Advertisement
29ರ ಹರೆಯದ, ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮೊದಲ ಗೇಮ್ ಕಳೆದುಕೊಂಡ ಬಳಿಕ ಉತ್ತಮ ಹೋರಾಟ ನಡೆಸಿ ಸ್ಪರ್ಧೆಯನ್ನು ಸಮಬಲಕ್ಕೆ ತಂದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮಂಕಾದರು. ಇಲ್ಲಿ ಸೈನಾಗೆ ಗಳಿಸಲು ಸಾಧ್ಯವಾದದ್ದು 4 ಅಂಕ ಮಾತ್ರ! ಇವರಿಬ್ಬರ ಹೋರಾಟ ಒಂದು ಗಂಟೆ, 7 ನಿಮಿಷಗಳ ಕಾಲ ಸಾಗಿತು. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಸ್ಪರ್ಧಿಸದ ಕಾರಣ ಸೈನಾ ಮೇಲೆ ಹೆಚ್ಚಿನ ಭರವಸೆ ಇಡಲಾಗಿತ್ತು.ವನಿತಾ ಸಿಂಗಲ್ಸ್ ವಿಭಾಗದ ಮತ್ತೂಂದು ಪಂದ್ಯದಲ್ಲಿ ಅನುರಾ ಪ್ರಭುದೇಸಾಯಿ ಕೂಡ ಸೋಲನುಭವಿಸಿದ್ದಾರೆ. ಅವರನ್ನು ವಿಶ್ವದ 15ನೇ ರ್‍ಯಾಂಕಿಂಗ್ ಆಟಗಾರ್ತಿ ಲೀ ಕ್ಸುರುಯಿ 21-9, 21-10 ಅಂತರದಿಂದ ಹಿಮ್ಮೆಟ್ಟಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಆರಂಭಿಕ ಸುತ್ತಿನಲ್ಲೇ ಎಡವಿದ್ದಾರೆ. ತೈವಾನ್‌ನ ವಾಂಗ್ ಜು ವೀ ವಿರುದ್ಧ ದಿಟ್ಟ ಹೋರಾಟ ನೀಡಿದ ಲಕ್ಷ್ಯ ಸೇನ್ 21-15, 18-21, 10-21 ಅಂತರದಿಂದ ಪರಾಭವಗೊಂಡರು. ಮೊದಲ ಗೇಮ್ ಗೆದ್ದರೂ ಇದೇ ಓಟ ಮುಂದುವರಿಸಲು ಸೇನ್ ವಿಫಲರಾದರು.
ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಜೋಡಿಯ ಆಟವೂ ಮುಗಿದಿದೆ. ಚೀನದ ಲಿಯು ಕ್ಸುವಾನ್‌ಕುÕವಾನ್-ಕ್ಸಿಯಾ ಯುಟಿಂಗ್ ವಿರುದ್ಧ 70 ನಿಮಿಷಗಳ ಹೋರಾಟ ನಡೆಸಿದ ಭಾರತೀಯ ಜೋಡಿ 14-21, 23-21, 14-21 ಅಂತರದಿಂದ ಸೋಲನುಭವಿಸಿತು. ಅತ್ರಿ-ರೆಡ್ಡಿ ಮುನ್ನಡೆ
ಭಾರತದ ಪಾಲಿನ ಮೊದಲ ದಿನದ ಸಮಾಧಾನಕರ ಸಂಗತಿಯೆಂದರೆ, ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ-ಬಿ. ಸುಮೀತ್ ರೆಡ್ಡಿ ಜೋಡಿ ಗೆಲುವು ಸಾಧಿಸಿದ್ದು. ಇವರು ಆತಿಥೇಯ ನಾಡಿನ ಜೋಶುವ ಫೆಂಗ್- ಜಾಕ್ ಜಿಯಾಂಗ್ ವಿರುದ್ಧ 21-17, 21-10 ಅಂತರದಿಂದ ಮೇಲುಗೈ ಸಾಧಿಸಿದರು.