ಬೆಂಗಳೂರು: ಆಭರಣ ಮಾರಾಟ ಕ್ಷೇತ್ರದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಐಪಿಎಲ್ ಸೀಸನ್ ಕೊಡುಗೆ ಮಾರಾಟ ಆರಂಭವಾಗಿದೆ. ಪುರುಷರು ಈ ಸಲ ಕಪ್ ನಮ್ಮದೆ ಎಂದು ಓಡಾಡ್ತಿದ್ರೆ, ಮಹಿಳೆಯರು ಸಾಯಿ ಗೋಲ್ಡ್ ಲೀಗ್ ಆಫರ್ ಬಗ್ಗೆ ಮಾತಾಡ್ತಿದ್ದಾರೆ.
ಹೌದು, ನಗರದ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್, ಇದುವರೆಗೂ ಯಾರೂ ನೀಡಿರದಂತಹ ಬಂಪರ್ ಕೊಡುಗೆಯನ್ನು ಈ ಕ್ರಿಕೆಟ್ ರುತುವಿನಲ್ಲಿ ನೀಡುತ್ತಿದೆ. ಕ್ರಿಕೆಟ್ ಮೇಲಿನ ಅಭಿಮಾನ ಹಾಗೂ ರಾಯಲ್ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಬೆಂಬಲ ಸೂಚಿಸುವ ಸಲುವಾಗಿ “ಸಾಯಿ ಗೋಲ್ಡ್ ಲೀಗ್’ ಯೋಜನೆ ಆರಂಭಿಸಿದೆ.
ಆರ್‌ಸಿಬಿ ತಂಡ ಕಲೆಹಾಕುವ ಸ್ಕೋರ್ ಮತ್ತು ಉರುಳಿಸುವ ವಿಕೆಟ್‌ಗಳೇ ಇದರ ರಿಯಾಯಿತಿ ಮಾನದಂಡ. ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡುತ್ತದೋ ಅಥವಾ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೋ ಎಂಬುದರ ಆಧಾರದ ಮೇಲೆ ಈ ಕೊಡುಗೆ ನಿರ್ಧಾರವಾಗುತ್ತದೆ. ಆರ್‌ಸಿಬಿ ಗಳಿಸುವ ಪ್ರತಿ ಒಂದು ರನ್ 1 ರೂ.ಗೆ ಸಮ.
ಆರ್‌ಸಿಬಿ ಬೌಲರ್‌ಗಳು ಉರುಳಿಸುವ ಪ್ರತಿ ಒಂದು ವಿಕೆಟ್ 20 ರೂ.ಗೆ ಸಮ. ಮೊದಲು ಬ್ಯಾಟ್ ಮಾಡಿ ತಂಡ 300 ರನ್ ಹೊಡೆದರೆ ಗ್ರಾಹಕರು ಖರೀದಿಸುವ ಪ್ರತಿ ಗ್ರಾಂ ಚಿನ್ನದ ಮೇಲೆ 300 ರೂ. ಡಿಸ್ಕೌಂಟ್, ಅದೇ ರೀತಿ ಮೊದಲು ಬೌಲಿಂಗ್ ಮಾಡಿ 10 ವಿಕೆಟ್ ಪಡೆದರೆ 200 ರೂ. ರಿಯಾಯಿತಿ.
ಆದರೆ, ಆರ್‌ಸಿಬಿ ಪಂದ್ಯ ಗೆದ್ದರೆ ಮಾತ್ರ ಈ ಎಲ್ಲ ಕೊಡುಗೆ. ಒಂದು ವೇಳೆ ಸೋತರೆ ಅಥವಾ ಪಂದ್ಯ ಡ್ರಾ ಆದರೆ 50% ಆಫರ್ ಕಡಿತವಾಗುತ್ತದೆ. ಈ ಕೊಡುಗೆ ಪಂದ್ಯ ಮುಗಿದ ಮರುದಿನ ಕೆಲಸದ ವೇಳೆಗೆ ಮಾತ್ರ ಅನ್ವಯಿಸಲಿದೆ ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ತಿಳಿಸಿದ್ದಾರೆ.
ಐಪಿಎಲ್ ಅನ್ನು ಗಣನೆಗೆ ತೆಗೆದುಕೊಂಡು ಚಿನ್ನಾಭರಣಗಳ ಮೇಲೆ ಈ ವಿನೂತನ ಕೊಡುಗೆ ರೂಪಿಸಿರುವುದು ಇದೇ ಮೊದಲು. ಅಲ್ಲದೆ, ತಂಡದ ಮೇಲಿನ ಅಭಿಮಾನ ಹಾಗೂ ನಮ್ಮ ಗ್ರಾಹಕರನ್ನು ಸಂತೃಪ್ತಿಗೊಳಿಸಲು ಇದೊಂದು ಉತ್ತಮ ಅವಕಾಶ ಎಂದು ಅವರು ಹೇಳಿದ್ದಾರೆ.