Advertisement

Sai kumar; ‘ಮಹಾ ಅದ್ಭುತ’ದಲ್ಲಿ ಸಾಯಿ ಕುಮಾರ್

02:27 PM Oct 31, 2023 | Team Udayavani |

ಡೆಕ್ಕನ್‌ ಎಂಟರ್‌ ಪ್ರೈಸಸ್‌ ಲಾಂಛನದಲ್ಲಿ ಸಿಕಂದರ್‌ರವರು ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ “ಮಹಾ ಅದ್ಭುತ’ ಚಿತ್ರ ಶೀಘ್ರದಲ್ಲೇ ಆರಂಭವಾಗಲಿದೆ. ದುಷ್ಟ ಶಕ್ತಿ ಹಾಗೂ ದೈವ ಶಕ್ತಿ ನಡುವೆ ನಡೆಯುವ ವಿಚಾರಗಳನ್ನೊಳಗೊಂಡ ಈ ಚಿತ್ರದಲ್ಲಿ ಸಾಯಿಕುಮಾರ್‌, ಅಕರ್‌ ಬಿನ್‌ ಟಬರ್‌, ಶೋಭರಾಜ್‌, ಎಂ.ಡಿ.ಖಾನ್‌, ಜೀವ, ವೆಂಕಟರಾಜು ಅಜೀಜ್‌ ರಿಜ್ವಾನ್‌, ಎಂ.ಆರ್‌. ಚೌದರಿ ಇದ್ದಾರೆ.

Advertisement

ಚಿತ್ರವು ಬೆಂಗಳೂರು ಹುಮ್ನಾಬಾದ್‌, ಬೀದರ್‌, ರಾಜಾಸ್ಥಾನ್‌, ಮಧ್ಯಪ್ರದೇಶವ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಮಂತ್ರವಿದ್ಯೆ ಅನ್ನೋದು ಒಂದು ಅಲೌಕಿಕ ಶಕ್ತಿ ಅದರ ಸಿದ್ಧಿ ಸಾಮಾನ್ಯವಲ್ಲ. ಮಾಂತ್ರಿಕ ಜಗತ್ತಿನ ಮಂತ್ರವಾದಿಗಳು, ನಿಧಿಯನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಕಾಳ ಸರ್ಪ ಕಾಣಿಸಿಕೊಳ್ಳುತ್ತದೆ. ಅದು ಮಂತ್ರವಾದಿಯ ಗುರುವನ್ನು ಬಲಿ ತೆಗೆದುಕೊಳ್ಳುತ್ತದೆ. ಮಂತ್ರವಾದಿ ಅಲೌಕಿಕ ಶಕ್ತಿಯನ್ನು ಪಡೆಯಲು ಹೊರಡುತ್ತಾನೆ. ಈ ಹಿನ್ನೆಲೆಯಲ್ಲಿ ಮಾಂತ್ರಿಕಶಕ್ತಿಗೆ ಎದುರಾಗಿ ದೈವಶಕ್ತಿ ನಿಲ್ಲುತ್ತದೆ. ಈ ಸಂಘರ್ಷದ ತಾಕಲಾಟವೇವನ್ನು ಮಹಾ ಅದ್ಭುತ ಚಿತ್ರದಲ್ಲಿ ಹೇಳಲಿದೆ ಚಿತ್ರತಂಡ. ಆರಿಫ್ ಲಲಾನಿ ಛಾಯಾಗ್ರಹಣ, ವಿನ್ನು ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next