Advertisement
ಬೆಂಗಳೂರಿನ ಸಾಹಸ್ ಎನ್‌ಜಿಒ ಸಂಸ್ಥೆ ನೆರವಿನಿಂದ ಬೀಡಿನಗುಡ್ಡೆಯಲ್ಲಿ 4 ಲಕ್ಷ ರೂ. ವೆಚ್ಚದ ಯಂತ್ರ ಸ್ಥಾಪಿಸಿದ್ದು, ನಿತ್ಯ 400 ಕೆ.ಜಿ.ಗಳಷ್ಟು ಒಣ ಕಸವನ್ನು ಬೇರ್ಪಡಿಸಿ ದಾಸ್ತಾನಿಟ್ಟು ಏಲಂ ಹಾಕಲಾಗುತ್ತಿದೆ. ಎರಡು ತಿಂಗಳಿನಿಂದ ಪ್ರತಿದಿನ 10 ಮಂದಿ ಕಸ ವಿಂಗಡಣೆಯಲ್ಲಿ ತೊಡಗಿದ್ದು, ಕಲ್ಮಾಡಿ, ಕೊಡವೂರು, ಮೂಡಬೆಟ್ಟು, ನಿಟ್ಟೂರು, ಕೊಡಂಕೂರು, ಬಡಗಬೆಟ್ಟು, ಬೈಲೂರು, ಗೋಪಾಲಪುರ ವಾರ್ಡ್‌ನಿಂದ ಒಣ ಹಾಗೂ ಹಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ.
ಅಲೆವೂರಿನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿತ್ಯ 65ರಿಂದ 70 ಟನ್‌ಗಳಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್ ಪಾಲು 2ರಿಂದ 3 ಟನ್‌ನಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್ ಪಾಲು 2ರಿಂದ 3 ಟನ್‌ನಷ್ಟಿದ್ದು, ಇದನ್ನು ಪ್ರತ್ಯೇಕಿಸಿದರೆ ಘಟಕದಲ್ಲಿ ಪ್ಲಾಸ್ಟಿಕ್ ಲ್ಯಾಂಡ್ ಫಿಲ್ಲಿಂಗ್ ಸೇರುವುದನ್ನು ತಪ್ಪಿಸಬಹುದು.ಮಾರಾಟ ಮಡಿ ದುಡ್ಡುಗಳಿಸಬಹುದಾಗಿದೆ. ಇಷೇಧಿತ ಪ್ಲಾಸ್ಟಿಕ್ ಬಳಕೆ ತಡೆಗೆ ರಾಷ್ಟ್ರೀಯ ಹಸಿರು ಪೀಠವು 2019ರ ಆ.27ರಂದು ಆದೇಶ ಹೊರಡಿಸಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಕಂಡುಬಂದರೆ ಮೊದಲ ಬಾರಿಗೆ 1ಸಾವಿರ ರೂ., ಎರಡನೇ ಬಾರಿಗೆ 2 ಸಾವಿರ ರೂ.ದಂಡ ವಿಧಿಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿ ಉದ್ದಿಮೆ ಪರವಾನಿಗೆ ರದ್ದುಗೊಳಿಸಿ ಕಾನೂನುಕ್ರಮ ಕೈಗೊಳ್ಳಲು ಅವಕಾಶವಿದೆ.
Related Articles
ಎಂಟು ವಾರ್ಡ್‌ಗಳಲ್ಲಿ ನಡೆಯು ತ್ತಿರುವ ಹಸಿ, ಒಣ ಕಸ ಸಂಗ್ರಹ ಹಾಗೂ ಒಣಕಸ ಪ್ರತ್ಯೇಕಿಸಿ ವಿಲೇವಾರಿ ಮಾಡುವ ಯೋಜನೆ 35 ವಾರ್ಡ್‌ಗಳಿಗೂ ವಿಸ್ತರಣೆಯಾಗಲಿದೆ. ಒಂದೊಂದು ವಾರ್ಡ್‌ಗೆ ಒಂದೊಂದು ವಾಹನ ಖರೀದಿಗೆ ಉದ್ದೇಶಿಸಿದ್ದು, ವ್ಯವಸ್ಥಿತ ತ್ಯಾಜ್ಯ ವಿಲೇವಾರಿ ಮಾಡಲು ಗಮನಹರಿಸಲಾಗುತ್ತಿದೆ.
-ಆನಂದ ಕಲ್ಲೋಳಿಕರ್, ಆಯುಕ್ತರು ಉಡುಪಿ ನಗರಸಭೆ
Advertisement
ಜನರಿಗೆ ಜಾಗೃತಿನಗರಸಭೆ ವ್ಯಾಪ್ತಿಯಲ್ಲಿ 2016ರ ಆಗಸ್ಟ್‌ನಿಂದ 1350 ಕೆ.ಜಿ.ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಸಾಗಾಟ, ಮಾರಾಟದ ಮೇಲೆ ಕ್ರಮಜರಗಿಸಲಾಗುತ್ತಿದೆ. ಎಪಿಎಂಸಿಯ ಬುಧವಾರದ ಸಂತೆ, ಕಲ್ಯಾಣಪುರದ ರವಿವಾರದ ಸಂತೆಯಲ್ಲೂ ಪ್ಲಾಸ್ಟಿಕ್ ನಿಷೇಧ ಜಾರಿ ಜತೆಗೆ ಬಟ್ಟೆ ಚೀಲ ಬಳಕೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಮೆಂಟ್ ಕಾರ್ಖಾನೆಗೆ ರವಾನೆ
ಮರುಬಳಕೆಯಾಗದ ಪ್ಲಾಸ್ಟಿಕ್‌ಗಳನ್ನು ಗುಲ್ಬರ್ಗದ ಸಿಮೆಂಟ್ ಕಾರ್ಖಾನೆಗೆ ರವಾನಿಸುವ ಕೆಲಸ ಫೆ.23ರಿಂದ ಆರಂಭಗೊಂಡಿದ್ದು, ಇದುವರೆಗೆ 41,885ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರವಾನಿಸಲಾಗಿದೆ. -ಪುನೀತ್ ಸಾಲ್ಯಾನ್