ಸೈದಾಪುರ: ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು-ಅಳಿವು ಮತ್ತು ಬೆಳವಣಿಗೆಗೆ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇವೆ ಮರೆಯುವಂತಿಲ್ಲ ಎಂದು ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ರಾಘವೇಂದ್ರ ಬಾದಮಿ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ನಿಮಿತ್ತ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಎರಡು ಸಾವಿರ ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ಇಷ್ಟೊಂದು ಸಮೃದ್ಧ ಪರಂಪರೆಯ ಮೈಸೂರು ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಏಕೀಕೃತ ವಿಶಾಲ ಮೈಸೂರು ರಾಜ್ಯ ಉದಯಗೊಂಡಿದ್ದು, ಸುವಾರ್ಣಕ್ಷರದ ಐತಿಹಾಸಿಕ ಮೈಲಿಗಲ್ಲು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಬಸವಲಿಂಗಪ್ಪ ವಡಿಗೇರಕರ್, ಶಿಕ್ಷಕರಾದ ರಾಧ ಸಂಗೂಳುಗಿ, ಬಿ.ಬಿ.ವಡವಟ್, ಕಾಸಿಂಬಿ ಐ ಕೊನಂಪಲ್ಲಿ, ಸರಸ್ವತಿ ಆರ್ ಪಾಟೀಲ್, ಶ್ರುತಿ ಗುಂಡಾಲ್, ಸಂತೋಷ ದೇಸಾಯಿ, ಕಾಶಿನಾಥ ಮಡಿವಾಳ್, ಜಿಂದಪ್ಪ ಮಡಿವಾಳ ಇದ್ದರು.
ಕನ್ನಡಾಂಬೆಯ ಭಾವಚಿತ್ರಕ್ಕೆ ಮುಖ್ಯ ವೈದ್ಯಾಧಿಕಾರಿ ಯಶವಂತ ರಾಠೊಡ್ ಪೂಜೆ ಸಲ್ಲಿಸಿದರು. ಈ ವೇಳೆ ಡಾ| ಗಿರಿಜಾ ಪಿ ವಾರದ, ಡಾ| ಅಬ್ದುಲ್ ಭಾಷ, ಡಾ| ಪರೀಜಾ, ಡಾ| ಅಶ್ವಿನಿ, ಸಿಬ್ಬಂದಿಗಳಾದ ಯಶೋದ, ಜಮೀರ್, ನಿಖೀತಾ, ಗೀತಾ, ನಾಗವೇಣಿ, ಶೀಬಾ, ಸೌಭಾಗ್ಯ, ವಜೀರ್, ದುರ್ಗಪ್ಪ, ಪ್ರಶಾಂತ, ಲವ, ವಿಶ್ವನಾಥ ಸೆರಿದಂತೆ ಇತರರಿದ್ದರು.
ಕರವೇ ವತಿಯಿಂದ ನಗರ ಘಟಕದ ಅಧ್ಯಕ್ಷ ನರೇಶ ಬೈರಂಕೊಂಡಿ ಧ್ವಜಾರೋಹಣ ನೆರವೇರಿಸಿದರು. ಸೈದಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ವಿಜಯಕುಮಾರ ರಾಠೊಡ್, ಉಪಾಧ್ಯಕ್ಷ ವೆಂಕಟ ರಾಮುಲು, ಬಸ್ಸು ನಾಯಕ್, ಸುರೇಶ ಬೆಳಗುಂದಿ, ನಂದಗೋಪಾಲ ಪಟವಾರಿ, ಅಂಬರೀಶ, ಮಲ್ಲು ಬಾಡಿಯಾಲ, ಪ್ರಕಾಶ, ಆನಂದ, ಮಂಜು, ಮಹೇಶ ಇದ್ದರು. ಜಯ ಕರ್ನಾಟಕ ರಕ್ಷಣಾ ಸೇನೆ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯಿಂದ ರಾಜ್ಯೋತ್ಸವ ಆಚರಿಸಲಾಯಿತು. ವಲಯಾಧ್ಯಕ್ಷ ವಿರೇಶ ಸಜ್ಜನ ಮಾತನಾಡಿದರು. ಈ ಸಂದರ್ಭದಲ್ಲಿ ಸೈದಾಪುರ ಪೊಲೀಸ್ ಠಾಣೆಯ ಪಿಐ ವಿಜಯ ಕುಮಾರ, ಉಪಾಧ್ಯಕ್ಷ ದಿಲೀಪ, ಶಿವು ಕುಮಾರ ಮುನಗಾಲ, ರಾಘವೇಂದ್ರ ಕಲಾಲ್, ಅರ್ಜುನ ಚವ್ಹಾಣ್, ಸಿದ್ದು ಜೇಗರ್, ಇಮಿ¤ಯಾಜ್, ದೇವಿಂದ್ರಯ್ಯ ಸ್ವಾಮಿ, ಭಾನು ಪ್ರಕಾಶ, ಕಾಶಿನಾಥ ಇದ್ದರು.