ಚಿಕ್ಕಮಗಳೂರು: ಕಳೆದ ಕೆಲವು ದಶಕಗಳಿಂದ ಕಾಫಿನಾಡಿಗರ ಜೀವನದ ಪ್ರಮುಖ ಅಂಗವಾಗಿದ್ದ ಸಹಕಾರ ಸಾರಿಗೆಗೆ ಇಂದು ಅಧಿಕೃತವಾಗಿ ಬೀಗ ಬಿದ್ದಿದೆ. ಜಿಲ್ಲಾಧಿಕಾರಿಯವರ ಆದೇಶದಂತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಇಂದು ಜಪ್ತಿ ಮಾಡಲಾಯಿತು.
72 ಬಸ್ ಗಳನ್ನು ಹೊಂದಿದ್ದ ಸಹಕಾರ ಸಾರಿಗೆ ಸಂಸ್ಥೆ ಕಳೆದ ಒಂದೂವರೆ ವರ್ಷದ ಹಿಂದೆ ನಷ್ಟದಿಂದ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಶ್ರೀರಾಮ್ ಟ್ರಾನ್ಸ್ ಪೋರ್ಟ್ ಲಿ. ನಿಂದ ಸಹಕಾರ ಸಂಘ ಒಂದು ಕೋಟಿ 10 ಲಕ್ಷ ಸಾಲ ಪಡೆದಿತ್ತು. ಬಡ್ಡಿ ಸೇರಿ ಒಂದು ಕೋಟಿ 31 ಲಕ್ಷ ಕಟ್ಟಬೇಕಿತ್ತು. ಆದರೆ ಈ ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗುತ್ತಿದೆ.
ಇದನ್ನೂ ಓದಿ:ತೌಕ್ತೇ ಚಂಡಮಾರುತ ಅಬ್ಬರ: ನೌಕಾಪಡೆಯಿಂದ ಬಾರ್ಜ್ ನಲ್ಲಿ ಸಿಲುಕಿದ್ದ 132 ಮಂದಿ ರಕ್ಷಣೆ
ಸಹಕಾರ ಸಾರಿಗೆ ಸಂಘ ಸಂಕಷ್ಟದಲ್ಲಿ ಸಿಲುಕಿದಾಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಒಂದು ವರ್ಷದಿಂದ ಸಾಲ ಕಟ್ಟದ ಹಿನ್ನೆಲೆಯಲ್ಲಿ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಜಿಲ್ಲಾಧಿಕಾರಿ ಮೊರೆ ಹೋಗಿತ್ತು. ಇದೀಗ ಜಿಲ್ಲಾಧಿಕಾರಿ ರಮೇಶ್ ಅವರ ಆದೇಶದ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ನಾವು ಯಶಸ್ಸು ಕಾಣಬೇಕಾದರೆ ಬಿಜೆಪಿಯಂತೆ ದೊಡ್ಡದಾಗಿ ಯೋಚಿಸಬೇಕು: ಹಿರಿಯ ಕಾಂಗ್ರೆಸ್ ನಾಯಕ
72 ಬಸ್ ಗಳು, 200 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿದ್ದ ಟಿಸಿಎಸ್ ಸಂಸ್ಥೆಗೆ ಇಂದು ಬೀಗ ಹಾಕಲಾಗಿದೆ. ಮಲೆನಾಡಿನ ಹಳ್ಳಿ ಹಳ್ಳಿಯ ಜನರ ಭಾವನೆಗಳಿಗೆ ಜೊತೆಯಾಗಿದ್ದ ಚಿಕ್ಕಮಗಳೂರಿನ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಇತಿಹಾಸ ಸೇರಿದೆ.