Advertisement
ಕೋಟ: ಹೈನುಗಾರರ ಏಳಿಗೆ ಯನ್ನೇ ಧ್ಯೇಯವಾಗಿಟ್ಟುಕೊಂಡು ಜನ್ಮ ತಳೆದ ಸಾೖಬ್ರಕಟ್ಟೆ ಹಾಲು ಉತ್ಪಾದಕರ ಸಂಘ ಗ್ರಾಮೀಣ ಸುಸ್ಥಿರ ಅಭಿವೃದ್ಧಿಗೂ ಇಂದು ಗಮನಾರ್ಹ ಕೊಡುಗೆ ನೀಡುತ್ತಿದೆ.
ಈ ಸಂಘಕ್ಕೆ ಸುತ್ತಲಿನ ನಾಲ್ಕೈದು ಗ್ರಾಮದಿಂದ ಹೇರಳವಾಗಿ ಹಾಲು ಪೂರೈಕೆಯಾಗುತ್ತಿದ್ದರಿಂದ ಹತ್ತೇ ವರ್ಷಗಳಲ್ಲಿ ಕಾವಡಿ, ಮಧುವನ, ಎತ್ತಿನಟ್ಟಿಯಲ್ಲಿ ಸಂಘದ ಉಪಕೇಂದ್ರದ ಶಾಖೆ ಸ್ಥಾಪಿಸಿತು. ಆ ಕಾಲದಲ್ಲಿ ಗ್ರಾಮಾಂತರ ಭಾಗದಲ್ಲಿ ಅತೀ ಹೆಚ್ಚು ಉಪಕೇಂದ್ರ ಹೊಂದಿದ ಡೈರಿ ಎನ್ನುವ ಕೀರ್ತಿಗೆ ಈ ಸಂಘ ಪಾತ್ರವಾಗಿತ್ತು. ಈಗ ಅದೆಲ್ಲವೂ ಸ್ವತಂತ್ರ ಸಂಘವಾಗಿದ್ದು, ಅಂದಿನ ವ್ಯಾಪ್ತಿಯಲ್ಲಿ ಆರೇಳು ಸಂಘಗಳು ಕಾರ್ಯನಿರ್ವಹಿಸುತ್ತಿವೆ.
Related Articles
ಸಂಸ್ಥೆ ಸ್ಥಾಪನೆಯಾದ ಅನಂತರ ಸ್ಥಳೀಯವಾಗಿ ಸಾಕಷ್ಟು ಮಂದಿ ಹೈನುಗಾರಿಕೆಯಲ್ಲಿ ತೊಡಗಿಕೊಂಡರು. ಊರಿನ ಅಕ್ಕ-ಪಕ್ಕದಲ್ಲಿ ಶಾಖೆಗಳನ್ನು ಆರಂಭಿಸಿದ್ದರಿಂದ ಹಾಲು ಉತ್ಪಾದನೆ ಕೂಡ ಹೇರಳ ಪ್ರಮಾಣದಲ್ಲಿ ಹೆಚ್ಚಿತು.
Advertisement
ಪ್ರಸ್ತುತ ಸ್ಥಿತಿಗತಿಪ್ರಸ್ತುತ 165ಮಂದಿ ಸದಸ್ಯರನ್ನು ಹೊಂದಿದ್ದು, ಪ್ರತಿದಿನ 750 ಲೀಟರ್ ಹಾಲು ಸಂಗ್ರಹವಾಗುತ್ತಿದೆ ಹಾಗೂ 2014ರಲ್ಲಿ ಸಂಘದಲ್ಲಿ ಶೀತಲೀಕರಣ ಕೇಂದ್ರವನ್ನು ಸ್ಥಾಪಿಸಿದ್ದು ಸ್ಥಳೀಯ ಐದು ಡೈರಿಗಳಿಂದ ಇಲ್ಲಿಗೆ ಹಾಲು ಪೂರೈಕೆಯಾಗುತ್ತಿದೆ. ಪ್ರಸ್ತುತ ಅಧ್ಯಕ್ಷರಾದ ಪ್ರದೀಪ್ ಬಲ್ಲಾಳ್ ಅವರು ಸತತ 30ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯದರ್ಶಿಯಾಗಿ ಶಂಭು ಶೆಟ್ಟಿ ಇದ್ದಾರೆ. ಸ್ಥಳೀಯರಾದ ರಂಜಿತ್ ಕುಮಾರ್‌ಶೆಟ್ಟಿ, ಮಂಜುನಾಥ ಕೊಡ್ಲ, ಶಾರದಾ ಬಾೖ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುತ್ತಿದ್ದಾರೆ. ಸಾೖಬ್ರಕಟ್ಟೆ ಸುತ್ತ-ಮುತ್ತ ಗ್ರಾಮೀಣ ಪ್ರದೇಶದಲ್ಲಿ 7 ಹಾಲು ಉತ್ಪಾದಕರ ಸಂಘಗಳಿದ್ದು ಸುಮಾರು 1300-1500 ಮಂದಿ ಕ್ರಿಯಾಶೀಲ ಹೈನುಗಾರರಿದ್ದಾರೆ ಮತ್ತು ಪ್ರತಿದಿನ ಒಟ್ಟು ಸುಮಾರು 6 ಸಾವಿರ ಲೀ. ಹಾಲು ಸಂಗ್ರಹವಾಗುತ್ತಿದೆ ಹಾಗೂ ಈ ಹಾಲಿಗೆ ಸರಕಾರದಿಂದ ಒಟ್ಟು 30 ಸಾವಿರ ರೂ ಪ್ರೋತ್ಸಾಹಧನ, 2.10ಲಕ್ಷ ರೂ ನಗದು ಹೈನುಗಾರರ ಕೈ ಸೇರುತ್ತದೆ. ಇದು ಪುಟ್ಟ ಗ್ರಾಮೀಣ ಪ್ರದೇಶವೊಂದರ ಅರ್ಥಿಕತೆಗೆ ಹೈನುಗಾರಿಕೆ ನೀಡುತ್ತಿರುವ ಕೊಡುಗೆಯಾಗಿದೆ. ಪ್ರಶಸ್ತಿ ಪುರಸ್ಕಾರ
2013ನೇ ಸಾಲಿನಲ್ಲಿ ಒಕ್ಕೂಟದಿಂದ ಉತ್ತಮ ಸಂಘ ಎನ್ನುವ ಪುರಸ್ಕಾರಕ್ಕೆ ಸಂಸ್ಥೆ ಪಾತ್ರವಾಗಿದೆ ಹಾಗೂ ಧಾರವಾಡ ಒಕ್ಕೂಟದ ಪದಾಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿ ಕಾರ್ಯಚಟುವಟಿಕೆಯನ್ನು ಗಮನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 10 ಲೀ. ಹಾಲಿನೊಂದಿಗೆ ಆರಂಭಗೊಂಡ ಈ ಸಂಸ್ಥೆ ಇದೀಗ ಸಾಕಷ್ಟು ಬೆಳವಣಿಗೆಯಾಗಿದೆ. ಸಂಸ್ಥೆಯ ಅಭಿವೃದ್ಧಿಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮ ಮೇಲಿದೆ.
ಪ್ರದೀಪ್ ಬಲ್ಲಾಳ್,ಅಧ್ಯಕ್ಷರು ಅಧ್ಯಕ್ಷರು
ಎಂ.ರಾಮದಾಸ ಕಿಣಿ, ರಂಗನಾಥ ಅಡಿಗ, ಪ್ರಶಾಂತ್ ಬಲ್ಲಾಳ್, ಪ್ರದೀಪ್ ಬಲ್ಲಾಳ್ (ಹಾಲಿ)
ಕಾರ್ಯದರ್ಶಿ
ಕಮಲಾಕರ್ ರಾವ್, ನರಸಿಂಹ ಶ್ಯಾನುಭಾಗ್, ಶಂಭು ಶೆಟ್ಟಿ (ಹಾಲಿ) -ರಾಜೇಶ್ ಗಾಣಿಗ ಅಚ್ಲಾಡಿ