Advertisement

ಆಲ್‌ ಇಂಗ್ಲಂಡ್‌ ಚಾಂಪ್ಯನ್‌ಶಿಪ್‌ನಿಂದ ಸೋತು ಹೊರಬಿದ್ದ ಸೈನಾ

01:43 PM Mar 08, 2019 | Team Udayavani |

ಲಂಡನ್‌ : ಭಾರತದ ಮಾಜಿ ಫೈನಲಿಸ್ಟ್‌ ಸೈನಾ ನೆಹವಾಲ್‌ 10 ಲಕ್ಷ ಡಾಲರ್‌ ಬಹುಮಾನದ ಆಲ್‌ ಇಂಗ್ಲಂಡ್‌ ಚಾಂಪ್ಯನ್‌ಶಿಪ್‌ನಿಂದ ಸೋತು ಹೊರಬಿದ್ದಿದ್ದಾರೆ. ಅದರಿಂದಾಗಿ ಅವರ ಅಸಂಖ್ಯ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟಾಗಿದೆ. 

Advertisement

ತೈವಾನಿನ ನಂಬರ್‌ ಒನ್‌ ಆಟಗಾತಿ ತ್ಸು ಯಿಂಗ್‌ ಅವರೆದುರು ಸೈನಾ 15-21, 19-21 ಸೆಟ್ಟುಗಳ ಅಂತರದಲ್ಲಿ, 37 ನಿಮಿಷಗಳ ಕ್ವಾರ್ಟರ್‌ ಫೈನಲ್‌ ಕಾದಾಟದಲ್ಲಿ, ನಿರುತ್ತರರಾಗಿ ಸೋಲನುಭವಿಸಿದರು. 

ಸೈನಾ ಅವರೀಗ ತ್ಸು ಯಿಂಗ್‌ ಎದುರು 5-15 ಅಂತರದ ನೇರಾನೇರ ಕ್ಯಾರಿಯರ್‌ ರೆಕಾರ್ಡ್‌ ಹೊಂದಿದ್ದು 13ನೇ ನೇರ ಸೋಲಿಗೆ ಗುರಿಯಾಗಿದ್ದಾರೆ. ತೈವಾನ್‌ ಆಟಗಾತಿ 2015ರ ಬಳಿಕದಲ್ಲಿ  ಭಾರತೀಯಳ ಎದುರು ಸೋಲೇ ಕಾಣದ ದಾಖಲೆ ಹೊಂದಿದ್ದಾರೆ.

ತ್ಸು ಯಿಂಗ್‌ ಕಳೆದ ವರ್ಷ ಗಾಯಾಳುವಾಗಿ ಹಾಂಕಾಂಗ್‌ ಓಪನ್‌ನಿಂದ ನಿವೃತ್ತರಾಗಿದ್ದರು.  ಆ ಬಳಿಕದಲ್ಲಿ ಅಸಾಧಾರಣ ಚೇತರಿಕೆಯನ್ನು ಸಾಧಿಸಿದ ಯಿಂಗ್‌, ಬರ್ಮಿಂಗಂ ಕಣದಲ್ಲೀಗ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next