Advertisement

ಸೈನಾಗೆ 4ನೇ ಬಾರಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಪ್ರಶಸ್ತಿ; ಸಿಂಧು ಸೋಲು

01:05 PM Feb 16, 2019 | udayavani editorial |

ಹೊಸದಿಲ್ಲಿ : ಭಾರತೀಯ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹವಾಲ್‌ ಅವರಿಂದು ಶನಿವಾರ ತನ್ನ ಪ್ರಬಲ ಎದುರಾಳಿ ಪಿ ವಿ ಸಿಂಧು ಅವರನ್ನು ಪರಾಭವಗೊಳಿಸಿ 83ನೇ ಹಿರಿಯರ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಪ್ರಶಸ್ತಿಯನ್ನು ನಾಲ್ಕನೇ ಬಾರಿಗೆ ಗೆದ್ದುಕೊಂಡರು. 

Advertisement

28ರ ಹರೆಯದ ಸೈನಾ ಅವರು ಈ ಹಿಂದೆ 2006, 2007 ಮತ್ತು 2018ರಲ್ಲಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಇಂದಿನ ಫೈನಲ್‌ ಪಂದ್ಯದಲ್ಲಿ ಸೈನಾ ಅವರು ಪಿ ವಿ ಸಿಂಧು ಅವರನ್ನು 21-18, 21-15 ಸೆಟ್ಟುಗಳ ಅಂತರದಲ್ಲಿ ಸೋಲಿಸಿದರು. 

ಸಿಂಧು ಅವರು ಈ ಹಿಂದೆ 2011 ಮತ್ತು 2013ರಲ್ಲಿ  ಒಟ್ಟು ಎರಡು ಬಾರಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಇಂದು ಮೂರನೇ ಬಾರಿ ಈ ಪ್ರಶಸ್ತಿಯನ್ನು ಗೆದ್ದು ಸೈನಾ ಸಾಧನೆಯನ್ನು ಸರಿಗಟ್ಟುವಲ್ಲಿ ತನಗೆ ದೊರಕಿದ್ದ ಸುವರ್ಣಾವಕಾಶ ನಷ್ಟವಾದುದಕ್ಕೆ ಸಿಂಧುಗೆ ನಿರಾಶೆಯಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next