ಸೈದಾಪುರ: ವ್ಯಾಪರ ಕೇಂದ್ರವಾಗಿರುವ ಪಟ್ಟಣದಲ್ಲಿ ಗ್ರಾಮ ಪಂಚಾಯತಿಯ ವಿವಿಧ ಕಾರ್ಯಗಳನ್ನು ಪರಿಶೀಲಿಸಿ ಗ್ರಾಮಸ್ಥರು ನೀಡಿದ ಮನವಿಗೆ ಕೂಡಲೇ ಸ್ಪಂದಿಸಬೇಕು ಎಂದು ಜಿಪಂ ಸಿಇಒ ಕವಿತಾ ಎಸ್. ಮನ್ನಿಕೇರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣಕ್ಕೆ ಭೇಟಿ ನೀಡಿದ ಅವರು, ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸೇರಿದಂತೆ ಪಶುಸಂಗೋಪನ ಇಲಾಖೆ ಸ್ಥಳಾಂತರಿಸುವಂತೆ ನೀಡಿದ ಮನವಿಯನ್ನು ಪರಿಶೀಲಿಸಿದ ಅವರು ನಾಗರಿಕರು ಸೇರಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದಕ್ಕೂ ಮುಂಚೆ ಗ್ರಾಮ ಪಂಚಾಯಿತಿ ಕಾರ್ಯವೈಖರಿ ಪರಿಶೀಲಿಸಿ ಸೈದಾಪುರ ಪಟ್ಟಣ ವೇಗದಲ್ಲಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಇಲ್ಲಿನ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಕೂಡಲೇ ಸ್ಪಂದನೆ ಮಾಡಬೇಕು. ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಚರಂಡಿಗಳನ್ನು ಶುದ್ಧವಾಗಿಡಬೇಕು. ಇದಕ್ಕೆ ತಕ್ಕಂತೆ ನಾವು ಕಾರ್ಯ ನಿರ್ವಹಿಸಿದರೆ ನಮ್ಮಿಂದ ನಾಗರಿಕರಿಗೆ ಅನುಕೂಲವಾಗುತ್ತದೆ. ಇದಕ್ಕಾಗಿ ಸೇವಾ ಮನೋಭಾನವೆಯೊಂದಿಗೆ ಪ್ರಾಮಾಣಿಕ ಕೆಲಸ ಮಾಡುವಂತೆ ಸಲಹೆ ನೀಡಿದರು.
ನಂತರ ಪಟ್ಟಣದ ಪಶುಸಂಗೋಪನಾ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳಾಂತರಿಸುವಂತೆ ಗ್ರಾಮಸ್ಥರು ನೀಡಲಾದ ಮನವಿಯನ್ನು ಪರಿಶೀಲನೆ ಮಾಡಿದರು. ಅಲ್ಲದೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಮಾರ್ಗಕ್ಕೆ ಸ್ಪಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಯನ್ನು ಅವಲೋಕಿಸಿದರು. ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಇಗಿನ ಮುಖ್ಯ ರಸ್ತೆ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಇದಕ್ಕೆ ರಸ್ತೆ ಮೇಲಿನ ವ್ಯಾಪಾರಿಗಳ ಸಮಸ್ಯೆ ಒಂದಾದರೆ, ರಸ್ತೆ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡದಿರುವ ದೂರಿನ್ವಯ ತರಕಾರಿ ಮಾರುಕಟ್ಟೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ಕೇಳಿ ಬಂದಿತು. ಇದಕ್ಕೆ ಪೂರಕವಾಗಿ ಪ್ರಯತ್ನ ಮಾಡುವ ಭರವಸೆಯನ್ನು ಸಿಇಒ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ಕುಲಕರ್ಣಿ, ಅಭಿವೃದ್ಧಿ ಅಧಿಕಾರಿ ಶಂಕರಪ್ಪ, ಗ್ರಾಮದ ಮುಖಂಡ ಓಂಕಾರ ತಿವಾರಿ ಇದ್ದರು.
ಪಶುಸಂಗೋಪನಾ ಇಲಾಖೆ ಸ್ಥಳಾಂತರಕ್ಕೆ ನಾನು ನಿವೇಶನ ನೀಡುತ್ತೇನೆ. ಆ ಪ್ರದೇಶವನ್ನು ಪಂಚಾಯತ್ ರಾಜ್ಯ ಇಲಾಖೆ ಬೇರೆ ವಿದಧ ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಒಂದೇ ಮಾರ್ಗವಿದೆ. ಸಂಚಾರದಿಂದ ನಾಗರಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ಇನ್ನೊಂದು ಮಾರ್ಗದ ಅಭಿವೃದ್ಧ್ದಿ ಮಾಡುವಂತೆ ಮನವಿ ಮಾಡಲಾಗಿದೆ.
•
ಓಂಕಾರ ತಿವಾರಿ, ಸ್ಥಳೀಯ ನಿವಾಸಿ
ಈಗಾಗಲೇ ಪಶುಸಂಗೋಪನಾ ಚಿಕಿತ್ಸಾಲಯಕ್ಕೆ ನಿವೇಶನ ನೀಡುತ್ತೇನೆ. ಅದನ್ನು ಸ್ಥಳಾಂತರ ಮಾಡಿ ಅಲ್ಲಿ ಬೇರೆ ವಿವಿಧ ಅನುಕೂಲತೆಯನ್ನು ಪಟ್ಟಣದ ವ್ಯಾಪಾರಿಗಳಿಗೆ ಕಲ್ಪಿಸಿ ಕೊಡುವಂತೆ ನಾಗರಿಕರೊಬ್ಬರು ನೀಡಿದ ಮನವಿಯನ್ನು ಪರಿಶೀಲನೆ ಮಾಡಲಾಗಿದೆ. ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳ ಹಾಗೂ ನಾಗರಿಕರ ಸಲಹೆಯೊಂದಿಗೆ ಕ್ರಮ ಕೈಗೊಳ್ಳಲಾಗುವುದು.
•
ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ