Advertisement

‘ಸಾಧಕರಿಗೆ ಶಕ್ತಿ ತುಂಬುವ ಕೆಲಸವಾಗಲಿ’

12:26 PM Oct 21, 2019 | Naveen |

ಸೈದಾಪುರ: ವಿಶ್ವಕರ್ಮ ಸಾಧನೆ ನಮ್ಮದಾಗಬೇಕು. ವಿಶ್ವಕರ್ಮ ಸಮಾಜದ ಆತ್ಮ ಶಕ್ತಿ ಜಾಗೃತಿಯೊಂದಿಗೆ ಸಾಧಕ ಮನಸ್ಸುಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಏಕದಂಡಿಗಿ ಮಠದ ಶ್ರೀನಿವಾಸ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಸಿದ್ಧ ಚೇತನಾಶ್ರಮ ಸಿದ್ಧರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಭಗವಾನ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ವಿಶ್ವಕರ್ಮ ಧರ್ಮ ಜಾಗೃತಿ ಸಮಾವೇಶವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿಶ್ವ ರೂಪೂಗೊಳ್ಳುವ ಮುಂಚೆ ಭಗವಾನ ವಿಶ್ವಕರ್ಮ ಜನಿಸಿದ. ಅಂತಹ ಪರಂಪರೆ ಹೊಂದಿದ ನಾವು ನಮ್ಮ ನಮ್ಮ ನಡುವೆ ಬಿರುಕು ಮಾಡಿಕೊಂಡು ನಮ್ಮ ಸಮಾಜದವರನ್ನು ನಾವೇ ದ್ವೇಷ ಮನೋಭಾವದಿಂದ ಕಾಣುವ ಪ್ರವೃತ್ತಿ ಬೆಳಿಸಿಕೊಂಡಿದ್ದೇವೆ. ಅದನ್ನು ಮರೆತು ಒಗ್ಗೂಡಬೇಕು ಎಂದರು.

ತಂದೆ-ತಾಯಿ ಮತ್ತು ಗುರುಗಳು ದೇವರಿಗೆ ಸಮಾನರು, ಅವರ ಸೇವೆ ಪ್ರತಿಯೊಬ್ಬರು ಮಾಡಿದಾಗ ನಮ್ಮ ಜೀವನ ಪಾವನವಾಗುತ್ತದೆ. ಆ ದಿಸೆಯಲ್ಲಿ ಸಮಾಜದ ಪ್ರತಿಯೊಬ್ಬರು ತಂದೆ, ತಾಯಿ ಮತ್ತು ಗುರುಗಳನ್ನು ಎಂದು ದ್ವೇಷಿಸಬಾರದು ಎಂದು ಹೇಳಿದರು.

ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜ ಶ್ರೇಷ್ಠ ಜ್ಞಾನ ಮತ್ತು ಶಕ್ತಿ ಹೊಂದಿದೆ. ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡ ನಮ್ಮಗೆ ಸಿಗಬೇಕಾದ ಸರ್ಕಾರದ ಯೋಜನೆಗಳನ್ನು ಪಡೆದುಕೊಳಬೇಕು ಹಾಗೂ ವಿಶ್ವಕರ್ಮ ಧರ್ಮದ ಪೂಜಾ ವಿಧಾನಗಳ ಬಗ್ಗೆ ಭಕ್ತರಿಗೆ ತಿಳಿಸಿಕೊಟ್ಟರು.

Advertisement

ಸೈದಾಪುರ ಸಿದ್ಧಚೇತನಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಸೋಮೇಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಇದಕ್ಕೂ ಮುಂಚಿತವಾಗಿ ಪಟ್ಟಣದ ಉಪ ಕೃಷಿ ಮಾರುಕಟ್ಟೆಯಿಂದ ಶ್ರೀ ಸಿದ್ಧರೂಢ ಮಠದವರೆಗೆ ಕಳಸ, ವಾದ್ಯ ಹಾಗೂ ಕುಂಬ ಮೇಳದೊಂದಿಗೆ ವಿಶ್ವಕರ್ಮ ಭಾವಚಿತ್ರದ ಅದ್ಧೂರಿ ಮೆರವಣಿಗೆ ಜರುಗಿತು.

ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ವಿಶ್ವಕರ್ಮ ಸಂಘಟನೆ ಸಂಚಾಲಕ ಮೌನೇಶ, ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ಬಸವರಾಜ ನಾಯ್ಕಲ್‌, ಬಾಬುರಾವ್‌ ಪತ್ತರ್‌, ಚಿದಾನಂದಪ್ಪ ಗುತ್ತೇದಾರ ಕಾಳೆಬೆಳಗುಂದಿ, ರಾಘವೇಂದ್ರ ಹುಣಸಿಗಿ, ಶಂಕರ ಗುತ್ತೇದಾರ, ತಾಲೂಕು ವಿಶ್ವಕರ್ಮ ಅಧ್ಯಕ್ಷ ಕಾಳಪ್ಪ ದುಪ್ಪಲ್ಲಿ, ಸೈದಾಪುರ ಹೋಬಳಿ ಅಧ್ಯಕ್ಷ ಮೋನಪ್ಪ, ಉಪಾಧ್ಯಕ್ಷ ಬಾಲಪ್ಪ, ಯುವ ಘಟಕದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಬಸವರಾಜ ಬೆಳಗುಂದಿ, ಕಾರ್ಯದರ್ಶಿ ಸಿದ್ದಪ್ಪ ಮುನಗಾಲ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next