Advertisement

ಅಗ್ರ 10ರಿಂದ ಹೊರಬಿದ್ದ ಸೈನಾ

07:00 AM Aug 10, 2018 | Team Udayavani |

ಹೊಸದಿಲ್ಲಿ: ನೂತನ ವಿಶ್ವ ಬ್ಯಾಡ್ಮಿಂಟನ್‌ ಶ್ರೇಯಾಂಕ ಗುರುವಾರ ಪ್ರಕಟವಾಗಿದ್ದು, ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅಗ್ರ ಹತ್ತರ ಯಾದಿಯಿಂದ ಹೊರಬಿದ್ದಿದ್ದಾರೆ. 

Advertisement

ಒಂದು ಸ್ಥಾನ ಕುಸಿದ ಅವರು ವಿಶ್ವ 11ನೇ ಸ್ಥಾನಕ್ಕೆ ಬಂದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ವಿರುದ್ಧ ಸೋಲು ಅನುಭವಿಸಿದ್ದರು. ಭಾರತದ ಮತ್ತೋರ್ವ ಆಟಗಾರ್ತಿ ಪಿ.ವಿ.ಸಿಂಧು 3ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ. ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್‌ 2 ಸ್ಥಾನ ಕುಸಿತ ಕಂಡಿದ್ದಾರೆ. ಪ್ರಸ್ತುತ 8ನೇ ಸ್ಥಾನದಲ್ಲಿದ್ದಾರೆ. ಪ್ರಣಯ್‌ 11ನೇ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next