ಬೆಂಗಳೂರು: ಜ್ಯುವೆಲರಿ ಕ್ಷೇತ್ರದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 3ನೇ ಮಳಿಗೆ ಯಲಹಂಕ ಓಲ್ಡ್ ಟೌನ್ ಅಂಚೆ ಕಚೇರಿ ಸಮೀಪದ ನೆಹರುನಗರದಲ್ಲಿ ಫೆ.17 ರಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಮತ್ತು ಶ್ರೀ ಚೆನ್ನಮ್ಮ ದೇವೇಗೌಡ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಶ್ರೀಮತಿ ಅನಿತಾ ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮತ್ತು ಶ್ರೀ ಭವಾನಿ ರೇವಣ್ಣ ಅವರು ವಜ್ರಾಭರಣಗಳ ವಿಭಾಗವನ್ನು ಅನಾವರಣಗೊಳಿಸಲಿದ್ದಾರೆ.
ಈ ಸಂದರ್ಭದಲ್ಲಿ ಮೇಯರ್ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್, ಪಾಲಿಕೆ ಸದಸ್ಯೆ ಶ್ರೀಮತಿ ಚಂದ್ರಮ್ಮ ಕೆಂಪೇಗೌಡ, ಚಿತ್ರನಟಿ ಮತ್ತು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ರಾಯಭಾರಿ ಕು. ರೂಪಿಕಾ ಹಾಗೂ ನಟಿ ಕವಿತಾ ಗೌಡ ಉಪಸ್ಥಿತರಿರಲಿದ್ದಾರೆ.
ಶೋರೂಂ ಆರಂಭದ ಕೊಡುಗೆಯಾಗಿ ದುಬೈ ಚಿನ್ನದ ದರದಲ್ಲಿ ಆಭರಣಗಳು ಮಾರಾಟ ಮಾಡಲಾಗುವುದು. ಗ್ರಾಹಕರ ಹಳೆ ಚಿನ್ನಕ್ಕೆ ಎಸ್‌ಎಸ್‌ಜಿಪಿ ದರ ಹಾಗೂ ವಿಶೇಷ ಕೊಡುಗೆಯಾಗಿ ಪ್ರತಿ ಗ್ರಾಂ 125 ರೂ. ಹೆಚ್ಚಿಗೆ ನೀಡಲಾಗುವುದು.
ಒಂದು ಕೆಜಿ ಬೆಳ್ಳಿ ವಸ್ತು ಕೊಂಡಲ್ಲಿ 2000 ರೂ. ರಿಯಾಯಿತಿ ಹಾಗೂ ಪ್ರತಿ ಕ್ಯಾರೆಟ್ ವಜ್ರಾಭರಣ ಖರೀದಿ ಮೇಲೆ 5000 ರೂ. ರಿಯಾಯಿತಿ ನೀಡಲಾಗುವುದು. ಅಲ್ಲದೆ, ಮೊದಲ 100 ಬಿಲ್‌ಗಳಿಗೆ ಆಶ್ಚರ್ಯಕರ ಕೊಡುಗೆಗಳು ಇರಲಿವೆ ಎಂದು ಸಂಸ್ಥೆಯ ಮಾಲೀಕ ಡಾ. ಟಿ.ಎ. ಶರವಣ ಅವರು ತಿಳಿಸಿದ್ದಾರೆ.