ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ 25ನೇ “ರಜತ ಸಂಭ್ರಮ’ ಕನ್ನಡ ಸಾಹಿತ್ಯ ಸಮ್ಮೇಳನ ಉಜಿರೆಯಲ್ಲಿ ಕುಂಬ್ಳೆ ಸುಂದರ ರಾವ್ ಪ್ರಾಂಗಣ, ಶ್ರೀಕೃಷ್ಣಾನುಗ್ರಹ ಸಭಾಂಗಣದ ಸಾರಾ ಅಬೂಬಕರ್ ವೇದಿಕೆಯಲ್ಲಿ ಫೆ. 3ರಿಂದ 5ರ ವರೆಗೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಜರಗಲಿದೆ. ಜ. 3ರಂದು ಬೆಳಗ್ಗೆ 9.30ಕ್ಕೆ ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ ರಾಷ್ಟ್ರ ಧ್ವಜಾರೋಹಣಗೈದು ಸಮ್ಮೇಳ ನಕ್ಕೆ ಚಾಲನೆ ನೀಡುವರು. ಸಂಜೆ ಸಮ್ಮೇಳನದ ಅಧ್ಯಕ್ಷರನ್ನು ಶ್ರೀ ಜನಾರ್ದನ ಸ್ವಾಮಿ ದೇವ ಸ್ಥಾನದ ಮಹಾ ದ್ವಾರದಿಂದ ಸಮ್ಮೇಳ ನದ ಸಭಾಂಗಣಕ್ಕೆ ಬರಮಾಡಿಕೊಳ್ಳ ಲಾಗು ತ್ತದೆ. ಜತೆಗೆ ಸಮ್ಮೇಳನ ಮತ್ತು ಪರಿ ಷತ್ತಿನ ಧ್ವಜಾರೋಹಣ ನಡೆಯಲಿದೆ.
ಸಂಜೆ 5ಕ್ಕೆ ರಾಜ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ| ಮಹೇಶ ಜೋಷಿ ಸಮ್ಮೇಳನವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸಮ್ಮೇಳನದ ಸಂಚಿಕೆ ಅನಾ
ವರಣ ಮಾಡಲಿದ್ದಾರೆ. ಶಾಸಕ ಹರೀಶ ಪೂಂಜ ಪ್ರದರ್ಶನ ಮಳಿಗೆ, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಉದ್ಘಾಟಿಸುವರು. ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಾಮಾಜಿಕ, ಶೈಕ್ಷಣಿಕ ಸೇವೆಗಾಗಿ ಡಾಕ್ಟರೆಟ್ ಪದವಿ ಪುರಸ್ಕೃತರಿಗೆ ವಿಶೇಷ ಅಭಿನಂದನೆ ನಡೆಯಲಿದೆ.
ವಿವಿಧ ಗೋಷ್ಠಿ, ಉಪನ್ಯಾಸ
ಫೆ. 4ರಂದು ಬೆಳಗ್ಗೆ 9ಕ್ಕೆ ಉದಯರಾಗದೊಂದಿಗೆ ಸಮ್ಮೇಳನ ಆರಂಭವಾಗಲಿದೆ. ದೈವಾ ರಾಧನೆ ಮತ್ತು ತುಳುನಾಡು, ಜಿಲ್ಲೆಯ ಸಾಹಿತ್ಯ ಪರಂಪರೆ, ಅಗಲಿದ ಗಣ್ಯರಿಗೆ ನುಡಿನಮನ, ಮಾಧ್ಯಮ-ಸವಾಲು ಗಳು, ನೂತನ ಪುಸ್ತಕಗಳ ಲೋಕಾ ರ್ಪಣೆ, ಸಾಧಕರಿಗೆ ಸಮ್ಮಾನ, ಪರಿಸರ ಮತ್ತು ಜೀವ ಸಂಕುಲಗಳು, ಆತ್ಮನಿರ್ಭರ, ಕವಿಗೋಷ್ಠಿ, ರಂಗ ವೈಖರಿ, ಮಂಕುತಿಮ್ಮನ ಕಗ್ಗ – ಜೀವನ ಮೌಲ್ಯಗಳು ಮೊದಲಾದ ಗೋಷ್ಠಿಗಳು ಮತ್ತು ಉಪನ್ಯಾಸಗಳನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
Related Articles
ಸಮ್ಮೇಳನಾಧ್ಯಕ್ಷರೊಂದಿಗೆ ವಿವಿಧ ವಿಷಯಗಳ ತಜ್ಞರು ಸಂವಾದ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ. ಜತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಬಹಿರಂಗ ಅಧಿವೇಶನ ಮತ್ತು ಮಸೂದೆ ಮಂಡನೆ ಕಾರ್ಯಕ್ರಮ ನಡೆಯಲಿದ್ದು ಬಳಿಕ ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ಸಮಾರೋಪ ಜರಗಲಿದೆ.
ವಿಶೇಷ ಆಹ್ವಾನಿತರಾಗಿ ಉಡುಪಿ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಸಮಾರೋಪ ಭಾಷಣಕಾರರಾಗಿ ಡಾ| ತಾಳ್ತಜೆ ವಸಂತ ಕುಮಾರ್ ಆಗಮಿಸಲಿದ್ದಾರೆ.
ಸಮಾರೋಪದಲ್ಲಿ ವಿಶೇಷ ಸಾಧಕ ಸಮ್ಮಾನವು ನೆರವೇರಲಿದ್ದು, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮಹಾ ಬಲೇಶ್ವರ ಎಂ.ಎಸ್. ಸಮ್ಮಾನಿಸಲಿದ್ದಾರೆ.
39 ಮಂದಿಗೆ ಗೌರವ
ಮೂರು ವಿಭಾಗಗಳಲ್ಲಿ 39 ಮಂದಿಗೆ ಗೌರವಾರ್ಪಣೆ ನಡೆಯಲಿದ್ದು, 21 ಮಂದಿ ಕವಿಗಳು ಪಾಲ್ಗೊಳ್ಳುವ ಕವಿಗೋಷ್ಠಿ ನಡೆಯುತ್ತದೆ. 16 ನೂತನ ಪುಸ್ತಕಗಳು ಬಿಡಗಡೆ ಯಾಗಲಿವೆ. 17 ಕಲಾತಂಡಗಳಿಂದ ವೈವಿಧ್ಯಮಯ ಕಲಾ ಕಾರ್ಯಕ್ರಮ ಗಳು ನಡೆಯಲಿವೆ.
ಉಜಿರೆಯ ಶರತ್ ಕೃಷ್ಣ ಪಡ್ವೆಟ್ನಾಯ ಅವರ ಅಧ್ಯಕ್ಷತೆಯ ಸ್ವಾಗತ ಸಮಿುತಿ, ಶಾಸಕ ಹರೀಶ್ ಪೂಂಜ ಅವರ ಗೌರವ ಕಾರ್ಯಾಧ್ಯಕ್ಷತೆ ಮತ್ತು ಪ್ರತಾಪಸಿಂಹ ನಾಯಕ್ ಅವರ ಕಾರ್ಯಾಧ್ಯಕ್ಷತೆಯ ಸಮಿತಿ, ಬೆಳ್ತಂಗಡಿ ತಾಲೂಕು ಕಸಾಪದ ಅಧ್ಯಕ್ಷರಾದ ಡಿ. ಯದುಪತಿ ಗೌಡ ಅವರ ಸ್ವಾಗತ ಸಮಿತಿಯ ಸಂಯೋಜನೆಯಲ್ಲಿ ಸಮ್ಮೇಳ ನದ ರೂಪರೇಖೆ, ತಯಾರಿ ನಡೆಯುತ್ತಿದೆ. 23 ವಿವಿಧ ಉಪ ಸಮಿತಿಗಳ ಜವಾಬ್ದಾರಿಯಲ್ಲಿ ಸಮಗ್ರ ಸಮ್ಮೇಳನದ ಕಾರ್ಯಗಳು ನಡೆಯುತ್ತಿವೆ. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರ ಗೌರವಾಧ್ಯಕ್ಷತೆ ಮತ್ತು ಮಾರ್ಗ ದರ್ಶನ ದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕು ಸಜ್ಜುಗೊಳ್ಳುತ್ತಿದೆ ಎಂದು ಡಾ| ಶ್ರೀನಾಥ ವಿವರಿಸಿದರು.
ಗೌರವ ಕಾರ್ಯದರ್ಶಿ ವಿನಯ ಆಚಾರ್, ಸಂಘಟನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಹ ಕಾರ್ಯದರ್ಶಿ ಯು.ಎಚ್. ಖಾಲಿದ್, ಕೇಂದ್ರ ಸಮಿತಿ ಸದಸ್ಯ ಡಾ| ಮಾಧವ ಮೂಡುಕೊಣಾಜೆ ಉಪಸ್ಥಿತರಿದ್ದರು.