ಅಂತ ಕೌಂಟî… ಆಗಲ್ಲ ಅನಿಸುತ್ತೆ.ಆದರೂ, ಸಣ್ಣ ಆಗೋಕೆ ಕಷ್ಟಪಟ್ಟಿದ್ದುಂಟು.
* ಕನ್ನಡದಲ್ಲಿ ಅವಕಾಶ ಬಂದರೆ?
– ಖಂಡಿತ ಮಾಡ್ತೀನಿ. ಆದರೆ, ನನಗೆ ಅದು ಇಷ್ಟವಾಗಬೇಕಷ್ಟೇ.
* ಎಂಥಾ ಕಥೆ, ಪಾತ್ರ ಬಯಸುತ್ತೀರಿ?
– ನನ್ನ ಪಾತ್ರಕ್ಕೆ ಧಮ್‌ಇರಬೇಕು. ಕಥೆಯಲ್ಲಿ ಮೌಲ್ಯ ಇರಬೇಕು. ನನ್ನ ವಯಸ್ಸು ಮೀರದ ಕಥೆ, ಪಾತ್ರವಾಗಿರಬೇಕು.
* ನೀವು ಓದಿ ಏನಾಗಬೇಕು ಅಂದುಕೊಂಡಿದ್ದೀರಿ?
– ಚಿಕ್ಕಂದಿನಿಂದಲೂ ನನಗೆ ಡಾಕ್ಟರ್ ಆಗೋ ಆಸೆ. ಕನಸಲ್ಲೂ ನಾನು ನಟಿ ಆಗ್ತಿàನಿ ಅಂದುಕೊಂಡಿರಲಿಲ್ಲ. ಆದರೆ, ನಟಿಯಾಗಿದ್ದೇನೆ. ಡಾಕ್ಟರ್ ಆಗ್ತಿàನೋ ಇಲ್ಲವೋ ಗೊತ್ತಿಲ್ಲ, ಈಗ ನಟಿಯಾಗಿ ತಕ್ಕ ಮಟ್ಟಿಗೆ ಗುರುತಿಸಿಕೊಂಡಿದ್ದೇನೆ.
* ಈ ಎರಡೂ ಸಿನಿಮಾ ನಿರ್ದೇಶಕರ ಬಗ್ಗೆ ಹೇಳುವುದಾದರೆ?
– ನನಗೆ ಮರಾಠಿ ಸುಲಲಿತ. ಹಾಗಾಗಿ, ಆ ನಿರ್ದೇಶಕರ ಜತೆ ಒಳ್ಳೆಯ ಬಾಂಧವ್ಯತ್ತು. ಅಷ್ಟೇ ಚೆನ್ನಾಗಿ ಕೆಲಸ ಮಾಡಿದೆ. ಕನ್ನಡ ಭಾಷೆ ಗೊತ್ತಾಗದಿದ್ದರೂ, ಕನ್ನಡಿಗರ ಜತೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಾರಾಯಣ್ ಸರ್‌ಕಂಫಟî…ìಆಗಿದ್ದರು. ಇಬ್ಬರಿಂದಲೂ ಸಾಕಷ್ಟು ಕಲಿತಿದ್ದೇನೆ.
* ನಿಮ್ಮ ಫೇವರೇಟ್… ನಾಯಕ-ನಾಯಕಿ?
-ನಾನಾ ಪಟೇಕರ್ ಮತ್ತು ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಹೇಮಾಮಾಲಿನಿ ನಂಗಿಷ್ಟ.ಅವರನ್ನು ಮೀಟ್ ಮಾಡಿಲ್ಲ. ಆದರೆ, “ಸೈರಾತ್’ ಬಗ್ಗೆ ಅವರು ಒಳ್ಳೇ ಕಾಮೆಂಟ್ಸ್ ಮಾಡಿದ್ದರು.
* ಅಪ್ಪ, ಅಮ್ಮನ ಸಹಕಾರ ಹೇಗಿದೆ?
-ಇಬ್ಬರೂ ಟೀಚರ್. ಅವರ ಸಹಕಾರ, ಪ್ರೊತ್ಸಾಹ ಇರದಿದ್ದರೆ, ರಿಂಕು ನಟಿ ಆಗುತ್ತಿರಲಿಲ್ಲ.
* ಕನ್ನಡಚಿತ್ರರಂಗ ಬಗ್ಗೆ ಏನು ಹೇಳ್ತೀರಾ?
– ನನಗೆ ಇಲ್ಲಿ ಕೆಲಸ ಮಾಡಿದ್ದಕ್ಕೆ ಖುಷಿ ಇದೆ. ಇಲ್ಲಿ ಒಳ್ಳೆಯ ಚಿತ್ರಗಳು ಮೂಡಿ ಬಂದಿವೆ ಎಂದು ತಿಳಿದಿದ್ದೇನೆ. ಈ ಇಂಡಸ್ಟ್ರಿಯಲ್ಲಿ ನನಗೆ ಅವಕಾಶ ಸಿಕ್ಕಿದ್ದು ಮರೆಯೋದಿಲ್ಲ.
*ವಿಜಯ್ ಭರಮಸಾಗರ