Advertisement

ಸೈನಾ ನೆಹ್ವಾಲ್‌ ಮುನ್ನಡೆ

08:00 AM Oct 17, 2018 | Team Udayavani |

ಒಡೆನ್ಸೆ (ಡೆನ್ಮಾರ್ಕ್‌): ಸೈನಾ ನೆಹ್ವಾಲ್‌ ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಮೊದಲ ಸುತ್ತಿನಲ್ಲಿ ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿ ಮುನ್ನಡೆದರೆ ತಾರಾ ಆಟಗಾರ್ತಿ ಪಿವಿ ಸಿಂಧು ಆಘಾತಕಾರಿ ಸೋಲನ್ನು ಕಂಡು ಹೊರಬಿದ್ದಿದ್ದಾರೆ.

Advertisement

81 ನಿಮಿಷಗಳ ಸುದೀರ್ಘ‌ ಸೆಣ ಸಾಟದಲ್ಲಿ ಸೈನಾ ಹಾಂಕಾಂಗ್‌ನ ನಗನ್‌ ಯಿ ಚೆಯುಂಗ್‌ ಅವರನ್ನು 20-22, 21-17, 24-22 ಗೇಮ್‌ಗಳಿಂದ ಉರುಳಿಸಲು ಯಶಸ್ವಿಯಾದರು. ಆದರೆ 3ನೇ ಶ್ರೇಯಾಂಕದ ಸಿಂಧು ಇನ್ನೊಂದು ಕಠಿನ ಮುಖಾಮುಖಿಯಲ್ಲಿ ಅಮೆರಿಕದ ಬೈವೆನ್‌ ಝಾಂಗ್‌ ಕೈಯಲ್ಲಿ 17-21, 21-16, 18-21 ಗೇಮ್‌ಗಳಿಂದ ಶರಣಾದರು. 

ಸಿಂಧು ಅವರಿಗಿದು ಝಾಂಗ್‌ ವಿರುದ್ಧ ಸತತ ಮೂರನೇ ಸೋಲು ಆಗಿದೆ. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಇಂಡಿಯನ್‌ ಓಪನ್‌ ಕೂಟದ ಫೈನಲ್‌ನಲ್ಲೂ ಅಮೆರಿಕದ ಶಟ್ಲರ್‌ ಸಿಂಧು ಅವರನ್ನು ಕೆಡಹಿದ್ದರು. 

ಸೈನಾ ಅದ್ಭುತ ಹೋರಾಟ 
ಸೈನಾ ಮತ್ತು ಚೆಯುಂಗ್‌ ಈ ಹಿಂದೆ 2016ರಲ್ಲಿ ಮುಖಾಮುಖಿಯಾಗಿದ್ದರು. ಆವಾಗ ಚೆಯುಂಗ್‌ ಗೆಲುವಿನ ನಗೆ ಚೆಲ್ಲಿದ್ದರು. ಆದರೆ ಇಲ್ಲಿ ಸೈನಾ ಅದ್ಭುತ ಹೋರಾಟ ಸಂಘಟಿಸಿ ಜಯ ಸಾಧಿಸಲು ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next