Advertisement
* ಇಲ್ಲಿ ಸಿಕ್ಕಾಪಟ್ಟೆ ವಕೌìಟ್ ಮಾಡಿದಂತೆ ಕಾಣುತ್ತಲ್ವಾ?ಹೌದು, ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಒಂದಷ್ಟು ದೇಹ ಗಟ್ಟಿಗೊಳಿಸಬೇಕಿತ್ತು. ಆ ಪಾತ್ರ ಸ್ಲಿಮ್ ಆಗಿ, ಕಟ್ಟುಮಸ್ತಾಠಗಿ ಕಾಣಬೇಕಿತ್ತು. ಹಾಗಾಗಿ ಎಂಟು ಕೆಜಿ ತೂಕ ಕಡಿಮೆ ಮಾಡಿಕೊಂಡೆ. ರೆಗ್ಯುಲರ್ ವಕೌìಟ್ ಮಾಡಿದೆ. ಸಾಕಷ್ಟು ಡಯೆಟ್ ಕೂಡ ಮಾಡಿದೆ. 30 ದಿನಗಳ ಶೂಟಿಂಗ್‌ನಲ್ಲೂ ಡಯೆಟ್‌ನಲ್ಲೇ ಇದ್ದೆ.
ನಿಜಕ್ಕೂ ಇದು ಚಾಲೆಂಜಿಂಗ್ ಸಬೆjಕ್ಟ್. ಧನುಶ್ ಅವರ 25ನೇ ಚಿತ್ರವಿದು. ಮೊದಲು ನನಗೆ ಅವಕಾಶ ಬಂದಾಗ, ಮಾಡುವುದೋ, ಬೇಡವೋ ಎಂಬ ಪ್ರಶ್ನೆ ಕಾಡುತ್ತಿತ್ತು. ಯಾಕೆಂದರೆ, ಅಲ್ಲಿ ಧನುಷ್‌ರಂತಹ ಸೂಪರ್‌ಸ್ಟಾರ್ ನಟ ಮಾಡಿದ ಪಾತ್ರವನ್ನು ನನ್ನ ಕೈಯಲ್ಲಿ ಮಾಡೋಕ್ಕಾಗುತ್ತಾ ಎಂಬ ಅನುಮಾನವಿತ್ತು. ಯಾಕೆಂದರೆ, ನಾನಿನ್ನೂ ಹೊಸಬ. ಆ ಮಟ್ಟಕ್ಕೆ ಜೀವ ತುಂಬಲು ಸಾಧ್ಯನಾ? ಅನಿಸಿತ್ತು. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಿರ್ದೇಶಕ ನಂದಕಿಶೋರ್ ಅವರು ವಿಶ್ವಾಸ ತುಂಬಿದ್ದರಿಂದ ಒಪ್ಪಿಕೊಂಡೆ. ಇದೊಂದು ಬೇರೆ ರೀತಿಯ ಚಿತ್ರ ಎನ್ನಬಹುದಷ್ಟೇ. * ಎಲ್ಲೋ ಒಂದು ಕಡೆ ಸರಿಯಾಗಿ ಪ್ರಚಾರ ಸಿಗುತ್ತಿಲ್ಲ ಅನಿಸುತ್ತಿಲ್ಲವೇ?
ಹಾಗೇನೂ ಇಲ್ಲ, ರಾಕ್‌ಲೈನ್ ವೆಂಕಟೇಶ್ ಅವರು ಏನೇ ಮಾಡಿದರೂ ಪಕ್ಕಾ ಪ್ಲಾನ್ ಮಾಡುತ್ತಾರೆ. ಈಗಾಗಲೇ ಸಾಕಷ್ಟು ಟಿವಿ, ಚಾನೆಲ್‌ಗಳಲ್ಲಿ ಸಂದರ್ಶನ ನಡೆದಿದೆ. ಅವರ ಪ್ಲಾನ್ ಪ್ರಕಾರವೇ ನಡೆಯುತ್ತಿದೆ.
Related Articles
ಅಪ್ಪ-ಅಮ್ಮನ ಎಪಿಸೋಡ್, ನಾಯಕ-ನಾಯಕಿ ಕಿತ್ತಾಡುವ ದೃಶ್ಯ ಸೇರಿದಂತೆ ಇನ್ನೂ ಕೆಲವು ವಿಶೇಷ ದೃಶ್ಯಗಳು ನನಗಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುತ್ತವೆ. ಇನ್ನು, ಲೆಂಥಿ ಡೈಲಾಗ್ ಹೇಳಿರುವುದು ಎಲ್ಲರಿಗೂ ಇಷ್ಟ. ಅದೊಂದು ಚಾಲೆಂಜಿಂಗ್ ಆಗಿತ್ತು.
Advertisement
* ದೊಡ್ಡ ಬ್ಯಾನರ್‌ನ ಕೆಲಸ ಹೇಗಿತ್ತು?ನಾನು ನಿಜಕ್ಕೂ ಲಕ್ಕಿ. ಮೊದಲ ಚಿತ್ರ ಜಯಣ್ಣ ಅವರ ಬ್ಯಾನರ್‌ನಲ್ಲಿ ಮಾಡಿದೆ. ಎರಡನೇ ಚಿತ್ರ ಕೂಡ ರಾಕ್‌ಲೈನ್ ವೆಂಕಟೇಶ್ ಅವರ ಬ್ಯಾನರ್‌ನಲ್ಲಿ ಮಾಡಿದೆ. ನಾನು ಅದೃಷ್ಟವಂತ. ರಾಕ್‌ಲೈನ್ ವೆಂಕಟೇಶ್ ಅವರನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಅವರ ಬ್ಯಾನರ್, ನಮ್ಮ ಬ್ಯಾನರ್ ಇದ್ದಂತೆ. ನಿನಗೇನು ಬೇಕೋ ಕೇಳು, ಏನಾದರೂ ತಗೋ, ಸುಸ್ತಾದರೆ ರೆಸ್ಟ್ ಮಾಡು, ನಿನ್ನನ್ನು ಯಾರೂ ಏನೂ ಕೇಳ್ಳೋಲ್ಲ, ಆರಾಮವಾಗಿ ಕೆಲಸ ಮಾಡು ಅನ್ನುತ್ತಿದ್ದರು. ಅಂತಹ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. * ಕನ್ನಡಕ್ಕೇನಾದ್ರೂ ಬದಲಾವಣೆಯಾಗಿದೆಯಾ?
ನಾನು ಬದಲಾಗಿದ್ದೇನೆ ಅಷ್ಟೇ. “ಸಾಹೇಬ’ ಸಾಫ್ಟ್ ಪಾತ್ರ. ಇಲ್ಲಿ ಟಪೋರಿಯಂತಹ ಪಾತ್ರ. ಸ್ಕ್ರಿಪ್ಟ್ ಹಾಗೇ ಇದ್ದರೂ, ನಾನು ಬದಲಾಗಿದ್ದೇನೆಂದು ಹೇಳಬಹುದು. * ಸಿನ್ಮಾ ನೋಡಿದಾಗ ಹೇಗನ್ನಿಸಿತು?
ಡಬ್ಬಿಂಗ್ ಮಾಡಿ, ಮೊದಲ ಔಟ್‌ಪುಟ್ ನೋಡಿದಾಗ, ಏನೋ ಮಿಸ್ ಆಗ್ತಾ ಇದೆ ಅಂತನಿಸಿತು. ನಿರ್ದೇಶಕರಿಗೂ ಹಾಗೇ ಅನಿಸಿದಾಗ, ಪುನಃ ಡಬ್ಬಿಂಗ್ ಮಾಡಿದೆ. ಆ ಬಳಿಕ ನೋಡಿದಾಗ, ಮನಸ್ಸಿಗೆ ಖುಷಿಯಾಯ್ತು. ಈಗ ಆ ಔಟ್‌ಪುಟ್ ನೋಡಿದರೆ, ಮೊದಲಿಗಿಂತ ಚೆನ್ನಾಗಿ ಬಂದಿದೆ ಅನಿಸಿತು. * ಸಿನಿಮಾ ಬಗ್ಗೆ ಅಪ್ಪಾಜಿ ಏನಂತಾರೆ?
ಮೊದಲು ಈ ಅವಕಾಶ ಬಂದಾಗ, ಡ್ಯಾಡಿಗೆ ಚಿತ್ರ ತೋರಿಸಿದೆ. ಚೆನ್ನಾಗಿರುತ್ತೆ, ನೀನು ಮಾಡು ಅಂದ್ರು. ಈ ಚಿತ್ರ ಒಪ್ಪೋಕೆ ಆ ಕಾರಣವೂ ಒಂದು. * ಮುಂದೆ ಒಪ್ಪಿದ ಚಿತ್ರ?
ಸದ್ಯಕ್ಕೆ ಯಾವುದಕ್ಕೂ ಸಹಿ ಮಾಡಿಲ್ಲ. ಫೆಬ್ರವರಿಯಲ್ಲಿ ಹೊಸ ಚಿತ್ರ ಅನೌನ್ಸ್ ಮಾಡ್ತೀನಿ. “ಸಾಹೇಬ’ ಬಳಿಕ ಬಹಳಷ್ಟು ಚಿತ್ರ ಬಂದವು. ಆ ಪೈಕಿ ಹೊಸಬರೇ ಜಾಸ್ತಿ. ಒಳ್ಳೆಯ ಕಥೆ ಕೇಳಿದ್ದೇನೆ. ನಾಲ್ಕು ಕಥೆಗಳನ್ನು ಹಾಗೇ ಇಟ್ಟಿದ್ದೇನೆ. ಈ ಚಿತ್ರದ ನಂತರ ಆ ಬಗ್ಗೆ ಹೇಳ್ತೀನಿ.