Advertisement

ಏಷ್ಯಾ ತಂಡ ಬ್ಯಾಡ್ಮಿಂಟನ್‌ ಕೂಟಕ್ಕೆ ಸೈನಾ, ಸಿಂಧು ಗೈರು

09:43 AM Feb 01, 2020 | Sriram |

ನವದೆಹಲಿ: ಮನೀಲದಲ್ಲಿ ನಡೆಯಲಿರುವ ಏಷ್ಯಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದಿರಲು ಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ನಿರ್ಧರಿಸಿದ್ದಾರೆ.

Advertisement

ಟೋಕಿಯೋ ಒಲಿಂಪಿಕ್ಸ್‌ ಕೂಟವನ್ನು ಗಮನದಲ್ಲಿಟ್ಟುಕೊಂಡು ಅದರತ್ತ ಸಂಪೂರ್ಣ ಲಕ್ಷ್ಯವಹಿಸುವ ನಿಟ್ಟಿನಲ್ಲಿ ಕೂಟದಿಂದ ಹಿಂದೆ ಸರಿಯಲು ತೀರ್ಮಾನ ತೆಗೆದುಕೊಂಡಿದ್ದಾರೆ. ದಿಗ್ಗಜರ ಅನುಪಸ್ಥಿತಿಯಲ್ಲಿ ಏಷ್ಯಾ ತಂಡ ಚಾಂಪಿಯನ್‌ಶಿಪ್‌ಗೆ ಒಟ್ಟು 17 ಮಂದಿ ಸದಸ್ಯರ ಭಾರತ ತಂಡ ಪ್ರಕಟಿಸಲಾಗಿದೆ. ವಿಶೇಷವೆಂದರೆ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಶ್ವಿ‌ನಿ ಭಟ್‌, ಬೆಂಗಳೂರಿನ ಶಿಖಾ ಗೌತಮ್‌ ಸ್ಥಾನ ಪಡೆದುಕೊಂಡಿದ್ದಾರೆ. ಕೂಟದಲ್ಲಿ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿರುವ ಇತರ ತಂಡಗಳೆಂದರೆ ಹಾಲಿ ಚಾಂಪಿಯನ್‌ ಇಂಡೋನೇಷ್ಯಾ, ಆತಿಥೇಯ ಫಿಲಿಪ್ಪೀನ್ಸ್‌.

ಪುರುಷರ ತಂಡ:
ಎಂ. ಆರ್‌.ಅರ್ಜುನ್‌ ಮುನ್ನಡೆಸಲಿದ್ದಾರೆ. ಶುಭಂಕರ್‌ ಡೇ, ಧ್ರುವ್‌ ಕಪಿಲ, ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಸಾತ್ವಿಕ್‌ಸಾಯಿರಾಜ್‌, ಬಿ.ಸಾಯಿ ಪ್ರಣೀತ್‌, ಲಕ್ಷ್ಯಸೇನ್‌ ಮತ್ತು ಚಿರಾಗ್‌ ಶೆಟ್ಟಿ.

ಮಹಿಳಾ ತಂಡ:

ಮಾಳವಿಕಾ ಬಾನಸೋದ್‌, ಅಶ್ವಿ‌ನಿ ಭಟ್‌, ಅಶ್ಮಿತಾ ಚಾಲಿಹ, ಶಿಖಾ ಗೌತಮ್‌, ಆಕರ್ಶಿ ಕಶ್ಯಪ್‌, ಕೆ.ಮನೀಷಾ, ರುತುಪರ್ಣಾ, ಗಾಯತ್ರಿ ಗೋಪಿಚಂದ್‌.

Advertisement

Udayavani is now on Telegram. Click here to join our channel and stay updated with the latest news.

Next