Advertisement

ಮಾರ್ಚ್‌ 19ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

06:45 AM Mar 18, 2018 | Team Udayavani |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ “ಗೌರವ ಪ್ರಶಸ್ತಿ’, “ಸಾಹಿತ್ಯ ಶ್ರೀಪ್ರಶಸ್ತಿ’ ಮತ್ತು 2016ನೇ ಸಾಲಿನ “ಪುಸ್ತಕ ಬಹುಮಾನ ಪ್ರಶಸ್ತಿ’, ಪ್ರದಾನ ಸಮಾರಂಭ ಮಾರ್ಚ್‌ 19 ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ಗಂಟೆಗೆ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ .ಅತಿಥಿಗಳಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿ ಆಯ್ಕೆಯ ವಿಚಾರದಲ್ಲಿ ಈ ಹಿಂದೆ ಕೆಲವು ಆರೋಪಗಳು ಬರುತ್ತಲೇ ಇದ್ದವು. ಈ ಹಿನ್ನೆಲೆಯಲ್ಲಿ ಪಾರದರ್ಶಕ ಆಯ್ಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಸಾಹಿತ್ಯಶ್ರೀ ಪ್ರಶಸ್ತಿ ಸ್ಥಾಪನೆಯಿಂದಾಗಿ ಮತ್ತಷ್ಟು ಸಾಧಕರನ್ನು ಗೌರವಿಸಲು ಸಾಧ್ಯವಾಗಿದೆ. ಸಾಹಿತ್ಯ ವಲಯದಲ್ಲೂ  ಈ ಬಾರಿಯ ಪ್ರಶಸ್ತಿ ಆಯ್ಕೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.

ಚತುರ್ಮುಖ ಮಾಲಿಕೆ: ಡಾ.ಶಿವರಾಮ ಕಾರಂತ, ಡಾ.ದ.ರಾ.ಬೇಂದ್ರಯಿಂದ ಹಿಡಿದು ಇಲ್ಲಿಯ ವರೆಗೂ ಗೌರವ ಪ್ರಶಸ್ತಿ ಪುರಸ್ಕೃತರಾದ 278 ಸಾಹಿತಿಗಳಿಗೆ ಸಂಬಂಧಿಸಿದಂತೆ ಪುಸ್ತಕ ಮಾಲಿಕೆ ಹೊರತರುವ ಆಲೋಚನೆ ಅಕಾಡೆಮಿಯ ಮುಂದಿದೆ. ಈ ವರ್ಷದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದ್ದು, ನಾಲ್ಕು ಜನ ಪ್ರಶಸ್ತಿ ಪುರಸ್ಕೃತರನ್ನೊಳಗೊಂಡಂತೆ ಒಂದೊಂದು ಕೃತಿಗಳನ್ನು ಪ್ರತ್ಯೇಕವಾಗಿ “ಚತುರ್ಮುಖ ಮಾಲಿಕೆಯ’ ಹೆಸರಿನಲ್ಲಿ ಪ್ರಕಟಿಸಲಾಗುವುದು. ಈ ಮಾಲಿಕೆಗೆ ಲೇಖನಗಳನ್ನು ಬೆಂಗಳೂರು ವ್ಯಾಪ್ತಿಯಲ್ಲಿರುವ ಕನ್ನಡ ಉಪನ್ಯಾಸಕರಿಂದ ಬರೆಸಲಾಗುವುದು ಎಂದು ತಿಳಿಸಿದರು.

ಸಾಹಿತ್ಯ ಶ್ರೀ ಪ್ರಶಸ್ತಿ ಫ‌ಲಕ:
ಇದೇ ಮೊದಲ ಭಾರಿಗೆ ಅಕಾಡೆಮಿ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಆರಂಭಿಸಿದು,ª 10 ಮಂದಿ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕನ್ನಡದಲ್ಲಿ ಶಿಲಾಶಾಸನ ಬರೆಯುತ್ತಿರುವ ಮಹಿಳೆಯ ಶಿಲ್ಪವನ್ನು ಸಾಹಿತ್ಯ ಶ್ರೀ ಪ್ರಶಸ್ತಿಗೆ ಲಾಂಚನವನ್ನಾಗಿ ಬಳಸಿಕೊಳ್ಳಲಾಗಿದೆ. ಈ ಹಿಂದೆ ಗೌರವ ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುತ್ತಿದ್ದ ಸರಸ್ವತಿ ಪ್ರಶಸ್ತಿ ಫ‌ಲಕದ ಅಳತೆಯಲ್ಲೂ ಅಲ್ಪ ಮಟ್ಟಿನ ಬದಲಾವಣೆ ಮಾಡಲಾಗಿದೆ.ಚಿಕ್ಕ ಗಾತ್ರದಲ್ಲಿದ್ದ ವೀಣೆ ಹಿಡಿದ ಸರಸ್ವತಿ ಜಾಗದಲ್ಲಿ ಅದೇ ರೀತಿಯ‌ ಸ್ವಲ್ಪ ಎತ್ತರದ ಪ್ರಶಸ್ತಿ ಫ‌ಲಕವನ್ನು ಮಾಡಲಾಗಿದೆ ಎಂದು ಅರವಿಂದ ಮಾಲಗತ್ತಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next