Advertisement

ತರಕಾರಿ ಖರೀದಿ-ಮಾರಾಟಕ್ಕೆ ಸಹಕಾರಿ ಸೇತು : ಐವರ್ನಾಡು ಸೊಸೈಟಿ ಉಪಕ್ರಮ

02:19 AM May 26, 2021 | Team Udayavani |

ಪುತ್ತೂರು: ಲಾಕ್‌ಡೌನ್‌ ಕಾರಣ ಊರ ಬೆಳೆಗಾರ ರಿಂದ ತರಕಾರಿ ಖರೀದಿಸಿ, ಹೆಚ್ಚುವರಿಯಾಗಿ ಬಯಲು ಸೀಮೆ ಯಿಂದ ತರಿಸಿ ಸ್ಥಳೀಯವಾಗಿ ಮಾರಾಟ ಮಾಡುವ ಪರಿಕಲ್ಪನೆ ಯನ್ನು ಸುಳ್ಯದ ಐವರ್ನಾಡು ಸಹಕಾರ ಸಂಘ ಜಾರಿಗೆ ತಂದಿದೆ.
ಗ್ರಾಮಕ್ಕೆ ಕೃಷಿ ಪತ್ತಿನ ಸಹಕಾರ ಸಂಘ ಕೊಡು-ಕೊಳ್ಳುವಿಕೆ ಕೇಂದ್ರವಾಗಿದ್ದು ಜನರ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಿದೆ.

Advertisement

ಏನಿದು ಯೋಜನೆ?
ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭ ಐವರ್ನಾಡು ಸಹಕಾರ ಸಂಘವು ಪ್ರಾರಂಭಿಸಿದ ಪ್ರಯತ್ನ ವಿದು. ಊರಿ ನಲ್ಲಿ ಬೆಳೆದ ತರಕಾರಿ ಮಾರಾಟ ಅಥವಾ ಖರೀದಿಗೆ ಗ್ರಾಮಸ್ಥರು ಬೆಳ್ಳಾರೆ ಅಥವಾ ಸುಳ್ಯ ಪೇಟೆಯನ್ನು ನಂಬಿ ದ್ದರು. ಲಾಕ್‌ಡೌನ್‌ ಎದುರಾದಾಗ ಸಹಕಾರ ಸಂಘವು ಊರಿನಲ್ಲಿ ಬೆಳೆದ ತರಕಾರಿಯನ್ನು ಖರೀದಿಸಲು ಮುಂದಾಯಿತು. ಜತೆಗೆ ಬಯಲು ಸೀಮೆ ಯಿಂದ ತರಕಾರಿ ತಂದು ಮಾರಾಟ ಮಾಡಲು ಪ್ರಾರಂಭಿಸಿತು. ಸಹಕಾರ ಸಂಘದ ವಠಾರವೇ ಇದಕ್ಕೆ ಕೇಂದ್ರ. ಈ ಬಾರಿಯೂ ಇದು ಯಶಸ್ವಿಯಾಗಿ ಸಾಗಿದೆ.

ಮನೆ-ಮನೆಗೆ ಪೂರೈಕೆ
ಜನರು ಮನೆಯಿಂದ ಹೊರಬರುವ ಸಂಕಷ್ಟವನ್ನು ತಪ್ಪಿಸು ವುದ ಕ್ಕಾಗಿ ಪ್ರಾರಂಭದಲ್ಲಿ ಪಿಕಪ್‌ನಲ್ಲಿ ಮನೆಮನೆಗೆ ತೆರಳಿ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಈಗ ಬೆಳ್ಳಂಬೆಳಗ್ಗೆಯೇ ಜನರು ಸೊಸೈಟಿ ವಠಾರಕ್ಕೆ ಬಂದು ವ್ಯವಹರಿಸಿ ತೆರಳುತ್ತಿದ್ದಾರೆ.
ಕಳೆದ ವರ್ಷ ಲೌಕ್‌ಡೌನ್‌ ಮುಕ್ತಾಯದ ಬಳಿಕವೂ ಈ ವ್ಯವಹಾರ ಮುಂದುವರಿದಿತ್ತು. ಪ್ರಸ್ತುತ ದಿನಂಪ್ರತಿ ಇಲ್ಲಿ 5 ಸಾವಿರ ರೂ.ಗೂ ಅಧಿಕ ವ್ಯಾಪಾರ ನಡೆಯು ತ್ತದೆ. ಕಡಿಮೆ ದರದಲ್ಲಿ ಉತ್ತಮ ತರಕಾರಿ ದೊರೆಯು ತ್ತಿದೆ. ಮಾರಾಟ, ಖರೀದಿಗಾಗಿ ಓರ್ವ ಸಿಬಂದಿ  ನಿಯೋಜಿಸಲಾಗಿದೆ ಎನ್ನುತ್ತಾರೆ ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ರವಿಪ್ರಸಾದ್‌ ಚೆಮೂ°ರು.

ಲಾಕ್‌ಡೌನ್‌ನಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ತರಕಾರಿ ಬೆಳೆದವರಿಗೆ ನಷ್ಟ ಉಂಟಾಗುತ್ತಿರುವುದನ್ನು ಹಾಗೂ ತರಕಾರಿಗೆ ಗ್ರಾಮಸ್ಥರು ಪೇಟೆಗೆ ಹೋಗಬೇಕಾದ ಅನಿ ವಾರ್ಯ ವನ್ನು ಮನಗಂಡು ಸ್ವತಃ ಸಹಕಾರ ಸಂಘವೇ ಖರೀದಿ- ಮಾರಾಟ ಪ್ರಾರಂಭಿಸಿತು. ತಾಲೂಕಿನಲ್ಲಿ ಮೊದಲ ಬಾರಿಗೆ ಈ ಪರಿಕಲ್ಪನೆಯ ಅನುಷ್ಠಾನವಾಗಿದ್ದು, ಯಶಸ್ವಿಯಾಗಿದೆ.
– ಎಸ್‌.ಎನ್‌. ಮನ್ಮಥ, ಐವರ್ನಾಡು ಸಹಕಾರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next